ಸಂಜು ರಿವೀಲ್ ಮಾಡಿದ ವಿಚಾರ ಕೇಳಿ ಶಾಕ್ ಆದ ಅನು ಸಿರಿಮನೆ
ಇನ್ಕಮ್ ಟ್ಯಾಕ್ಸ್ಗೆ ಸಂಬಂಧಿಸಿದ ಫೈಲ್ಗಳನ್ನು ನೀಡಿ ಅದನ್ನು ಪರಿಶೀಲಿಸುವಂತೆ ಸಂಜುಗೆ ಮೀರಾ ಹೆಗ್ಡೆ ಸೂಚನೆ ನೀಡಿದ್ದಳು. ಈ ಫೈಲ್ಗಳನ್ನು ಆತ ಕೂಲಂಕುಶವಾಗಿ ವಿಚಾರಣೆ ಮಾಡಿದ್ದ. ಈ ವೇಳೆ ಆತನಿಗೆ ಕೆಲವು ಹಗರಣಗಳು ಗಮನಕ್ಕೆ ಬಂದಿದ್ದವು.
ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ರಾಜ ನಂದಿನಿ ವಿಲಾಸಕ್ಕೆ ಸಂಜು (ವಿಶ್ವ) ಪತ್ನಿ ಆರಾಧನಾಳ ಆಗಮನ ಆಗಿದೆ. ಈ ವಿಚಾರದಲ್ಲಿ ಆತನಿಗೆ ಸಂತಸ ಇಲ್ಲ. ಮತ್ತೊಂದು ಕಡೆ ವರ್ಧನ್ ಕಂಪನಿಯ ಕೆಲ ಪ್ರಮುಖ ಹಗರಣಗಳನ್ನು ಸಂಜು ರಿವೀಲ್ ಮಾಡುತ್ತಿದ್ದಾನೆ. ಈ ಬಗ್ಗೆ ಆತನಿಗೆ ಹಲವು ವಿಚಾರಗಳು ತಿಳಿದಿವೆ. ಆದರೆ, ಈ ಬಗ್ಗೆ ಮೀರಾ ಹೆಗ್ಡೆ ಯಾವುದೇ ವಿಚಾರವನ್ನು ಕಿವಿಯ ಮೇಲೆ ಹಾಕಿಕೊಳ್ಳುತ್ತಿಲ್ಲ.
ಶಾಕ್ ಆದ ಅನು
ಇನ್ಕಮ್ ಟ್ಯಾಕ್ಸ್ಗೆ ಸಂಬಂಧಿಸಿದ ಫೈಲ್ಗಳನ್ನು ನೀಡಿ ಅದನ್ನು ಪರಿಶೀಲಿಸುವಂತೆ ಸಂಜುಗೆ ಮೀರಾ ಹೆಗ್ಡೆ ಸೂಚನೆ ನೀಡಿದ್ದಳು. ಈ ಫೈಲ್ಗಳನ್ನು ಆತ ಕೂಲಂಕುಶವಾಗಿ ವಿಚಾರಣೆ ಮಾಡಿದ್ದ. ಈ ವೇಳೆ ಆತನಿಗೆ ಕೆಲವು ಹಗರಣಗಳು ಗಮನಕ್ಕೆ ಬಂದಿದ್ದವು. ಕಳೆದ ವರ್ಷ ಟ್ಯಾಕ್ಸ್ ತುಂಬಿದ್ದ ಕೆಲ ಪ್ರಾಪರ್ಟಿಗಳು ಈ ಬಾರಿ ವರ್ಧನ್ ಕಂಪನಿಯ ಅಡಿಯಲ್ಲಿ ಇರಲಿಲ್ಲ. ಇದು ಯಾರ ಕೈ ಸೇರಿತು ಮತ್ತು ಹೇಗೆ ಸೇರಿತು ಎನ್ನುವ ಅನುಮಾನ ಅವನಿಗೆ ಮೂಡಿದೆ. ಈ ವಿಚಾರವನ್ನು ಆತ ಮೀರಾ ಹೆಗ್ಡೆ ಹತ್ತಿರ ಮಾತನಾಡಿದ್ದ. ಆದರೆ, ಆಕೆ ಇದನ್ನು ಅಷ್ಟು ಗಂಭೀರವಾಗಿ ಸ್ವೀಕರಿಸಿಲ್ಲ.
ಅನು ಬಳಿ ಈ ವಿಚಾರವಾಗಿ ಮಾತನಾಡಿದ್ದಾನೆ ಸಂಜು. ಇದನ್ನು ಆರಂಭದಲ್ಲಿ ನಂಬೋಕೆ ಅನು ನಿರಾಕರಿಸಿದ್ದಾಳೆ. ಆದರೆ, ಅದನ್ನು ಪರಿಶೀಲಿಸಿದಾಗ ಅಸಲಿ ವಿಚಾರ ಗೊತ್ತಾಗಿದೆ. ವರ್ಧನ್ ಕಂಪನಿಯ ಅನೇಕ ಪ್ರಾಪರ್ಟಿಗಳು ಕೈ ತಪ್ಪಿ ಹೋಗಿವೆ ಎನ್ನುವ ವಿಚಾರ ಆಕೆಗೆ ಗೊತ್ತಾಗಿದೆ. ಸಂಜು ಹೇಳಿದ್ದೆಲ್ಲವೂ ನಿಜ ಎಂದು ತಿಳಿದು ಆಕೆ ಶಾಕ್ ಆಗಿದ್ದಾಳೆ.
ಮಾನ್ಸಿ ಹೊಸ ಐಡಿಯಾ, ಸಂಜುಗೆ ಸಂಕಷ್ಟ
ರಾಜ ನಂದಿನಿ ವಿಲಾಸಕ್ಕೆ ಬಂದಿರುವ ಸಂಜು ಆಕೆಗೆ ರಹಸ್ಯ ವ್ಯಕ್ತಿಯಾಗಿ ಕಾಣುತ್ತಿದ್ದಾನೆ. ಹೇಗಾದರೂ ಮಾಡಿ ಆತನನ್ನು ಹೊರಕ್ಕೆ ಕಳುಹಿಸಬೇಕು ಎಂದು ಆಕೆ ನಿರ್ಧರಿಸಿದ್ದಾಳೆ. ಈಗ ಆಕೆ ಆರಾಧನಾಗೆ ಹೊಸ ಐಡಿಯಾ ನೀಡಿದ್ದಾಳೆ. ಇದರಿಂದ ಸಂಜುಗೆ ಸಂಕಷ್ಟ ಆಗೋದು ಖಚಿತ.
ಸಂಜು ಸರಿಯಾಗಿ ಮಾತನಾಡುವುದಿಲ್ಲ. ಆತ ಮೊದಲಿನ ರೀತಿ ಇಲ್ಲ ಅನ್ನೋದು ಆರಾಧನಾಳ ಕಂಪ್ಲೇಂಟ್. ಇದನ್ನು ಹರ್ಷನ ಹೆಂಡತಿ ಮಾನ್ಸಿ ಬಳಿಯೂ ಆಕೆ ಹೇಳಿಕೊಂಡಿದ್ದಾಳೆ. ಆಗ ಮಾನ್ಸಿ ಒಂದು ಹೊಸ ಐಡಿಯಾ ನೀಡಿದ್ದಾಳೆ. ‘ಈ ಮನೆಯಲ್ಲಿ ಏನೋ ಸಮಸ್ಯೆ ಇದೆ. ಅದರಲ್ಲೂ ಮದುವೆ ಆದ ಯಾರೊಬ್ಬರೂ ಇಲ್ಲಿ ನೆಮ್ಮದಿ ಇಂದ ಇರಲು ಸಾಧ್ಯವೇ ಇಲ್ಲ. ಹೀಗಾಗಿ, ಆದಷ್ಟು ಬೇಗ ನೀವು ಸಂಜುನ ಕರೆದುಕೊಂಡು ಹೋಗಿ’ ಎಂದು ಹೇಳಿದ್ದಾಳೆ ಮಾನ್ಸಿ. ಇದನ್ನು ಕೇಳಿ ಅವಳಿಗೂ ಹೌದು ಎನಿಸಿದೆ. ಈ ವಿಚಾರವನ್ನು ಕೇಳಿ ಹರ್ಷನಿಗೆ ಸಿಟ್ಟು ಬಂದಿದೆ. ಪತ್ನಿ ಮಾನ್ಸಿ ಈ ರೀತಿ ಹೇಳಿದ್ದು ಸರಿ ಅಲ್ಲ ಎಂದು ಆಕೆಗೆ ಅನಿಸಿದೆ.
ಎರಡನೇ ಮದುವೆ ಮಾಡುವ ಆಲೋಚನೆಯಲ್ಲಿ ಸುಬ್ಬು
ಜೋಗ್ತವ್ವ ಬಂದವಳು ಕೆಲ ವಿಚಾರಗಳನ್ನು ಹೇಳಿ ಹೋಗಿದ್ದಳು. ‘ಅನು ಸೌಭಾಗ್ಯ ಅವಳ ಕಣ್ಣ ಎದುರೇ ಇದೆ. ಅದನ್ನು ದೂರ ಮಾಡಿಕೊಳ್ಳಬೇಡ ಎಂದು ಹೇಳು. ಆಕೆಗೆ ರಾಜಯೋಗ ಮತ್ತೆ ಬರುತ್ತದೆ’ ಎಂದು ಜೋಗ್ತವ್ವ ಹೇಳಿದ್ದಳು. ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವ ಅನು ತಂದೆ ಸುಬ್ಬು, ಆಕೆಗೆ ಎರಡನೇ ಮದುವೆ ಮಾಡುವ ಆಲೋಚನೆಗೆ ಬಂದಿದ್ದಾನೆ. ಎರಡನೇ ಮದುವೆ ಮಾಡುವ ಉದ್ದೇಶದಿಂದಲೇ ಜೋಗ್ತವ್ವ ಈ ರೀತಿ ಹೇಳಿದ್ದಾಳೆ ಎಂದು ಆತ ಭಾವಿಸಿದ್ದಾನೆ.
ಶ್ರೀಲಕ್ಷ್ಮಿ ಎಚ್.