ದಕ್ಷಿಣದ ಸ್ಟಾರ್ ನಿರ್ದೇಶಕನ ಜೊತೆ ಸಿನಿಮಾ ಮಾಡಲಿದ್ದಾರೆ ಆಮಿರ್ ಖಾನ್  

|

Updated on: Aug 19, 2024 | 7:04 AM

ಇತ್ತೀಚಿನ ವರ್ಷಗಳಲ್ಲಿ ಆಮಿರ್ ಖಾನ್​ಗೆ ಸಿಕ್ಕ ಸೋಲುಗಳು ತುಂಬಾನೇ ದೊಡ್ಡದು. ಸಾಲು ಸಾಲು ಸೋಲುಗಳಿಂದ ಅವರು ಕಂಗೆಟ್ಟು ಹೋಗಿದ್ದಾರೆ. ಸದ್ಯ ಅವರು ಸದ್ಯ ‘ಸಿತಾರೆ ಜಮೀನ್​ ಪರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಾದ ಬಳಿಕ ಆಮಿರ್ ದಕ್ಷಿಣದ ಸ್ಟಾರ್ ನಿರ್ದೇಶಕನ ಜೊತೆ ಸಿನಿಮಾ ಮಾಡಲಿದ್ದಾರೆ.

ದಕ್ಷಿಣದ ಸ್ಟಾರ್ ನಿರ್ದೇಶಕನ ಜೊತೆ ಸಿನಿಮಾ ಮಾಡಲಿದ್ದಾರೆ ಆಮಿರ್ ಖಾನ್  
ಆಮಿರ್
Follow us on

ಇತ್ತೀಚೆಗೆ ಬಾಲಿವುಡ್ ನಿರ್ದೇಶಕರು ದಕ್ಷಿಣದತ್ತ ಮುಖ ಮಾಡುತ್ತಿದ್ದಾರೆ. ದಕ್ಷಿಣದ ಸ್ಟಾರ್ ಹೀರೋಗಳ ಜೊತೆ ಕೈ ಜೋಡಿಸುತ್ತಿದ್ದಾರೆ. ಶಾರುಖ್ ಖಾನ್ ಅವರು ಅಟ್ಲಿ ಜೊತೆ ಸಿನಿಮಾ ಮಾಡಿ ಗೆಲುವು ಕಂಡಿದ್ದಾರೆ. ಸಲ್ಮಾನ್ ಖಾನ್ ಅವರು ತಮಿಳು ನಿರ್ದೇಶಕ ಎಆರ್ ಮುರುಗದಾಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈಗ ಆಮಿರ್ ಖಾನ್ ಅವರ ಸರದಿ. ಅವರು ಲೋಕೇಶ್ ಕನಗರಾಜ್ ಜೊತೆ ಕೈ ಜೋಡಿಸುತ್ತಿದ್ದಾರೆ. ಈ ಸಿನಿಮಾಗೆ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡುತ್ತಿದೆ.

ಮೈತ್ರಿ ಮೂವೀ ಮೇಕರ್ಸ್​ನವರು ‘ಪುಷ್ಪ 2’, ಜೂನಿಯರ್ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ, ರಾಮ್ ಚರಣ್ ನಟನೆಯ ಎರಡು ಸಿನಿಮಾಗಳು, ಪ್ರಭಾಸ್​ ಹಾಗೂ ಹನು ರಾಘವಪುಡಿ ಸಿನಿಮಾ, ಪವನ್ ಕಲ್ಯಾಣ್ ಹಾಗೂ ಹರೀಶ್ ಶಂಕರ್ ಜೊತೆ ಒಂದು ಸಿನಿಮಾ. ಅಜಿತ್ ಕುಮಾರ್ ಜೊತೆ, ಸನ್ನಿ ಡಿಯೋಯಲ್ ಜೊತೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಇಷ್ಟೊಂದು ಬಿಗ್ ಬಜೆಟ್ ಸಿನಿಮಾಗಳ ಜೊತೆ ಇವರ ತೆಕ್ಕೆಗೆ ಮತ್ತೊಂದು ಸಿನಿಮಾ ಸೇರಿದೆ.

ಲೋಕೇಶ್ ಕನಗರಾಜ್ ಅವರು ‘ವಿಕ್ರಮ್’ ರೀತಿಯ ಸಿನಿಮಾಗಳನ್ನು ಮಾಡಿ ದೇಶ ಮಟ್ಟದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ಅವರ ಸಿನಿಮಾಗಳ ಬಗ್ಗೆ ಫ್ಯಾನ್ಸ್​ಗೆ ನಿರೀಕ್ಷೆ ಮೂಡುವಂತೆ ಆಗಿದೆ. ಈಗ ಅವರು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ರೆಡಿ ಆಗಿದ್ದಾರೆ. ಆಮಿರ್ ಖಾನ್​ಗೆ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ವರದಿ ಆಗಿದೆ.

2018ರಿಂದ ಈಚೆ ಆಮಿರ್ ಖಾನ್​ಗೆ ಹೆಚ್ಚು ಗೆಲುವು ಸಿಕ್ಕಿಲ್ಲ. ರಿಲೀಸ್ ಆದ ‘ಥಗ್ಸ್ ಆಫ್ ಹಿಂದೂಸ್ಥಾನ್’ ಹಾಗೂ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾಗಳು ಸೋತಿವೆ. ಆಮಿರ್ ಖಾನ್​ಗೆ ಈಗ ಒಂದೊಳ್ಳೆಯ ಗೆಲುವಿನ ಅವಶ್ಯಕತೆ ಇದೆ. ಈ ಕಾರಣಕ್ಕೆ ಅವರು ಲೋಕೇಶ್ ಕನಗರಾಜ್ ಜೊತೆ ಕೈ ಜೋಡಿಸೋಕೆ ರೆಡಿ ಆಗಿದ್ದಾರೆ.

ಇದನ್ನೂ ಓದಿ: ಆಮಿರ್ ಖಾನ್​ ಜತೆ ಸುಪ್ರೀಂ ಕೋರ್ಟ್​ಗೆ ಹೋದ ಮಾಜಿ ಪತ್ನಿ ಕಿರಣ್​ ರಾವ್​ಗೆ ಬಂತು ಹೊಸ ಆಸೆ

ಆಮಿರ್ ಖಾನ್ ಅವರು ಸದ್ಯ ‘ಸಿತಾರೆ ಜಮೀನ್​ ಪರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2018ರ ಸ್ಪ್ಯಾನಿಶ್ ಸಿನಿಮಾ ‘ಚಾಂಪಿಯನ್ಸ್​’ನ ರಿಮೇಕ್ ಇದಾಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರ ತಿಲೀಸ್ ಆಗಲಿದೆ. ಲೋಕೇಶ್ ಅವರು ಸದ್ಯ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.