Lakshana Serial: ಜೈಲಿಂದ ಪರಾರಿಯಾಗಿದ್ದಾನೆ ಮೌರ್ಯ, ಚಂದ್ರಶೇಖರ್ ನಕ್ಷತ್ರಗೆ ಮನದಲ್ಲಿ ಶುರುವಾಗಿದೆ ಭಯ
ನಕ್ಷತ್ರ ಹಾಗೂ ಚಂದ್ರಶೇಖರ್ ಜೀವನದ ನೆಮ್ಮದಿಯನ್ನು ಹಾಳು ಮಾಡುವ ಸಲುವಾಗಿ ಮೌರ್ಯನನ್ನು ಜೈಲಿಂದ ತಪ್ಪಿಸಿಕೊಂಡು ಬರುವಂತೆ ಮಾಡಿದ್ದಾಳೆ ಭಾರ್ಗವಿ. ಶ್ವೇತಾ ಭೂಪತಿಯ ಮನೆಯಲ್ಲಿರುವುದು ಆರತಿಗೆ ಪ್ರತಿದಿನ ಆತಂಕವನ್ನು ಉಂಟು ಮಾಡುತ್ತಿದೆ.
ಧಾರಾವಾಹಿ: ಲಕ್ಷಣ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಶ್ವೇತಾ ಮಾಡಿರುವ ಕುತಂತ್ರ ತಿಳಿದು ಆಕೆಯ ಗ್ರಹಚಾರ ಬಿಡಿಸಿದ್ದಳು ನಕ್ಷತ್ರ. ನಿಧಿ ಪುಟ್ಟನ ಜೀವದ ಜೊತೆಗೆ ಆಟವಾಡುತ್ತಿರುವ ಶ್ವೇತಾಳಿಗೆ ತಕ್ಕ ಪಾಠ ಕಲಿಸುತ್ತಿದ್ದಾಳೆ ನಕ್ಷತ್ರ.
ನಕ್ಷತ್ರ ಹಾಗೂ ಚಂದ್ರಶೇಖರ್ ಜೀವನದ ನೆಮ್ಮದಿಯನ್ನು ಹಾಳು ಮಾಡುವ ಸಲುವಾಗಿ ಮೌರ್ಯನನ್ನು ಜೈಲಿಂದ ತಪ್ಪಿಸಿಕೊಂಡು ಬರುವಂತೆ ಮಾಡಿದ್ದಾಳೆ ಭಾರ್ಗವಿ. ಶ್ವೇತಾ ಭೂಪತಿಯ ಮನೆಯಲ್ಲಿರುವುದು ಆರತಿಗೆ ಪ್ರತಿದಿನ ಆತಂಕವನ್ನು ಉಂಟು ಮಾಡುತ್ತಿದೆ. ನಕ್ಷತ್ರಳಿಗೆ ತೊಂದರೆ ಕೊಡಬಹುದಾ? ಎಂಬ ಚಿಂತೆಯಲ್ಲಿ ನಕ್ಷತ್ರಳಿಗೆನೇ ಫೋನ್ ಮಾಡಿ, ನಿನಗೇನಾದರೂ ಆ ಹಾಳದವಳು ತೊಂದರೆ ಕೊಡುತ್ತಿದ್ದಾಳಾ ಎಂದು ಕೇಳುತ್ತಾಳೆ.
ಹಾಗೇನಿಲ್ಲ ಅದೆಲ್ಲವನ್ನು ನಾನೇ ನಿಭಾಯಿಸುತ್ತೇನೆ. ಅವಳನ್ನು ಸುಮ್ಮನಿರಿಸುವುದು ನನಗೆ ಕಷ್ಟ ಆಗಲ್ಲ ಅಮ್ಮ ಎಂದು ಹೇಳಿ ನಕ್ಷತ್ರ ಫೋನ್ ಕಟ್ ಮಾಡುತ್ತಾಳೆ. ಮಗಳು ಅಲ್ಲಿ ನೆಮ್ಮದಿಯಿಂದ ಇದ್ದಾಳೆ. ಶ್ವೇತಾಳಿಂದ ಆಕೆಗೆ ಅಂತದ್ದೇನು ತೊಂದರೆ ಇಲ್ಲ ಅಂತ ಆರತಿ ಚಂದ್ರಶೇಖರ್ ಹತ್ತಿರ ಹೇಳುತ್ತಾಳೆ. ಈ ಮಾತನ್ನು ಕೇಳಿ ಮಗಳು ಚೆನ್ನಾಗಿದ್ದರೆ ನನಗೆ ಅದೇ ನೆಮ್ಮದಿ ಎಂದು ಚಂದ್ರಶೇಖರ್ ಹೇಳುತ್ತಾರೆ. ಗಂಡ ಹೆಂಡತಿಯ ಮಾತನ್ನು ದೂರದಿಂದಲೇ ನಿಂತು ನೋಡುತ್ತಿದ್ದ ಭಾರ್ಗವಿ, ಅಣ್ಣ ನೀನು ಬದುಕಿರುವವರೆಗೆ ನೆಮ್ಮದಿಯಿಂದ ಇಡಲು ನಾನು ಬಿಡುವುದಿಲ್ಲ. ನೆಮ್ಮದಿ ಎನ್ನುವಂತಹದ್ದು ನೀನು ಸತ್ತ ಮೇಲೆ ಮಾತ್ರ ಎಂದು ಮಾತನಾಡಿಕೊಳ್ಳುತ್ತಾಳೆ.
ಶ್ವೇತಾಳಿಂದ ನಕ್ಷತ್ರಳಿಗೆ ಏನು ಮಾಡಲಾಗುವುದಿಲ್ಲ ಎಂದು ತಿಳಿದ ಭಾರ್ಗವಿ, ನಕ್ಷತ್ರ ಮತ್ತು ಚಂದ್ರಶೇಖರ್ ನೆಮ್ಮದಿ ಕೆಡಿಸಲು ಆ ಮೌರ್ಯನಿಂದ ಮಾತ್ರ ಸಾಧ್ಯ. ಅವನನ್ನು ಜೈಲಿಂದ ಬಿಡುಗಡೆಗೊಳಿಸುವ ಟೈಮ್ ಈಗ ಬಂದಿದೆ. ಹಾಗೇ ಚಂದ್ರಶೇಖರ್ ಇನ್ನು ಮುಂದೆ ನೆಮ್ಮದಿಯಿಂದ ಮಲಗಲು ಸಾಧ್ಯವಿಲ್ಲ ಅಂತ ಹೇಳುತ್ತಾ ಮೌರ್ಯನನ್ನು ಜೈಲಿಂದ ತಪ್ಪಿಸಿಕೊಂಡು ಬರುವಂತೆ ಮಾಡುತ್ತಾಳೆ.
ರಾತ್ರಿಯಾಗುತ್ತಿದ್ದಂತೆ ಪೋಲಿಸ್ ಆಫಿಸರ್ ಭೂಪತಿಗೆ ಕಾಲ್ ಮಾಡಿ ಮೌರ್ಯ ಜೈಲಿನಿಂದ ತಪ್ಪಿಸಿಕೊಂಡು ಹೋಗಿರುವ ವಿಚಾರವನ್ನು ತಿಳಿಸುತ್ತಾರೆ. ಇದನ್ನು ಕೇಳಿ ಭೂಪತಿ ಹಾಗೂ ನಕ್ಷತ್ರ ಇಬ್ಬರಿಗೂ ಎಲ್ಲಿಲ್ಲದ ಆತಂಕವನ್ನು ಉಂಟು ಮಾಡುತ್ತದೆ. ಅವನನ್ನು ಸುಮ್ಮನೆ ಬಿಡಬೇಡಿ, ಖಂಡಿತವಾಗಿಯೂ ಅವನು ನಕ್ಷತ್ರ ಮತ್ತು ಚಂದ್ರಶೇಖರ್ ಪ್ರಾಣಕ್ಕೆ ಕಂಟಕ ತರುತ್ತಾನೆ ಹೇಗಾದರೂ ಆತನನ್ನು ಹುಡುಕಿ ಅರೆಸ್ಟ್ ಮಾಡಿ ಎಂದು ಪೋಲಿಸ್‌ಗೆ ಹೇಳುತ್ತಾನೆ.
ಮೌರ್ಯನ ವಿಷಯ ತಿಳಿದ ಶಕುಂತಳಾದೇವಿ ಹಾಗೂ ಮನೆಯವರಿಗೂ ಭಯ ಉಂಟಾಗುತ್ತದೆ. ಅವನೆಂತಹ ಕ್ರಿಮಿನಲ್ ಇರಬಹುದು, ನಮ್ಮ ತಮ್ಮ ಎಂದು ಯಾಮಾರಿ ಅವನಿಗೆ ಸಹಾಯ ಮಾಡಬಾರದು ಎಂದು ಮೌರ್ಯ ಹೇಳಿದಾಗ ಈ ಸಲ ಕೂಡಾ ಯಾರಾದರೂ ಮೌರ್ಯನಿಗೆ ಸಹಾಯ ಮಾಡುತ್ತಿರಬಹುದು. ಇಲ್ಲಂದ್ರೆ ಅವನು ಜೈಲಿಂದ ತಪ್ಪಿಸಿಕೊಂಡು ಬರಲು ಸಾಧ್ಯನೇ ಇಲ್ಲ. ಅವನಿಗೆ ಸಹಾಯ ಮಾಡುತ್ತಿರುವವರು ಯಾರೆಂಬುದನ್ನು ಮೊದಲು ತಿಳಿಯಬೇಕೆಂದು ಭೂಪತಿ ಹೇಳುತ್ತಾನೆ.
ಇದನ್ನು ಓದಿ: Lakshana Serial: ಎಚ್ಚರಗೊಂಡ ನಿಧಿ ಪುಟ್ಟ, ಶ್ವೇತಾಳ ಗ್ರಹಚಾರ ಬಿಡಿಸಿದ ನಕ್ಷತ್ರ
ಮನೆ ಮಕ್ಕಳ ಪರಿಸ್ಥಿತಿ ಹೀಗಾಯಿತಲ್ಲ ಎನ್ನುತ್ತ ಶಕುಂತಳಾದೇವಿ ಅಳುತ್ತಾ ಕೂರುತ್ತಾರೆ. ಚಂದ್ರಶೇಖರ್‌ಗೆ ಈ ವಿಷಯ ತಿಳಿದು ಗಾಬರಿಯಾಗಿ ನಕ್ಷತ್ರಳನ್ನು ಇನ್ನು ಮುಂದೆ ನೀನು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿ ಭೂಪತಿಗೆ ನಕ್ಷತ್ರಳನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕು ಎಂದು ಹೇಳುತ್ತಾರೆ.
ಈ ಕಡೆ ಜೈಲಿಂದ ತಪ್ಪಿಸಿಕೊಂಡ ಮೌರ್ಯನಿಗೆ ಭಾರ್ಗವಿ ಫೋನ್ ಮಾಡಿ ಧನ್ಯವಾದಗಳನ್ನು ತಿಳಿಸಿದಾಗ ಯಾವ ಕಾರಣಕ್ಕಾಗಿ ನನ್ನನ್ನು ಜೈಲಿಂದ ಬಿಡಿಸಿದ್ದು ಎಂದು ಅವನು ಕೇಳುತ್ತಾನೆ. ನಾನು ತುಂಬಾ ಸ್ವಾರ್ಥಿ ಹಾಗಾಗಿ ಒಂದು ಕಾರಣವನ್ನು ಇಟ್ಟುಕೊಂಡು ನಿನ್ನನ್ನು ಜೈಲಿಂದ ಬಿಡಿಸಿದ್ದೇನೆ. ನಾನು ಹೇಳಿದಾಗ ನೀನು ಸಹಾಯ ಮಾಡಲೇಬೇಕು ಎಂದು ಮೌರ್ಯನಿಗೆ ಹೇಳಿ ಫೋನ್ ಕಟ್ ಮಾಡುತ್ತಾಳೆ.
ಮೌರ್ಯನನ್ನು ಬಿಡಿಸುವ ಅವಶ್ಯಕತೆ ಏನಿತ್ತು ಎಂದು ಮಿಲ್ಲಿ ಕೇಳಿದಾಗ ನಕ್ಷತ್ರ, ಚಂದ್ರಶೇಖರ್‌ಗೆ ತೊಂದರೆ ಕೊಡುವಂತಹ ಚಿಲ್ಲರೆ ಕೆಲಸವನ್ನು ಆ ಬಚ್ಚಾ ಮೌರ್ಯ ಮಾಡಲಿ. ಅದಕ್ಕಾಗಿಯೇ ಅವನನ್ನು ಜೈಲಿಂದ ಬಿಡಿಸಿದ್ದು. ಇನ್ನು ಮುಂದೆ ಆಟ ಶುರು ಅಂತಾ ಹೇಳಿ ಕೂಹಕ ನಗುವನ್ನಾಡುತ್ತಾಳೆ ಭಾರ್ಗವಿ. ಇಷ್ಟು ದಿನ ಕೊಂಚ ನೆಮ್ಮದಿಯಲ್ಲಿದ್ದ ನಕ್ಷತ್ರಳ ಬಾಳಲ್ಲಿ ಇನ್ನಾವ ಬಿರುಗಾಳಿಯನ್ನು ಭಾರ್ಗವಿ ತಂದೊಡ್ಡುತ್ತಾಳೆ ಎಂಬುವುದನ್ನು ಮುಂದೆ ನೋಡಬೇಕಾಗಿದೆ.
ಮಧುಶ್ರೀ ಅಂಚನ್
ಸಿನಿಮಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 am, Thu, 17 November 22