Amitabh Bachchan: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್​ಗೆ ಶೂಟಿಂಗ್ ವೇಳೆ ಗಂಭೀರ ಗಾಯ

ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್​ ಅವರು ಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Amitabh Bachchan: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್​ಗೆ ಶೂಟಿಂಗ್ ವೇಳೆ ಗಂಭೀರ ಗಾಯ
ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್

Updated on: Mar 06, 2023 | 10:19 AM

ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್​ ಅವರು ಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶೂಟಿಂಗ್ ವೇಳೆ ಬಿದ್ದು ಅಮಿತಾಭ್ ಬಚ್ಚನ್​ ಪಕ್ಕೆಲುಬಿಕೆ ಗಂಭೀರ ಗಾಯವಾಗಿದೆ, ಶೂಟಿಂಗ್ ವೇಳೆ ಬಿದ್ದು ಅಮಿತಾಭ್ ಬಚ್ಚನ್​ ಪಕ್ಕೆಲುಬಿಗೆ ಗಾಯ ‘ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್ ವೇಳೆ ಘಟನೆ ಸಂಭವಿಸಿದೆ.

ಚಿತ್ರೀಕರಣವು ಹೈದರಾಬಾದ್ ಬಳಿ ನಡೆಯುತ್ತಿತ್ತು, ಸದ್ಯ ಮುಂಬೈನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಾಲಿವುಡ್‌ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಎರಡು ಬಾರಿ ಕೋವಿಡ್‌ ಗೆದ್ದಿದ್ದರು. ದೇಹದ ಕೆಲವೊಂದು ಅಂಗಾಂಗಗಳು ವೈಫಲ್ಯವಾಗಿದ್ದವು ಎಂದು ಅಮಿತಾಬ್‌ ಹೇಳಿಕೊಂಡಿದ್ದರು. ಆಗ ಕೆಲವು ಅಂಗಾಂಗಳು ಕೆಲಸ ಮಾಡುತ್ತಿರಲಿಲ್ಲ.‌ ಇದರ ಬಗ್ಗೆ ನಾನು ಹೆಚ್ಚಿಗೆ ಹೇಳಿದರೆ, ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾನೆ ಎಂದು ನೀವು ತಪ್ಪು ತಿಳಿಯಬಹುದು ಎಂದು ಟ್ವೀಟ್ ಮಾಡಿದ್ದರು.

ನಾನು ಇನ್ನು ಜೀವನವೇ ಮುಗಿಯಿತು ಎಂದುಕೊಂಡಿದ್ದೆ. ಆದರೆ ವೈದ್ಯರ ಸತತ ಪ್ರಯತ್ನ, ಅಭಿಮಾನಿಗಳ ಪ್ರೀತಿ, ಆಶಿರ್ವಾದ ನನ್ನನ್ನು ಕಾಪಾಡಿತು. ಅಂಗಾಂಗಳು ಮೊದಲಿನಂತೆ ಕೆಲಸ ಮಾಡದಿದ್ದರೂ, ಸದ್ಯಕ್ಕೆ ಪರವಾಗಿಲ್ಲ ಎಂದು ಅಮಿತಾಬ್‌ ಬರೆದುಕೊಂಡಿದ್ದರು ಆಗ ಅಭಿಮಾನಿಗಳು ಕೂಡ ಕಣ್ಣೀರಿಟ್ಟಿದ್ದರು.

 

 

ಸಿನಿಮಾಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 10:08 am, Mon, 6 March 23