ಬಾಲಿವುಡ್ ಹಿರಿಯ ನಟನ ಮಗ ಡ್ರಗ್ ಕೇಸ್ನಲ್ಲಿ ಅರೆಸ್ಟ್; ವಾಟ್ಸ್ಆ್ಯಪ್ ಮೆಸೇಜ್ ಬಿಚ್ಚಿಡ್ತು ನಿಜ ವಿಚಾರ
ಏಪ್ರಿಲ್ 20ರಂದು ಮುಜಮ್ಮಿಲ್ ಶೇಖ್ ಅವರನ್ನು ಮಾದಕ ವಸ್ತು ನಿಯಂತ್ರಣ ಘಟಕವು ಬಂಧಿಸಿತ್ತು. ಈತನಿಂದ 35 ಗ್ರಾಂ ಡ್ರಗ್ ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಮುಜಮ್ಮಿಲ್ ಮೊಬೈಲ್ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಮುಂಬೈ: ಬಾಲಿವುಡ್ನಲ್ಲಿ ಡ್ರಗ್ ಕೇಸ್ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದೆ. ಡ್ರಗ್ ಕೇಸ್ಗೆ ಸಂಬಂಧಿಸಿದಂತೆ ಅನೇಕರು ವಿಚಾರಣೆಗೆ ಒಳಪಟ್ಟಿದ್ದಾರೆ. ಇನ್ನೂ, ಕೆಲವರನ್ನು ಬಂಧಿಸಲಾಗಿದೆ. ಈಗ ಬಾಲಿವುಡ್ ಹಿರಿಯ ನಟ ದಿಲೀಪ್ ತಾಹಿಲ್ ಮಗ ಧ್ರುವ್ ತಾಹಿಲ್ ಅವರನ್ನು ಮಾದಕ ವಸ್ತು ನಿಯಂತ್ರಣ ಘಟಕವು ಡ್ರಗ್ ಕೇಸ್ನಲ್ಲಿ ಬಂಧಿಸಿದೆ.
ಏಪ್ರಿಲ್ 20ರಂದು ಮುಜಮ್ಮಿಲ್ ಶೇಖ್ ಅವರನ್ನು ಮಾದಕ ವಸ್ತು ನಿಯಂತ್ರಣ ಘಟಕವು ಬಂಧಿಸಿತ್ತು. ಈತನಿಂದ 35 ಗ್ರಾಂ ಡ್ರಗ್ ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಮುಜಮ್ಮಿಲ್ ಮೊಬೈಲ್ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅವರ ವಾಟ್ಸ್ಆ್ಯಪ್ ಪರಿಶೀಲಿಸಿದಾಗ ಧ್ರುವ್ ತಾಹಿಲ್ ಜತೆಗಿನ ಚ್ಯಾಟ್ ಸಿಕ್ಕಿದೆ. ಧ್ರುವ್ ಸಾಕಷ್ಟು ಬಾರಿ ಈತನ ಬಳಿ ಡ್ರಗ್ಸ್ಗೆ ಬೇಡಿಕೆ ಇಟ್ಟಿದ್ದರು ಎನ್ನುವ ವಿಚಾರ ಬಯಲಾಗಿದೆ. ಹೀಗಾಗಿ ಧ್ರುವ್ ಅವರನ್ನು ಬಂಧಿಸಲಾಗಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಎಂದರೆ, ಡ್ರಗ್ಸ್ ಖರೀದಿ ಮಾಡಲು ಮುಜಮ್ಮಿಲ್ ಖಾತೆಗೆ ಧ್ರುವ್ ಸಾಕಷ್ಟು ಬಾರಿ ಹಣ ವರ್ಗಾವಣೆ ಮಾಡಿದ್ದಾರೆ. ಮಾರ್ಚ್ 2019ರಿಂದ ಶೇಖ್ ಜತೆಗೆ ಧ್ರುವ್ ಸಂಪರ್ಕಕ್ಕೆ ಬಂದಿದ್ದರು. ನಂತರ ನಿರಂತರವಾಗಿ ಡ್ರಗ್ ಪಡೆಯುತ್ತಿದ್ದರು ಎಂದು ಮಾದಕ ವಸ್ತು ನಿಯಂತ್ರಣ ಘಟಕ ಸ್ಪಷ್ಟಪಡಿಸಿದೆ. ಸದ್ಯ ಧ್ರುವ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಇನ್ನೂ ಅನೇಕರ ಹೆಸರು ಇದರಲ್ಲಿ ಬರುವ ಸಾಧ್ಯತೆಇದೆ. ಧ್ರುವ್ ಕೂಡ ಮಾಡೆಲಿಂಗ್ನಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರು ನಟನಾ ಕ್ಷೇತ್ರಕ್ಕೆ ಕಾಲಿಡಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | ಡ್ರಗ್ಸ್ ಜಾಲ ನಿರ್ಮೂಲನೆಯಾಗಿಲ್ಲ, ಇದು ಕಳಂಕವಲ್ಲದೇ ಇನ್ನೇನು?