‘ನಿಮ್ಮ ಕಥೆ ಕೇಳ್ತಾ ನನ್ನ ಕಥೆ ಮರೆಯಬಹುದು’; ಸಂಜುಗೆ ಅನುವಿನ ಮಾತು
ಆರ್ಯವರ್ಧನ್ ಈಗ ಸಂಜು ಆಗಿ ಎಂಟ್ರಿ ಕೊಟ್ಟಿದ್ದಾನೆ. ಆತನಿಗೆ ನಿಧಾನವಾಗಿ ನೆನಪು ಮರಳುತ್ತಿದೆ. ಈ ಮಧ್ಯೆ ಅನು ಜತೆ ಆತನಿಗೆ ಆಪ್ತತೆ ಹೆಚ್ಚುತ್ತಿದೆ. ಈ ಬಗ್ಗೆ ಅನು ಬಳಿ ಆತ ಹೇಳಿಕೊಂಡಿದ್ದ. ಇದರಿಂದ ಅನು ಸಿಟ್ಟಾಗಿದ್ದಳು.
ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ಸಮಯ: ರಾತ್ರಿ 8.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಆರ್ಯವರ್ಧನ್ ಈಗ ಸಂಜು ಆಗಿ ಎಂಟ್ರಿ ಕೊಟ್ಟಿದ್ದಾನೆ. ಆತನಿಗೆ ನಿಧಾನವಾಗಿ ನೆನಪು ಮರಳುತ್ತಿದೆ. ಈ ಮಧ್ಯೆ ಅನು ಜತೆ ಆತನಿಗೆ ಆಪ್ತತೆ ಹೆಚ್ಚುತ್ತಿದೆ. ಈ ಬಗ್ಗೆ ಅನು ಬಳಿ ಆತ ಹೇಳಿಕೊಂಡಿದ್ದ. ಇದರಿಂದ ಅನು ಸಿಟ್ಟಾಗಿದ್ದಳು.
‘ಜೊತೆ ಜೊತೆಯಲಿ’ ಧಾರಾವಾಹಿ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿಯ ಲೀಡ್ರೋಲ್ ಆರ್ಯವರ್ಧನ್ ಈಗ ಸಂಜು ಆಗಿ ಧಾರಾವಾಹಿಗೆ ಪ್ರವೇಶ ಪಡೆದಿದ್ದಾನೆ. ಅಪಘಾತ ಆಗಿರುವುದರಿಂದ ಆತನಿಗೆ ನೆನಪು ಮಾಸಿದೆ. ಅಷ್ಟೇ ಅಲ್ಲ, ಪ್ಲಾಸ್ಟಿಕ್ ಸರ್ಜರಿ ಮಾಡಿಸಲಾಗಿದೆ. ಈ ಎಲ್ಲಾ ಕಾರಣದಿಂದ ಆತ ಸಂಪೂರ್ಣ ಬದಲಾಗಿದ್ದಾನೆ. ಹೀಗಾಗಿ, ಸಂಜುನ ಗುರುತು ಯಾರಿಗೂ ಸಿಗುತ್ತಿಲ್ಲ. ಈ ಮಧ್ಯೆ ಸಂಜುಗೆ ನೆನಪು ಮರಳಿಸಲು ಅನು ಹರಸಾಹಸ ಪಡುತ್ತಿದ್ದಾಳೆ. ಇಬ್ಬರ ಮಧ್ಯೆ ಆಪ್ತತೆ ಹೆಚ್ಚುತ್ತಿದೆ.
ಸಂಜು ಹಾಗೂ ಅನು ಫ್ಯಾಕ್ಟರಿಗೆ ತೆರಳಿದ್ದರು. ಅನು ಬಗ್ಗೆ ಸಂಜುಗೆ ವಿಶೇಷ ಕಾಳಜಿ ಇದೆ. ಇದನ್ನು ಆತ ಅನೇಕ ಬಾರಿ ವ್ಯಕ್ತಪಡಿಸಲು ಪ್ರಯತ್ನಿಸಿದ್ದಾನೆ. ಈ ಬಾರಿ ಫ್ಯಾಕ್ಟರಿಗೆ ತೆರಳುವಾಗ ಇಬ್ಬರೂ ಒಂದೇ ಕಾರಿನಲ್ಲಿದ್ದರು. ಇದೇ ಸರಿಯಾದ ಅವಕಾಶ ಎಂದು ಆತನು ಅವಳ ಮುಂದೆ ತಾನು ಕ್ಲೋಸ್ ಆಗುತ್ತಿರುವ ಬಗ್ಗೆ ಹೇಳಿಕೊಂಡಿದ್ದ. ಇದನ್ನು ಕೇಳಿ ಅನು ಸಿಟ್ಟಾದಳು. ‘ನಿಮ್ಮನ್ನು ಪ್ರೀತಿಸಿದವಳ ಬಗ್ಗೆ ಹೇಳಿ. ಅದನ್ನು ನಾನು ಕೇಳುತ್ತೇನೆ. ಆದರೆ, ನನ್ನ ಜತೆ ಕ್ಲೋಸ್ ಆಗೋಕೆ ಪ್ರಯತ್ನಿಸಬೇಡಿ. ನೀವು ನಮ್ಮ ಕಚೇರಿಯ ಸಿಬ್ಬಂದಿ ಅಷ್ಟೇ’ ಎಂಬ ಎಚ್ಚರಿಕೆಯನ್ನು ನೀಡಿದ್ದಾಳೆ. ಮತ್ತೊಂದು ಕಡೆ ಸಂಜುನ ಕಂಡು ಆಕೆಗೆ ಮರುಕ ಹುಟ್ಟುತ್ತಿದೆ.
ಸಂಜುಗೆ ಕ್ಲೋಸ್ ಆದ ಅನು
ಅನು ಹಾಗೂ ಸಂಜು ಇಬ್ಬರೂ ಕ್ಲೋಸ್ ಆಗುತ್ತಿದ್ದಾರೆ. ಇಬ್ಬರೂ ಫ್ಯಾಕ್ಟರಿಗೆ ತೆರಳಿದ ಸಂದರ್ಭದಲ್ಲಿ ಸಂಜು ತಾನು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾನೆ. ‘ನನ್ನ ಪ್ರೀತಿಸಿದವಳು ಯಾರು ಎಂಬುದು ನೆನಪಿಲ್ಲ. ಆದರೆ, ಅಪಘಾತಕ್ಕೂ ಮೊದಲು ನಾನು ಅವಳಿಗೆ ಏನೋ ಹೇಳಬೇಕಿತ್ತು. ಆದರೆ, ಅದನ್ನು ಹೇಳಿಲ್ಲ. ನಾವಿಬ್ಬರೂ ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದೆವು ಎಂಬುದಷ್ಟೇ ಗೊತ್ತಿತ್ತು’ ಎಂದು ಹೇಳಿದ್ದಾನೆ. ಇದನ್ನು ಕೇಳಿ ಅನುಗೆ ಮರುಕ ಉಂಟಾಗಿದೆ.
ಆರ್ಯವರ್ಧನ್ಗೆ ಅಪಘಾತ ಆಗುವುದಕ್ಕೂ ಮೊದಲು ಅನು ಜತೆ ಜಗಳ ಮಾಡಿಕೊಂಡಿದ್ದ. ಕಂಪನಿಯಲ್ಲಿ ನಡೆದ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಸಾಕಷ್ಟು ಜಗಳ ಆಗಿತ್ತು. ಈ ವಿಚಾರ ಇತ್ಯರ್ಥ ಆಗುವುದಕ್ಕೂ ಮೊದಲೇ ಆರ್ಯವರ್ಧನ್ಗೆ ಅಪಘಾತವಾಯಿತು. ಈ ಅಪಘಾತದಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಅನು ಭಾವಿಸಿದ್ದಾಳೆ. ಹೀಗಾಗಿ ಸಂಜುವಿನ ಕಥೆ ಆಕೆಗೆ ಬೇಸರ ಆಗಿದೆ. ತನ್ನ ಕಥೆಗೆ ಇದರ ಹೋಲಿಕೆ ಇದೆ ಎಂದು ಅನಿಸಿದೆ. ‘ನಿಮ್ಮ ಕಥೆ ಕೇಳ್ತಾ ನನ್ನ ಕಥೆ ಮರೆಯಬಹುದು’ ಎಂದು ಅನು ಬೇಸರಗೊಂಡಿದ್ದಾಳೆ.
ಸಂಜು ಈಗ ಹರ್ಷನಿಗೆ ಸ್ಪೆಷಲ್
ಹರ್ಷ ಹಾಗೂ ಸಂಜು ಭೇಟಿ ಆಗಿ ಕೆಲವೇ ದಿನಗಳು ಕಳೆದಿವೆ. ಸಂಜು ಆತನಿಗೆ ವಿಶೇಷ ಎನ್ನಿಸುತ್ತಿದ್ದಾನೆ. ಭೇಟಿ ಆದ ಕೆಲವೇ ದಿನಗಳಲ್ಲಿ ಸಂಜುವಿನ ಬಗ್ಗೆ ಆತನಿಗೆ ವಿಶೇಷ ಕಾಳಜಿ ಮೂಡಿದೆ. ಸಂಜು ಬಗ್ಗೆ ಆತ ಒಲವು ತೋರುತ್ತಿರುವುದನ್ನು ನೋಡಿ ಮೀರಾ ಹೆಗ್ಡೆಗೆ ಅನುಮಾನ ಮೂಡಿದೆ. ಇತ್ತ ಝೇಂಡೆ ಸಂಜುನ ವಿಚಾರದಲ್ಲಿ ಸಾಕಷ್ಟು ತನಿಖೆ ನಡೆಸೋಕೆ ಆರಂಭಿಸಿದ್ದಾನೆ. ಮೀರಾ ಹೆಗ್ಡೆಗೆ ಈ ವಿಚಾರ ಇಕ್ಕಟ್ಟಿಗೆ ಸಿಲುಕಿಸುತ್ತಿದೆ.
ಶ್ರೀಲಕ್ಷ್ಮಿ ಎಚ್.