‘ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ’; ಹರ್ಷನಿಗೆ ವಿಲ್ ವಿಚಾರ ತಿಳಿಸಿದ ವರುಧಿನಿ
ಹರ್ಷ ಹಾಗೂ ವರುಧಿನಿ ಕಚೇರಿಯಿಂದ ತೆರಳಲು ರೆಡಿ ಆಗಿದ್ದರು. ಕಂಪನಿಯೊಂದರ ಕಾಗದ ಪತ್ರಕ್ಕೆ ಹರ್ಷ ಸಹಿ ಮಾಡಬೇಕಿತ್ತು. ಆದರೆ, ಈಗ ಕಂಪನಿ ಆತನ ಹೆಸರಲ್ಲಿ ಇಲ್ಲ. ಎಲ್ಲವೂ ಭುವಿಯ ಕೈಗೆ ಹಸ್ತಾಂತರ ಆಗಿದೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಹರ್ಷ ಹಾಗೂ ಭುವಿ ಮಧ್ಯೆ ಬೆಂಕಿ ಹಚ್ಚಲು ವರುಧಿನಿ ಪ್ಲ್ಯಾನ್ ಮಾಡುತ್ತಿದ್ದಾಳೆ. ಇದಕ್ಕೆ ಆಕೆ ದೊಡ್ಡ ಮಟ್ಟದಲ್ಲಿ ಸಂಚು ರೂಪಿಸುತ್ತಿದ್ದಾಳೆ. ಇದು ವರ್ಕೌಟ್ ಆಗುವ ಸೂಚನೆ ಸಿಕ್ಕಿದೆ. ಹರ್ಷನ ಭೇಟಿ ಮಾಡಲು ಕಚೇರಿಗೆ ಬಂದಿದ್ದ ಭುವಿಯನ್ನು ಹಾಗೆಯೇ ಕಳುಹಿಸಿದ್ದಾಳೆ ವರು. ಈ ಮೂಲಕ ಆಕೆ ಭುವಿಯ ವಿರುದ್ಧದ ದ್ವೇಷವನ್ನು ಮುಂದುವರಿಸಿದ್ದಾಳೆ.
ಭುವಿಗೆ ನೀತಿಪಾಠ
ಭುವಿ ಹಾಗೂ ಆಕೆಯ ತಂಗಿ ಬಿಂದು, ಹರ್ಷನ ಕಚೇರಿಗೆ ಬಂದಿದ್ದರು. ಆದರೆ, ಹರ್ಷನ ಭೇಟಿ ಮಾಡೋಕೆ ಆಗಲೇ ಇಲ್ಲ. ಆತ ಬ್ಯುಸಿ ಇದ್ದಾನೆ ಎನ್ನುವ ಕಾರಣ ನೀಡಿ ವರುಧಿನಿ ಆಕೆಯನ್ನು ಕಳುಹಿಸಿದಳು. ವರುಧಿನಿ ಮಾತನ್ನು ಕೇಳಿ ಭುವಿ ಕೂಡ ಕಚೇರಿಯಿಂದ ಹೊರ ಬಂದಳು. ಆಗ ಬುದ್ಧಿ ಮಾತನ್ನು ಹೇಳಿದ್ದಾಳೆ ಬಿಂದು. ‘ವರು ಅಕ್ಕನ ಮಾತನ್ನು ಕೇಳಿಕೊಂಡು ನೀನು ದಡ್ಡಳಾಗುತ್ತಿದ್ದೀಯಾ. ಆಕೆ ಕ್ರಿಮಿನಲ್. ಮನೆಗೆ ಬಂದು ಎಲ್ಲವನ್ನೂ ಹುಡುಕಾಡಿದ್ದಳು’ ಎನ್ನುವ ಮಾತನ್ನು ರಿವೀಲ್ ಮಾಡಿದ್ದಾಳೆ ಬಿಂದು. ಇದನ್ನು ಕೇಳಿ ಭುವಿಗೆ ಅಚ್ಚರಿ ಆಗಿದೆ.
ಇದೇ ವೇಳೆ ರತ್ನಮಾಲಾ ಕೊಟ್ಟ ಲಕೋಟೆಯನ್ನು ಓಪನ್ ಮಾಡಲು ಕೋರಿದ್ದಾಳೆ ಬಿಂದು. ಅದನ್ನು ಬಿಂದು ಬೈಕ್ನ ಡಿಕ್ಕಿಯಲ್ಲಿ ಹಾಕಿಕೊಂಡು ಬಂದಿದ್ದಳು. ಆದರೆ, ರತ್ನಮಾಲಾ ಮೃತಪಟ್ಟು 11 ದಿನ ಕಳೆಯಲಿ ಎಂಬ ಕಾರಣ ನೀಡಿ ಅದನ್ನು ಓಪನ್ ಮಾಡದೆ ಸುಮ್ಮನೆ ಉಳಿದಿದ್ದಾಳೆ ಭುವಿ. ಆ ಲಕೋಟೆಯಲ್ಲಿ ವಿಲ್ ಪತ್ರ ಇದೆಯೇ ಅಥವಾ ಅದನ್ನು ವರುಧಿನಿ ತೆಗೆದುಕೊಂಡು ಹೋಗಿದ್ದಾಳೆಯೇ ಎಂಬುದು ಸದ್ಯದ ಕುತೂಹಲ.
ಹರ್ಷನಿಗೆ ಅಸಲಿ ವಿಚಾರ ಹೇಳಿದ ವರು
ಹರ್ಷ ಹಾಗೂ ವರುಧಿನಿ ಕಚೇರಿಯಿಂದ ತೆರಳಲು ರೆಡಿ ಆಗಿದ್ದರು. ಕಂಪನಿಯೊಂದರ ಕಾಗದ ಪತ್ರಕ್ಕೆ ಹರ್ಷ ಸಹಿ ಮಾಡಬೇಕಿತ್ತು. ಆದರೆ, ಈಗ ಕಂಪನಿ ಆತನ ಹೆಸರಲ್ಲಿ ಇಲ್ಲ. ಎಲ್ಲವೂ ಭುವಿಯ ಕೈಗೆ ಹಸ್ತಾಂತರ ಆಗಿದೆ. ರತ್ನಮಾಲಾ ಸಾಯುವುದಕ್ಕೂ ಮುನ್ನ ಈ ರೀತಿಯ ವಿಲ್ ಬರೆದಿಟ್ಟು ಹೋಗಿದ್ದಳು. ಇದು ಹರ್ಷನಿಗೆ ಗೊತ್ತಿಲ್ಲ. ವರುಧಿನಿ ಈ ವಿಚಾರವನ್ನು ತಿಳಿದುಕೊಂಡಿದ್ದಾಳೆ. ಹೀಗಾಗಿ ಪರೋಕ್ಷವಾಗಿ ಹರ್ಷನಿಗೆ ಈ ವಿಚಾರ ತಿಳಿಸುವ ಕೆಲಸ ಮಾಡುತ್ತಿದ್ದಾಳೆ.
‘ನಾನು ನಾಳೆ ಈ ಕಾಗದಪತ್ರಕ್ಕೆ ಸಹಿ ಮಾಡುತ್ತೇನೆ’ ಎಂದಿದ್ದಾನೆ ಹರ್ಷ. ಇದಕ್ಕೆ ವರು ಕೊಂಕು ತೆಗೆದಿದ್ದಾಳೆ. ‘ಈ ಕಾಗದಪತ್ರಕ್ಕೆ ನೀವು ಸಹಿ ಹಾಕುವಂತಿಲ್ಲ. ಭುವಿಯನ್ನು ಒಂದು ಮಾತು ಕೇಳಿಕೊಳ್ಳಿ’ ಎಂದು ನೇರವಾಗಿಯೇ ಹೇಳಿದ್ದಾಳೆ. ಆಕೆ ಹೀಗೇಕೆ ಹೇಳಿದಳು ಎಂಬುದು ಹರ್ಷನಿಗೆ ಅರ್ಥವೇ ಆಗಿಲ್ಲ.
‘ಮನೆಯ ವಿಚಾರ ಆದರೆ ಆಕೆಯ ಬಳಿ ಕೇಳುತ್ತಿದ್ದೆ. ಆದರೆ, ಕಂಪನಿಯ ವಿಚಾರವನ್ನು ನಾನೇಕೆ ಅವಳ ಬಳಿ ಕೇಳಲಿ’ ಎಂದು ಪ್ರಶ್ನೆ ಮಾಡಿದ್ದಾನೆ ಹರ್ಷ. ಆತನಿಗೆ ಈ ವಿಚಾರದಲ್ಲಿ ಒಂದು ಅನುಮಾನ ಹುಟ್ಟಿಕೊಂಡಿದೆ. ಕಚೇರಿ ವಿಚಾರದಲ್ಲಿ ವರುಧಿನಿ ಯಾವಾಗಲೂ ಈ ರೀತಿ ಒಗಟು ಒಗಟಾಗಿ ಮಾತನಾಡಿದವಳಲ್ಲ. ಆದರೆ, ಇಂದು ಹೀಗೇಕೆ ಹೆಳಿದಳು ಎನ್ನುವ ಬಗ್ಗೆ ಅನುಮಾನ ಮೂಡಿದೆ.
ಭುವಿ ಚಿಕ್ಕಮ್ಮನಿಗೆ ಅವಮಾನ
ಭುವಿಯ ಚಿಕ್ಕಮ್ಮ ಹಸಿರುಪೇಟೆಯಿಂದ ಬೆಂಗಳೂರಿಗೆ ಬಂದಿದ್ದಾಳೆ. ಇಲ್ಲಿ ಭುವಿಯ ಸಮಾಧಾನ ಮಾಡಬೇಕು ಎಂಬುದು ಆಕೆಯ ಉದ್ದೇಶ ಆಗಿತ್ತು. ಆದರೆ, ಇದಕ್ಕೆ ಭುವಿಯ ಮಾವ ಸುದರ್ಶನ್ ಕೊಂಕು ತೆಗೆದಿದ್ದಾನೆ. ಇಲ್ಲ ಸಲ್ಲದ ಮಾತನ್ನು ಆಡಿ ನೋವು ಮಾಡಿದ್ದಾನೆ. ಇದರಿಂದ ಆಕೆ ಬೇಸರಗೊಂಡು ಮನೆಗೆ ಹೊರಡುವ ನಿರ್ಧಾರಕ್ಕೆ ಬಂದಿದ್ದಾಳೆ.
ಶ್ರೀಲಕ್ಷ್ಮಿ ಎಚ್.
Published On - 7:00 am, Thu, 17 November 22