AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೂ ರಶ್ಮಿಕಾ ಹವಾ.. ಬಿಟೌನ್ ನಲ್ಲೂ ಕ್ರೇಜ್ ಹುಟ್ಟಿಸಿದ ಕನ್ನಡತಿ

ಕರುನಾಡಿನ ಕುವರಿ ರಶ್ಮಿಕಾ ಮಂದಣ್ಣ ಬಗ್ಗೆ ಇಡೀ ಇಂಡಿಯಾನೇ ಮಾತನಾಡುತ್ತಿದೆ. ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೂ ಸದ್ಯ ರಶ್ಮಿಕಾಳದ್ದೇ ಹವಾ. ಕನ್ನಡದಲ್ಲಿ ಪೊಗರು.. ತೆಲುಗಿನಲ್ಲಿ ಪುಷ್ಪ ಮತ್ತು ತಮಿಳಿನಲ್ಲಿ ಸುಲ್ತಾನ್‌ ಸಿನಿಮಾ ಮೂಲಕ ರಶ್ಮಿಕಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸದ್ಯ ಸುಲ್ತಾನ್‌ ಟೀಸರ್ ಕೂಡ ರಿಲೀಸ್‌ ಆಗಿದ್ದು, ರಶ್ಮಿಕಾ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೂ ರಶ್ಮಿಕಾ ಹವಾ.. ಬಿಟೌನ್ ನಲ್ಲೂ ಕ್ರೇಜ್ ಹುಟ್ಟಿಸಿದ ಕನ್ನಡತಿ
ರಶ್ಮಿಕಾ ಮಂದಣ್ಣ
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:Jul 03, 2026 | 2:46 PM

Share

ಕರುನಾಡಿನ ಕುವರಿ ರಶ್ಮಿಕಾ ಮಂದಣ್ಣ ಬಗ್ಗೆ ಇಡೀ ಇಂಡಿಯಾನೇ ಮಾತನಾಡುತ್ತಿದೆ. ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೂ ಸದ್ಯ ರಶ್ಮಿಕಾಳದ್ದೇ ಹವಾ. ಕನ್ನಡದಲ್ಲಿ ಪೊಗರು.. ತೆಲುಗಿನಲ್ಲಿ ಪುಷ್ಪ ಮತ್ತು ತಮಿಳಿನಲ್ಲಿ ಸುಲ್ತಾನ್‌ ಸಿನಿಮಾ ಮೂಲಕ ರಶ್ಮಿಕಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸದ್ಯ ಸುಲ್ತಾನ್‌ ಟೀಸರ್ ಕೂಡ ರಿಲೀಸ್‌ ಆಗಿದ್ದು, ರಶ್ಮಿಕಾ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಷ್ಟಕ್ಕೂ ಮೊದಲ ಸಿನಿಮಾದಲ್ಲೇ ಕರುನಾಡ ಕ್ರಶ್‌ ಅನಿಸಿಕೊಂಡಿದ್ರು ನಟಿ ರಶ್ಮಿಕಾ ಮಂದಣ್ಣ. ಆದ್ರೆ ರಶ್ಮಿಕಾ ಮಂದಣ್ಣ ಈಗ ಕೇವಲ ಕರುನಾಡ ಕ್ರಶ್ ಆಗಿ ಮಾತ್ರ ಉಳಿದಿಲ್ಲ. ಯಾಕಂದ್ರೆ ಆಕೆಗೆ ನ್ಯಾಷನಲ್‌ ಕ್ರಶ್ ಅನ್ನೋ ಬಿರುದು ಕೊಟ್ಟಿದೆ.

ರಶ್ಮಿಕಾಗೆ ಬಾಲಿವುಡ್‌ ರೆಡ್‌ ಕಾರ್ಪೆಡ್ ಹೌದು.. ರಶ್ಮಿಕಾ ಮಂದಣ್ಣ ಕನ್ನಡದಿಂದ ಸಿನಿಮಾ ಜರ್ನಿ ಶುರು ಮಾಡಿ. ತೆಲುಗು.. ತಮಿಳಿನಲ್ಲಿ ಮಿಂಚಿ ಈಗ ಬಾಲಿವುಡ್‌ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ ಮಿಷನ್‌ ಮಜ್ನು ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ರಶ್ಮಿಕಾಗೆ ಬಾಲಿವುಡ್‌ ರೆಡ್‌ ಕಾರ್ಪೆಡ್ ಹಾಸಿದೆ. ಅಷ್ಟೇ ಅಲ್ಲ ರಶ್ಮಿಕಾಳಷ್ಟು ಸ್ವೀಟೆಸ್ಟು ಮತ್ಯಾರು ಇಲ್ಲ ಅಂತಿದೆ ಬಿಟೌನ್.

ರಶ್ಮಿಕಾ ತುಂಬಾನೇ ಸ್ವೀಟ್‌ ಪರ್ಸನ್ ಅಂತೆ. ಅವ್ರಷ್ಟು ಸ್ವೀಟ್‌ ಮತ್ಯಾರೂ ಇಲ್ವಂತೆ. ಹೀಗೆ ರಶ್ಮೀಕಾಳನ್ನ ಬಿಟೌನ್ ಹಾಡಿ ಹೊಗಳುತ್ತಿದೆ. ರಶ್ಮಿಕಾ ಇತ್ತೀಚೆಗೆ ಮಿಷನ್‌ ಮಜ್ನು ಸಿನಿಮಾಕ್ಕಾಗಿ ಬಾಲಿವುಡ್‌ಗೆ ತೆರಳಿದ್ರು. ಅಲ್ಲಿಂದ ಅವಸರದಲ್ಲಿ ಏರ್‌ಪೋರ್ಟ್‌ಗೆ ತೆರಳಬೇಕಿತ್ತು. ಆಗ ಬಾಲಿವುಡ್‌ ಮಾಧ್ಯಮಗಳು ಮತ್ತು ಒಂದಷ್ಟು ಅಭಿಮಾನಿಗಳು ರಶ್ಮಿಕಾಳನ್ನ ತಡೆದಿದ್ದಾರೆ. ತಡವಾಗಿದ್ರೂ ರಶ್ಮಿಕಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೇ ಅಲ್ಲಿನ ಜನರಿಗೆ ಇಷ್ಟವಾಗಿರೋದು.

ಸಿನಿಮಾ ಜರ್ನಿ ಎಲ್ಲರಿಗೂ ಅಷ್ಟು ಸುಲಭ ಇರೋದಿಲ್ಲ. ಅದ್ರಲ್ಲೂ ಸೌತ್‌ ಸಿನಿದುನಿಯಾದಿಂದ ಬಾಲಿವುಡ್‌ ಎಂಟ್ರಿಗೆ ಎಷ್ಟೋ ಮಂದಿ ಕಷ್ಟಪಡ್ತಿರುತ್ತಾರೆ. ಆದ್ರೆ ರಶ್ಮಿಕಾ ಮಾತ್ರ ಲಕ್ಕಿ ಗರ್ಲ್. ಬಾಲಿವುಡ್‌ನಲ್ಲೂ ರಶ್ಮಿಕಾಗೆ ಅವಕಾಶ ಸಿಕ್ಕಿದೆ. ಈ ಮೂಲಕ ಬಾಲಿವುಡ್‌ನಲ್ಲೇ ದೊಡ್ಡ ಮಟ್ಟಿಗೆ ಬೆಳೆಯೋ ಸೂಚನೆಯನ್ನ ಕೊಟ್ಟಿದ್ದಾರೆ.

Published On - 6:50 am, Wed, 3 February 21

Follow Us
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ