AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakshana Serial: ಎಚ್ಚರಗೊಂಡ ನಿಧಿ ಪುಟ್ಟ, ಶ್ವೇತಾಳ ಗ್ರಹಚಾರ ಬಿಡಿಸಿದ ನಕ್ಷತ್ರ

ಇದೆಲ್ಲಾ ಶ್ವೇತಾಳದ್ದೇ ಕುತಂತ್ರ ಎಂಬುದು ನಕ್ಷತ್ರಳಿಗೆ ಗೊತ್ತಾಗಿದೆ. ಮಗಳಿಗೆ ಹೀಗೆ ಆಯಿತಲ್ಲಾ ಎಂದು ಶೌರ್ಯ ನಕ್ಷತ್ರಳ ಮೇಲೆ ಕೂಗಾಡಿ ಕೋಣೆಯ ಹೊರಗೆ ಹೋಗುವಂತೆ ಹೇಳುತ್ತಾನೆ. ಇದರಲ್ಲಿ ನನ್ನದೇನು ತಪ್ಪಿಲ್ಲ, ನಾನು ಒಂದೇ ಮಾತ್ರೆ ಹಾಕಿದ್ದು ಭಾವ ಅಂತ ನಕ್ಷತ್ರ ಕೇಳಿಕೊಳ್ಳುತ್ತಾಳೆ.

Lakshana Serial: ಎಚ್ಚರಗೊಂಡ ನಿಧಿ ಪುಟ್ಟ, ಶ್ವೇತಾಳ ಗ್ರಹಚಾರ ಬಿಡಿಸಿದ ನಕ್ಷತ್ರ
Lakshana Serial
TV9 Web
| Edited By: |

Updated on:Nov 16, 2022 | 9:55 AM

Share

ಧಾರಾವಾಹಿ: ಲಕ್ಷಣ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ನಕ್ಷತ್ರ ಹಾಲಿನಲ್ಲಿ ಜ್ವರದ ಮಾತ್ರೆ ಹಾಕಿ ನಿಧಿಪುಟ್ಟನಿಗೆ ಕುಡಿಸಿದ್ದಾಳೆ. ಇದರಿಂದ ಮೆಡಿಸಿನ್ ಹೈಡೊಸೆಜ್ ಆಗಿ ಮಗು ಪ್ರಜ್ಞೆ ತಪ್ಪಿ ಮಲಗಿತ್ತು. ಆದ ಅವಾಂತರಕ್ಕೆಲ್ಲ ನಕ್ಷತ್ರಳೆ ಕಾರಣವೆಂದು ಮನೆಯವರಿಂದ ಆಕೆ ಬೈಗುಳ ತಿನ್ನಬೇಕಾಯಿತು.

ಇದೆಲ್ಲಾ ಶ್ವೇತಾಳದ್ದೇ ಕುತಂತ್ರ ಎಂಬುದು ನಕ್ಷತ್ರಳಿಗೆ ಗೊತ್ತಾಗಿದೆ. ಮಗಳಿಗೆ ಹೀಗೆ ಆಯಿತಲ್ಲಾ ಎಂದು ಶೌರ್ಯ ನಕ್ಷತ್ರಳ ಮೇಲೆ ಕೂಗಾಡಿ ಕೋಣೆಯ ಹೊರಗೆ ಹೋಗುವಂತೆ ಹೇಳುತ್ತಾನೆ. ಇದರಲ್ಲಿ ನನ್ನದೇನು ತಪ್ಪಿಲ್ಲ, ನಾನು ಒಂದೇ ಮಾತ್ರೆ ಹಾಕಿದ್ದು ಭಾವ ಅಂತ ನಕ್ಷತ್ರ ಕೇಳಿಕೊಳ್ಳುತ್ತಾಳೆ. ಇದರಿಂದ ಇನ್ನಷ್ಟು ಕೋಪಗೊಂಡ ಶೌರ್ಯ, ನಿನ್ನ ಹೆಂಡತಿಯನ್ನು ನೀನೆ ಹೊರಗೆ ಹೋಗಲು ಹೇಳುತ್ತೀಯಾ ಭೂಪತಿ. ಇಲ್ಲಂದ್ರೆ ನನ್ನಿಂದ ಸರಿಯಾಗಿ ಬೈಸಿಕೊಳ್ಳುತ್ತಾಳೆ ಎಂದು ಹೇಳುತ್ತಾನೆ. ನಕ್ಷತ್ರ ತಪ್ಪು ಮಾಡಿದ್ದೀಯಾ ಅಲ್ವ ನೀನು ಸುಮ್ಮನೆ ನಿಲ್ಲು, ಏನು ಮಾತನಾಡಬೇಡ ಎಂದು ಭೂಪತಿ ಹೇಳುತ್ತಾನೆ.

ಇದನ್ನೆಲ್ಲವನ್ನು ದೂರದಿಂದಲೇ ನೋಡುತ್ತಾ ನಿಂತಿದ್ದ ಶ್ವೇತಾ ತಾನು ಮಾಡಿದ ಪ್ಲಾನ್ ವರ್ಕ್ ಆಗಿದೆ ತುಂಬಾ ಖುಷಿ ಪಡುತ್ತಾಳೆ. ನನ್ನಿಂದ ಮಗುವಿಗೆ ಈ ಪರಿಸ್ಥಿತಿ ಬಂದಲ್ಲ ಎಂದು ಅಳುತ್ತಾ ನಕ್ಷತ್ರ ಕೋಣೆಯಿಂದ ಹೊರಗೆ ಹೋಗುತ್ತಾಳೆ. ಹೊರಗೆ ಹೋದವಳು ದೇವರ ಕೋಣೆ ಬಳಿ ಕುಳಿತು ನನಗೆ ಎಲ್ಲರು ಬೈದ್ರು ಅಂತ ಬೇಜಾರಿಲ್ಲ, ಆದರೆ ನಿಧಿ ಪುಟ್ಟನನ್ನು ಆ ಪರಿಸ್ಥಿತಿಯಲ್ಲಿ ನೋಡಲು ಮಾತ್ರ ನನ್ನಿಂದ ಆಗುತ್ತಿಲ್ಲ. ಮಗು ಆದಷ್ಟು ಬೇಗ ಎಚ್ಚರವಾಗುವಂತೆ ಮಾಡು ದೇವ್ರೆ ಎಂದು ಹೇಳಿ ಜೋರಾಗಿ ಅಳುತ್ತಾಳೆ. ಹೀಗೆ ಅಳುತ್ತಿರುವಾಗ ಹಾಲಿನಲ್ಲಿ ಇನ್ನೊಂದು ಮಾತ್ರೆಯನ್ನು ಹಾಕಿದ್ದು ಶ್ವೇತಾ ಅನ್ನುವಂತಹದ್ದು ಗೊತ್ತಾಗುತ್ತದೆ.

ತನ್ನ ಕಾರ್ಯ ಸಾಧನೆಗಾಗಿ ಮಗುವಿನ ಪ್ರಾಣವನ್ನು ತೆಗೆಯಲು ಹಿಂದು ಮುಂದು ನೋಡಿಲ್ಲ, ಎಂಥಹ ಪಾಪಿ ಇರಬಹುದು ಅವಳು ಎಂದು ನಕ್ಷತ್ರ ಒಬ್ಬಳೇ ಮಾತನಾಡಿಕೊಳ್ಳುತ್ತಾಳೆ. ಆಗ ಮಯೂರಿ ಬಂದು ನಕ್ಷತ್ರಳಿಗೆ ಸಮಧಾನ ಮಾಡುತ್ತಾ ನೀನು ಅಳಬೇಡ, ನಿಧಿಯ ಬಗ್ಗೆ ನಿನಗೆ ಎಷ್ಟು ಪ್ರೀತಿ ಕಾಳಜಿ ಇದೆ ಎಂಬುದು ನನಗೆ ಗೊತ್ತು, ಉದ್ದೇಶ ಪೂರ್ವಕವಾಗಿ ನೀನೇನು ಮಾಡಿಲ್ಲ, ಮಗು ಆದಷ್ಟು ಬೇಗ ಎಚ್ಚರವಾಗುತ್ತಾಳೆ, ಬೇಜಾರು ಮಾಡಿಕೊಳ್ಳಬೇಡ ಅಂತ ಆಕೆಗೆ ಸಮಾಧಾನ ಮಾಡಿ ಹೋಗುತ್ತಾಳೆ ಮಯೂರಿ. ಇದಾದ ನಂತರ ನಕ್ಷತ್ರ ನೇರವಾಗಿ ಶ್ವೇತಾಳ ಕೋಣೆಗೆ ಹೋಗಿ ಆಕೆ ಮಾಡಿರುವ ತಪ್ಪಿಗೆ ಮುಖಕ್ಕೆ ಚೀಮಾರಿ ಹಾಕಿ, ನಿನಗೆ ಸಿಟ್ಟು ಇರುವಂತಹದ್ದು ನನ್ನ ಮೇಲೆ. ಹಾಗಾಗಿ ನನ್ನ ಜೊತೆ ಗುದ್ದಾಡು. ಅದು ಬಿಟ್ಟು ಮನೆಯವರಿಗೆ ಏನಾದ್ರೂ ತೊಂದರೆ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ. ಇವತ್ತು ನೀನು ಮಾಡಿರುವ ತಪ್ಪಿಗೆ ಯಾವ ಸಾಕ್ಷಿನೂ ಇಲ್ಲ. ಹಾಗಾಗಿ ನಾನೇ ಈ ನೋವನ್ನು ಅನುಭವಿಸುತ್ತೇನೆ.

ಈಗ ಮಗು ಏನಾದರೂ ಎಚ್ಚರವಾಗಲಿಲ್ಲದಿದ್ದರೆ ನಾನೇ ಹೋಗಿ ಪೋಲಿಸ್ ಕಂಪ್ಲೆಟ್ ಕೊಡುತ್ತೇನೆ. ಆಗ ನೀನು ಮಾಡಿದ ತಪ್ಪಿಗೆ ಸಾಕ್ಷಿ ಸಿಗುತ್ತದೆ ಹಾಗೂ ಶಿಕ್ಷೆ ಕೂಡಾ ಆಗುತ್ತದೆ ಎಂದು ಎಚ್ಚರಿಕೆ ಕೊಟ್ಟು ನಕ್ಷತ್ರ ಅಲ್ಲಿಂದ ಹೋಗುತ್ತಾಳೆ. ಎಷ್ಟೇ ರಾತ್ರಿಯಾದರೂ ತಾನು ಮಲಗದೆ ನಿಧಿ ಪುಟ್ಟ ಯಾವಾಗ ಎಚ್ಚರವಾಗುತ್ತಾಲೆ ಎಂದು ಚಡಪಡಿಸುತ್ತಾ ಅತ್ತಿಂದಿತ್ತ ಓಡಾಡುತ್ತಿರುವ ನಕ್ಷತ್ರಳನ್ನು ಕಂಡು ಬಂದು ಮಲಗು ಎಂದು ಭೂಪತಿ ಹೇಳುತ್ತಾನೆ. ಮಗು ಸರಿ ಹೋಗುವವರೆಗೆ ನಾನು ಮಲಗುವುದಿಲ್ಲ ಅಂತ ಹೇಳಿ ನಿಧಿ ಎಚ್ಚರವಾದಳ ಎಂದು ಮಯೂರಿಗೆ ಮೆಸೆಜ್ ಮಾಡುತ್ತಾಳೆ. ನಕ್ಷತ್ರಳ ಮೆಸೆಜ್ ನೋಡಿ ಕೋಣೆಯಿಂದ ಹೊರಬಂದು ಮಗುವಿಗೆ ಎಚ್ಚರವಾಗಿದೆ ಎಂದು ಹೇಳುತ್ತಾಳೆ. ಇದರಿಂದ ಖುಷಿಗೊಂಡು ನಕ್ಷತ್ರ ಓಡಿ ಹೋಗಿ ಮಗು ಜೊತೆ ಮಾತನಾಡಿ ಅತ್ತೇ ಬಿಡುತ್ತಾಳೆ. ಹೀಗೆ ಮಾತನಾಡುತ್ತ ನಕ್ಷತ್ರ ಮನಸ್ಸನ್ನು ಸಮಧಾನ ಮಾಡಿಕೊಳ್ಳುತ್ತಾಳೆ. ಶ್ವೇತಾ ತನ್ನ ಕುತಂತ್ರ ಬುದ್ಧಿಯನ್ನು ಉಪಯೋಗಿಸಿಕೊಂಡು ನಕ್ಷತ್ರಳಿಗೆ ಇನ್ನೇನು ತೊಂದರೆ ಕೊಡುತ್ತಾಳೆ ಎಂಬುದನ್ನು ಮುಂದೆ ನೋಡಬೇಕಾಗಿದೆ.

ಮಧುಶ್ರೀ ಅಂಚನ್

Published On - 9:55 am, Wed, 16 November 22