ಬಾಲಿವುಡ್ನ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದ ನಟ ಶಿವಕುಮಾರ್ ಸುಬ್ರಮಣಿಯಂ (Shiv Kumar Subramaniam) ಅವರು ನಿಧನರಾಗಿದ್ದಾರೆ. ಸೋಮವಾರ (ಏ.11) ಮುಂಜಾನೆ ಅವರ ಮರಣದ ಸುದ್ದಿ ಕೇಳಿ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ವಿಪರ್ಯಾಸ ಎಂದರೆ, ಕೇವಲ ಎರಡು ತಿಂಗಳ ಹಿಂದೆ ಶಿವಕುಮಾರ್ ಶಿವಸುಬ್ರಮಣಿಯಂ ಅವರು ಮಗನನ್ನು ಕಳೆದುಕೊಂಡಿದ್ದರು. ಕ್ಯಾನ್ಸರ್ನಿಂದ (Cancer) ಅವರ ಪುತ್ರನ ಸಾವು ಸಂಭವಿಸಿತ್ತು. ಆ ನೋವು ಮಾಸುವ ಮುನ್ನವೇ ಶಿವಕುಮಾರ್ ಶಿವಸುಬ್ರಮಣಿಯಂ ಕೊನೆಯುಸಿರು ಎಳೆದಿರುವುದು (Shiv Kumar Subramaniam Death) ಇಡೀ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ. ‘2 ಸ್ಟೇಟ್ಸ್’, ‘ಮೀನಾಕ್ಷಿ ಸುಂದರೇಶ್ವರ್’, ‘ನೇಲ್ ಪಾಲಿಶ್’, ‘ಹಿಚ್ಕಿ’ ಮುಂತಾದ ಬಾಲಿವುಡ್ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಕಥೆ ಮತ್ತು ಚಿತ್ರಕಥೆ ಬರಹಗಾರರಾಗಿಯೂ ಅವರು ಗುರುತಿಸಿಕೊಂಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ಮುಂಬೈನಲ್ಲಿ ಶಿವಕುಮಾರ್ ಸುಬ್ರಮಣಿಯಂ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.
1989ರಲ್ಲಿ ವಿಧು ವಿನೋದ್ ಚೋಪ್ರಾ ಅವರ ‘ಪರಿಂದಾ’ ಸಿನಿಮಾಗೆ ಚಿತ್ರಕಥೆ ಬರೆಯುವ ಮೂಲಕ ಶಿವಕುಮಾರ್ ಸುಬ್ರಮಣಿಯಂ ಅವರು ಚಿತ್ರರಂಗದಲ್ಲಿ ತಮ್ಮ ಜರ್ನಿ ಆರಂಭಿಸಿದ್ದರು. ‘1942: ಎ ಲವ್ ಸ್ಟೋರಿ’, ‘ಇಸ್ ರಾತ್ ಕಿ ಸುಬಾಹ್ ನಹೀ’, ‘ಅರ್ಜುನ್ ಪಂಡಿತ್’, ‘ಚಮೇಲಿ’, ‘ಹಜಾರೋ ಕ್ವಾಯಿಷೆ ಐಸಿ’ ಮುಂತಾದ ಸಿನಿಮಾಗಳಿಗೆ ಅವರು ಬರಹಗಾರನಾಗಿ ಕೆಲಸ ಮಾಡಿದ್ದರು.
‘ಪರಿಂದಾ’ ಚಿತ್ರದ ಚಿತ್ರಕಥೆ ಹಾಗೂ ‘ಹಜಾರೋ ಕ್ವಾಯಿಷೆ ಐಸಿ’ ಸಿನಿಮಾದ ಕಥೆಗಾಗಿ ಅವರು ಪ್ರಶಸ್ತಿ ಪಡೆದಿದ್ದರು. ಕಿರುತೆರೆಯಲ್ಲಿಯೂ ಶಿವಕುಮಾರ್ ಸುಬ್ರಮಣಿಯಂ ಫೇಮಸ್ ಆಗಿದ್ದರು. ‘ಮುಕ್ತಿ ಬಂಧನ್’ ಧಾರಾವಾಹಿಯಲ್ಲಿ ಅವರು ಮುಖ್ಯ ಪಾತ್ರ ಮಾಡುವ ಮೂಲಕ ಮನೆಮಾತಾಗಿದ್ದರು. ಹೀಗೆ ಸಿನಿಮಾ ಮತ್ತು ಕಿರುತೆರೆ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರ ಅಗಲಿಕೆಗೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ.
Extremely shocked and pained to know about the tragic demise of our dear friend, a great actor and a brilliant human being Shiv Subramaniam.
My heartfelt condolences to his wife Divya. May God give you enough energy to face this tragedy .
ॐ शान्ति !
? pic.twitter.com/LvTM0mZhFi— Ashoke Pandit (@ashokepandit) April 11, 2022
Terrible news to wake up to. Shiv Subramaniam gone. Heartbreaking.
— Hansal Mehta (@mehtahansal) April 11, 2022
ಪತ್ನಿ ದಿವ್ಯಾ ಅವರನ್ನು ಶಿವಕುಮಾರ್ ಸುಬ್ರಮಣಿಯಂ ಅಗಲಿದ್ದಾರೆ. ಸೆಲೆಬ್ರಿಟಿಗಳಾದ ಹನ್ಸಲ್ ಮೆಹ್ತಾ, ಅಶೋಕ್ ಪಂಡಿತ್, ಆಯೆಶಾ ಮಿಶ್ರಾ ಮುಂತಾದವರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:
Mannava Balayya: 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಮನ್ನವ ಬಾಲಯ್ಯ ನಿಧನ; ಕಂಬನಿ ಮಿಡಿದ ಚಿತ್ರರಂಗ
Mannava Balayya: 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಮನ್ನವ ಬಾಲಯ್ಯ ನಿಧನ; ಕಂಬನಿ ಮಿಡಿದ ಚಿತ್ರರಂಗ
Published On - 11:44 am, Mon, 11 April 22