AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakshana Serial: ಮಾಡದ ತಪ್ಪಿಗೆ ಮನೆಯವರ ಮುಂದೆ ತಲೆ ತಗ್ಗಿಸಿದ್ದಾಳೆ ನಕ್ಷತ್ರ

ಮಯೂರಿ ಮತ್ತು ನಕ್ಷತ್ರ ಮಾತ್ರೆಯ ವಿಷಯ ಮಾತನಾಡುವುದು ಶ್ವೇತಾಳ ಕಿವಿಗೆ ಬಿದ್ದು, ಹೇಗಾದರೂ ನಕ್ಷತ್ರಳಿಗೆ ಮನೆಯವರಿಂದ ಬೈಗುಳ ತಿನ್ನಿಸಬೇಕೆಂದು ನಿಧಿ ಪುಟ್ಟಳಿಗೆ ತಯಾರಿಸಿಟ್ಟ ಹಾಲಲ್ಲಿ ಇನ್ನೊಂದು ಮಾತ್ರೆಯನ್ನು ಯಾರಿಗೂ ಗೊತ್ತಿಲ್ಲದಂತೆ ಹಾಕಿ, ಇದನ್ನು ಕುಡಿದರೆ ಆ ಮಗು ಏನು ಸಾಯಲ್ಲ, ಸ್ವಲ್ಪ ಸಮಯ ಎಚ್ಚರ ತಪ್ಪುತ್ತದೆ ಅಷ್ಟೆ ಎಂದು ಶ್ವೇತಾಳ ಕುತಂತ್ರ ನಡೆಸಿದ್ದಾಳೆ.

Lakshana Serial: ಮಾಡದ ತಪ್ಪಿಗೆ ಮನೆಯವರ ಮುಂದೆ ತಲೆ ತಗ್ಗಿಸಿದ್ದಾಳೆ ನಕ್ಷತ್ರ
Lakshana Serial
TV9 Web
| Edited By: |

Updated on: Nov 15, 2022 | 10:28 AM

Share

ಧಾರಾವಾಹಿ: ಲಕ್ಷಣ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಭೂಪತಿ ನಕ್ಷತ್ರ ಜೋಡಿ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ಮೈಮರೆತು ನೀರಿನಲ್ಲಿ ಕುಣಿದಾಡುತ್ತಾರೆ. ದಿನಪೂರ್ತಿ ಖುಷಿಯಿಂದ ಭೂಪತಿಯ ಜೊತೆಗೆ ಕಾಲ ಕಳೆದಿದ್ದಳು ನಕ್ಷತ್ರ.

ಖುಷಿಯಲ್ಲಿದ್ದ ನಕ್ಷತ್ರಳಿಗೆ ಆಘಾತ

ಖುಷಿಯಲ್ಲಿದ್ದ ನಕ್ಷತ್ರಳಿಗೆ ಆಘಾತವಾಗಿದೆ. ತನ್ನದಲ್ಲದ ತಪ್ಪಿಗೆ ಮನೆಯವರಿಂದ ಬೈಗುಳ ತಿನ್ನಬೇಕಾದ ಪರಿಸ್ಥಿತಿ ಬಂದೊದಗಿದೆ. ಹಳೆ ಮಿಸ್ಟ್ರಿ ಮುನಿಯಪ್ಪ, ಖಾಲಿಡಬ್ಬಿಯಾಗಿ ಕಾಲ ಕಳೆದು ನಕ್ಷತ್ರ ಭೂಪತಿ ಮನೆಯ ಒಳಗೆ ಬರುವಾಗಲೇ ಶಕುಂತಳಾದೇವಿ ಅವರನ್ನು ಕಂಡು ನೀನು ತುಂಬಾ ಬದಲಾಗುತ್ತಿದ್ದೀಯಾ ಭೂಪತಿ, ಹುಷಾರಾಗಿರೂ ಎಂದು ಎಚ್ಚರಿಕೆ ನೀಡುತ್ತಾರೆ.

ಅಮ್ಮನ ಮಾತಿಗೆ ತಲೆಯಾಡಿಸುತ್ತಾ ಒಳಗಡೆ ಹೋಗುತ್ತಾನೆ. ಆತನೊಂದಿಗೆ ನಕ್ಷತ್ರ ಕೂಡಾ ಹೋಗುತ್ತಾಳೆ. ಇದಾದ ಬಳಿಕ ಫ್ರೆಶ್‌ಅಪ್ ಆಗಿ ಮಯೂರಿಯ ಜೊತೆ ಮಾತನಾಡಲು ಆಕೆಯ ಕೋಣೆಯೊಳಗೆ ನಕ್ಷತ್ರ ಬರುವಾಗ ನಿಧಿ ಪುಟ್ಟ ಸಪ್ಪಗೆ ಮಲಗಿರುವುದನ್ನು ನಕ್ಷತ್ರ ನೋಡುತ್ತಾಳೆ. ಮಗುವಿನ ಜೊತೆ ಮಾತನಾಡಿ ಮೈ ಮುಟ್ಟುವಾಗ ಮಗುವಿಗೆ ಜ್ವರ ಬಂದಿದೆ ಎಂದು ನಕ್ಷತ್ರಳ ಅರಿವಿಗೆ ಬರುತ್ತೆ. ಇದನ್ನು ಮಯೂರಿಯ ಬಳಿಯೂ ಹೇಳುತ್ತಾಳೆ. ಮೊದಲಿಗೆ ಮಯೂರಿ ಗಾಬರಿಯಾಗುತ್ತಾಳೆ. ಆಗ ನಕ್ಷತ್ರ ಆಕೆಯನ್ನು ಸಮಾಧಾನ ಪಡಿಸಿ ನಿಧಿ ಪುಟ್ಟಗೆ ಹಾಲಿನಲ್ಲಿ ಜ್ವರದ ಮಾತ್ರೆ ಹಾಕಿ ಕೊಡುತ್ತೇನೆ. ಅದನ್ನು ಕುಡಿದರೆ ಎಲ್ಲ ಕಮ್ಮಿ ಆಗುತ್ತೇ ಅಂತ ಹೇಳಿ ಮಾತ್ರೆ ತರಲು ಆಕೆಯ ಕೋಣೆಗೆ ಬಂದು ಭೂಪತಿಯ ಬಳಿ ಜ್ವರದ ಮಾತ್ರೆ ಯಾವುದೆಂದು ಕೇಳಿ ತೆಗೆದುಕೊಂಡು ಸಿದಾ ಅಡುಗೆ ಕೋಣೆಯ ಕಡೆ ಹೋಗಿ ಹಾಲು ಬಿಸಿ ಮಾಡಿ ಅದಕ್ಕೆ ಮಾತ್ರೆ ಹಾಕಿ ನಿಧಿ ಪುಟ್ಟನಿಗೆ ಕುಡಿಸುತ್ತಾಳೆ.

ಹಾಗೆ ಮಗುವನ್ನು ಮಲಗಿಸಿ ಮಯೂರಿಯ ಜೊತೆ ಸ್ವಲ್ಪ ಹೊತ್ತು ಮಾತನಾಡಿ ನಕ್ಷತ್ರ ತನ್ನ ಕೋಣೆಗೆ ಬಂದು ಮಲಗುತ್ತಾಳೆ. ಸ್ವಲ್ಪ ಹೊತ್ತಿನ ಬಳಿಕ ಭೂಪತಿಯ ಕೋಣೆಯ ಬಾಗಿಲು ಬಡಿಯುತ್ತಾ ಭೂಪತಿ ನಕ್ಷತ್ರ ಅಂತ ಜೋರಾಗಿ ಕೂಗಿದಾಗ ಗಾಬರಿಯಿಂದ ಓಡಿ ಬಂದ ನಕ್ಷತ್ರ ಹಾಗೂ ಭೂಪತಿ ಏನಾಯಿತೆಂದು ಕೇಳಿದಾಗ ನಿಧಿ ಪುಟ್ಟ ಎಚ್ಚರವಾಗುತ್ತಿಲ್ಲ ಎಂದು ಅಳುತ್ತಾ ಹೇಳುತ್ತಾಳೆ. ಆಗ ಮನೆಯವರೆಲ್ಲರೂ ಹೋಗುತ್ತಾರೆ. ಡಾಕ್ಟರ್ ಬಂದು ಚೆಕ್ ಅಪ್ ಮಾಡಿದಾಗ ಗೊತ್ತಾಗುತ್ತೆ ಮೆಡಿಸನ್ ಓವರ್ ಡೋಸ್ ಆಗಿದೆ ಎಂದು.

ಯಾವ ಮಾತ್ರೆ ಎಷ್ಟು ಕೊಟ್ರಿ ಎಂದು ಡಾಕ್ಟರ್ ಕೇಳಿದಾಗ ನಾನೇ ಕೊಟ್ಟಿದ್ದು, ಒಂದೇ ಒಂದು ಮಾತ್ರೆ ಹಾಲಿಗೆ ಹಾಕಿ ಕೊಟ್ಟಿದ್ದೇನೆ ಎಂದು ಹೇಳಿ ಮಾತ್ರೆ ಕವರ್ ಡಾಕ್ಟರ್‌ಗೆ ಕೊಡುವಾಗ ಅದರಲ್ಲಿ ಎರಡು ಮಾತ್ರೆ ಇರಲಿಲ್ಲ. ಇದನ್ನು ನೋಡಿ ನಕ್ಷತ್ರಳಿಗೆ ಗಾಬರಿಯಾಗುತ್ತದೆ. ನಾನು ಒಂದೇ ಮಾತ್ರೆ ಹಾಲಿಗೆ ಹಾಕಿದ್ದಲ್ವ, ಇಲ್ಲಿ ನೋಡಿದ್ರೆ ಎರಡು ಮಾತ್ರೆ ಕಾಣಿಸುತ್ತಿಲ್ಲ, ಏನಾಗಿರಬಹುದು ಎಂದು ಯೋಚಿಸಿರುತ್ತಾಳೆ.

ನಕ್ಷತ್ರಳ ಚಡಪಡಿಕೆಯನ್ನು ಅಲ್ಲೇ ದೂರದಲ್ಲಿ ನಿಂತು ನೋಡುತ್ತಾ ಕಿರು ನಗೆಯನ್ನು ಬೀರುತ್ತಾ ಶ್ವೇತಾ ತಾನು ಮಾಡಿರುವ ಕುತಂತ್ರವನ್ನು ನೆನೆಯುತ್ತಾಳೆ. ಅಂದರೆ ಇದಕ್ಕೆಲ್ಲಾ ಕಾರಣನೇ ಶ್ವೇತಾ. ಮಯೂರಿ ಮತ್ತು ನಕ್ಷತ್ರ ಮಾತ್ರೆಯ ವಿಷಯ ಮಾತನಾಡುವುದು ಶ್ವೇತಾಳ ಕಿವಿಗೆ ಬಿದ್ದು, ಹೇಗಾದರೂ ನಕ್ಷತ್ರಳಿಗೆ ಮನೆಯವರಿಂದ ಬೈಗುಳ ತಿನ್ನಿಸಬೇಕೆಂದು ನಿಧಿ ಪುಟ್ಟಳಿಗೆ ತಯಾರಿಸಿಟ್ಟ ಹಾಲಲ್ಲಿ ಇನ್ನೊಂದು ಮಾತ್ರೆಯನ್ನು ಯಾರಿಗೂ ಗೊತ್ತಿಲ್ಲದಂತೆ ಹಾಕಿ, ಇದನ್ನು ಕುಡಿದರೆ ಆ ಮಗು ಏನು ಸಾಯಲ್ಲ, ಸ್ವಲ್ಪ ಸಮಯ ಎಚ್ಚರ ತಪ್ಪುತ್ತದೆ ಅಷ್ಟೆ. ಈ ನಕ್ಷತ್ರಳಿಗೆ ಆ ಮಯೂರಿ ಸಪೋರ್ಟ್ ಇದೆ ಎಂದು ಹಾರಾಡುತ್ತಾಳೆ ಅಲ್ವ, ಈಗ ಅದು ಕೂಡಾ ಇರಲ್ಲ ಎಂದು ಹೇಳಿ ನಗುತ್ತಾ ಬರುತ್ತಾಳೆ.

ಈ ಘಟನೆಗೆ ಮೂಲ ಕಾರಣ ಶ್ವೇತಾ. ಆದರೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾಳೆ ನಕ್ಷತ್ರ. ಪೃಥ್ವಿ, ಶಕುಂತಳಾದೇವಿ ಹಾಗೂ ಭೂಪತಿ ಈಕೆಯದ್ದೆ ಬೇಜವಬ್ದಾರಿ ಎಂದು ನಕ್ಷತ್ರಳಿಗೆ ಕ್ಲಾಸ್ ತಗೊಳುತ್ತಾರೆ. ಯಾವುದೇ ತಪ್ಪು ಮಾಡದೆ ನಕ್ಷತ್ರ ಎಲ್ಲರ ಕಣ್ಣಲ್ಲೂ ಕೆಟ್ಟವಳಾಗಿದ್ದಾಳೆ. ತನ್ನ ಕಾರ್ಯ ಸಾಧನೆಗಾಗಿ ಮಗುವಿನ ಪ್ರಾಣಕ್ಕೂ ಕುತ್ತು ತರಲು ಹಿಂಜರಿಯದ ಶ್ವೇತಾಳ ಕ್ರೂರತನಕ್ಕೆ ಅದು ಯಾವಾಗ ಬ್ರೇಕ್ ಬೀಳುತ್ತೋ, ನಕ್ಷತ್ರಳದ್ದು ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮನೆಯವರಿಗೆಲ್ಲ ಯಾವಾಗ ಗೊತ್ತಾಗುತ್ತದೋ ಎಂದು ಕಾದು ನೋಡಬೇಕಾಗಿದೆ.

ಮಧುಶ್ರೀ ಅಂಚನ್

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್