ಅಕ್ಷಯ್ ಕುಮಾರ್ ಹಾಗೂ ಆಮಿರ್ ಖಾನ್ (Aamir Khan) ಬಾಲಿವುಡ್ನ ಸ್ಟಾರ್ ಹೀರೋಗಳು. ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಟನೆ ಮೂಲಕ ಜನಮನ ಗೆದ್ದಿದ್ದಾರೆ. ಸಿನಿಮಾ ಆಯ್ಕೆ ವಿಚಾರದಲ್ಲಿ ಇಬ್ಬರ ಮಧ್ಯೆ ಸಾಕಷ್ಟು ವ್ಯತ್ಯಾಸ ಇದೆ. ಅಕ್ಷಯ್ ಕುಮಾರ್ (Akshay Kumar) ಅವರು ಸಾಲು ಸಾಲು ಸಿನಿಮಾ ಒಪ್ಪಿಕೊಂಡರೆ ಆಮಿರ್ ಖಾನ್ ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ. ಒಂದು ಸಿನಿಮಾ ಮುಗಿದ ಬಳಿಕವೇ ಅವರು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಳ್ಳುತ್ತಾರೆ. ಇವರು ಎಂದಿಗೂ ಒಟ್ಟಾಗಿ ತೆರೆ ಹಂಚಿಕೊಂಡಿಲ್ಲ.
ಅಕ್ಷಯ್ ಕುಮಾರ್ ಹಾಗೂ ಆಮಿರ್ ಖಾನ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಇವರು ಒಟ್ಟಾಗಿ ನಟಿಸೋಕೆ ಸಾಧ್ಯವಾಗಿಲ್ಲ. ಆಫರ್ ಬಂದರೂ ಅಕ್ಷಯ್ ಕುಮಾರ್ ಇದನ್ನು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಕಾರಣವಾಗಿರೋದು ಹಳೆಯ ಘಟನೆ ಎನ್ನಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಅದು 90ರ ದಶಕದ ಘಟನೆ. ಆಮಿರ್ ಖಾನ್ ಅವರು ‘ಜೋ ಜೀತಾ ವಹೀ ಸಿಖಂದರ್’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಈ ಚಿತ್ರವನ್ನು ಮನ್ಸೂರ್ ಖಾನ್ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಎರಡನೇ ಹೀರೋ ಅವಶ್ಯಕತೆ ಇತ್ತು. ಈ ಪಾತ್ರಕ್ಕಾಗಿ ಆಡಿಷನ್ ಕರೆಯಲಾಯಿತು. ಅಕ್ಷಯ್ ಕುಮಾರ್ ಕೂಡ ಈ ಪಾತ್ರಕ್ಕೆ ಆಡಿಷನ್ ನೀಡಿದರು. ಆದರೆ, ಕೊನೆಯಲ್ಲಿ ಆಯ್ಕೆ ಆಗಿದ್ದು ದೀಪಕ್ ತಿಜೋರಿ ಅವರು. ಇದು ಅಕ್ಷಯ್ ಕುಮಾರ್ ಅವರಿಗೆ ಬೇಸರ ತಂದಿತು.
ಅಕ್ಷಯ್ ಕುಮಾರ್ಗೆ ಈ ಘಟನೆಯಿಂದ ಸಿಟ್ಟು ಬಂತು. ಆಮಿರ್ ಖಾನ್ ಹಾಗೂ ದೀಪಕ್ ಒಳ್ಳೆಯ ಗೆಳೆಯರಾಗಿದ್ದರು. ಈ ಕಾರಣದಿಂದಲೇ ಅಕ್ಷಯ್ ಕುಮಾರ್ ಅವರನ್ನು ಸೈಡ್ಲೈನ್ ಮಾಡಲಾಯಿತು ಎನ್ನಲಾಗಿದೆ. ಈ ಘಟನೆ ಬಳಿಕ ಅವರು ಆಮಿರ್ ಖಾನ್ ಅವರ ಜೊತೆ ನಟಿಸದಿರಲು ನಿರ್ಧರಿಸಿದರು. ಅದನ್ನು ಈಗಲೂ ಅವರು ಪಾಲಿಸಿಕೊಂಡು ಬರುತ್ತಿದ್ದಾರೆ. ಅಕ್ಷಯ್ ಕುಮಾರ್ ಈಗ ಸ್ಟಾರ್ ಹೀರೋ ಆಗಿರಬಹುದು. ಆದರೆ, ಆ ಸಂದರ್ಭದಲ್ಲಿ ಅವರು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ದೊಡ್ಡ ಯಶಸ್ಸಿನ ನಿರೀಕ್ಷೆಯಲ್ಲಿದ್ದರು. ಹೀಗಾಗಿ. ‘ಜೋ ಜೀತಾ ವಹೀ ಸಿಖಂದರ್’ ಸಿನಿಮಾ ಅವರಿಗೆ ತುಂಬಾನೇ ಮುಖ್ಯವಾಗಿತ್ತು.
ಇದನ್ನೂ ಓದಿ: ‘ರಸ್ತೆ ಯಾರಪ್ಪನದ್ದಲ್ಲ’; ಮತ್ತೆ ಮುನ್ನೆಲೆಗೆ ಬಂತು ಅಕ್ಷಯ್ ಕುಮಾರ್ ಹಳೆಯ ಜಾಹೀರಾತು
ಇನ್ನು ಪ್ರಶಸ್ತಿ ಸಮಾರಂಭದಲ್ಲಿ ಅಕ್ಷಯ್-ಆಮಿರ್ ಎದುರಾಗಲೇ ಇಲ್ಲ. ಇದಕ್ಕೆ ಕಾರಣವೂ ಇದೆ. ಆಮಿರ್ ಖಾನ್ ಅವರು ಎಂದಿಗೂ ಪ್ರಶಸ್ತಿ ಸಮಾರಂಭಕ್ಕೆ ಬರುವುದಿಲ್ಲ. ಹೀಗಾಗಿ, ಇವರು ಮುಖಾಮುಖಿ ಆಗುವ ಸಂದರ್ಭ ಎದುರಾಗಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ