ಕರಣ್ ಜೋಹರ್ ಹೊರಗಟ್ಟಿದ ಈ ಕಲಾವಿದನಿಗೆ ಈಗ ಭರ್ಜರಿ ಬೇಡಿಕೆ

ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್​ನ ಸಿನಿಮಾ ಒಂದರಿಂದ ಹೊರಗಿಡಲಾಗಿತ್ತು ನಟ ಅಭಿಷೇಕ್ ಬ್ಯಾನರ್ಜಿ ಅನ್ನು. ಅಲ್ಲಿಗೆ ನಟನಾ ಜೀವನವೇ ಮುಗಿಯಿತು ಎಂದುಕೊಂಡಿದ್ದ ಅಭಿಷೇಕ್ ಬ್ಯಾನರ್ಜಿ ಸ್ವಂತ ಪ್ರತಿಭೆಯಿಂದ ಅವಕಾಶ, ಗುರುತು, ಹಣ ಪಡೆದುಕೊಂಡಿದ್ದಾರೆ.

ಕರಣ್ ಜೋಹರ್ ಹೊರಗಟ್ಟಿದ ಈ ಕಲಾವಿದನಿಗೆ ಈಗ ಭರ್ಜರಿ ಬೇಡಿಕೆ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Aug 18, 2024 | 10:33 PM

ಧರ್ಮ ಪ್ರೊಡಕ್ಷನ್ ಬಾಲಿವುಡ್​ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಈ ನಿರ್ಮಾಣ ಸಂಸ್ಥೆಯಲ್ಲಿ ನಟಿಸೋ ಅವಕಾಶ ಸಿಕ್ಕರೆ ನಂತರ ಹಲವು ಆಫರ್ಗಳು ನಮ್ಮನ್ನು ಹುಡುಕಿ ಬರುತ್ತವೆ ಅನ್ನೋದು ಅನೇಕರ ನಂಬಿಕೆ. ಆದರೆ, ಈ ನಿರ್ಮಾಣ ಸಂಸ್ಥೆ ಜೊತೆ ಕಿರಿಕ್ ಮಾಡಿಕೊಂಡರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಅನ್ನೋ ಮಾತೂ ಇದೆ. ಆದರೆ, ಅಭಿಷೇಕ್ ಬ್ಯಾನರ್ಜಿ ಇದನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ‘ಸ್ತ್ರೀ 2’ ಚಿತ್ರದಲ್ಲಿ ನಟಿಸಿ ಫೇಮಸ್ ಆದ ಇವರು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಅವರು ನಟನೆಗೆ ಬರುವುದಕ್ಕೂ ಮೊದಲು ಕಾಸ್ಟಿಂಗ್ ಡೈರೆಕ್ಟರ್ ಆಗಿದ್ದರು. ಅವರು ವಿದ್ಯಾ ಬಾಲನ್ ನಟನೆಯ ‘ಡರ್ಟಿ ಪಿಕ್ಚರ್’ ಮತ್ತು ರಾಣಿ ಮುಖರ್ಜಿ ನಟನೆಯ ‘ನೋ ಒನ್ ಕಿಲ್ಡ್ ಜೆಸ್ಸಿಕಾ’ ರೀತಿಯ ಸಿನಿಮಾಗಳಿಗೆ ಅವರು ಪಾತ್ರಗಳ ಆಯ್ಕೆ ಮಾಡಿದ್ದಾರೆ. ಅವರನ್ನು ‘ಅಗ್ನೀಪತ್’ ಚಿತ್ರದಿಂದ ಹೊರಕ್ಕೆ ಹಾಕಲಾಯಿತು. ಈ ಸಿನಿಮಾದಲ್ಲಿ ಹೃತಿಕ್ ರೋಷನ್ ಹಾಗೂ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಧರ್ಮ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿತ್ತು.

ಅಭಿಷೇಕ್ ‘ಅಗ್ನೀಪತ್’ ಚಿತ್ರಕ್ಕೆ ಕಾಸ್ಟಿಂಗ್ ಡೈರೆಕ್ಟರ್ ಆಗಿದ್ದರು. ಅವರನ್ನು ತೆಗೆದು ಹಾಕಲಾಯಿತು. ‘ನನ್ನನ್ನು ಅಗ್ನೀಪತ್ ಚಿತ್ರದಿಂದ ತೆಗೆದು ಹಾಕಲಾಯಿತು. ನಾವು ಅಗ್ನೀಪತ್ ಚಿತ್ರಕ್ಕೆ ಪಾತ್ರಗಳನ್ನು ಆಯ್ಕೆ ಮಾಡಿದ್ದೆವು. ನಂತರ ನಮ್ಮ ಬದಲು ಬೇರೆಯವರು ಬಂದರು. ನಾವು ಆಯ್ಕೆ ಮಾಡಿದ ಕಲಾವಿದರನ್ನು ಕರಣ್ ಇಷ್ಟಪಟ್ಟಿರಲಿಲ್ಲ’ ಎಂದಿದ್ದಾರೆ ಅವರು. ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಾಣ ಮಾಡಿದರೆ, ಕರಣ್ ಮಲ್ಹೋತ್ರ ನಿರ್ದೇಶನ ಮಾಡಿದ್ದರು. ಅವರು ಹೇಳಿದ್ದು ಯಾವ ಕರಣ್ ಅನ್ನೋದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ:ಒಮ್ಮೆಲೇ ಎರಡು ಬಿಗ್ ಬಜೆಟ್ ಚಿತ್ರಗಳನ್ನು ಅರ್ಧಕ್ಕೆ ಕೈಬಿಟ್ಟ ಕರಣ್ ಜೋಹರ್

ಅನುರಾಗ್ ಕಶ್ಯಪ್ ರೀತಿಯ ಕಲಾವಿದರನ್ನು ಆಯ್ಕೆ ಮಾಡಿದ್ದಾಗಿ ಅಭಿಷೇಕ್ ಟೀಕೆ ಎದುರಿಸಿದರಂತೆ. ‘ನಮ್ಮ ಸಿನಿಮಾಗಳಿಂದ ಹೊರ ಹೋಗಿ ಎಂದು ಅವರು ಕೂಗಿದರು. ನಮ್ಮ ಕರಿಯರ್ ಮುಗಿಯಿತು ಎಂದೆನಿಸಿತು. ಧರ್ಮ ಪ್ರೊಡಕ್ಷನ್ನಿಂದ ಹೊರ ಹೋದಮೇಲೆ ಇನ್ನೇನು ಎಂಬುದು ನಮ್ಮ ಆಲೋಚನೆ ಆಗಿತ್ತು. ಆದರೆ, ದೇವರ ದಯೆಯಿಂದ ನಾವು ಉಳಿದುಕೊಂಡೆವು’ ಎಂದಿದ್ದಾರೆ ಅವರು.

ಅಭಿಷೇಕ್ ಅವರು ನಟನೆಯ ಜೊತೆಗೆ ಕಾಸ್ಟಿಂಗ್ ಡೈರೆಕ್ಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ‘ದಿ ಸ್ಕೈ ಈಸ್ ಪಿಂಕ್’, ‘ಪಾತಾಳ್ ಲೋಕ್’ ರೀತಿಯ ಸೀರಿಸ್ನ ಅವರು ನಿರ್ದೇಶನ ಮಾಡಿದ್ದಾರೆ. ‘ಪಾತಾಳ್ ಲೋಕ್’ ಸೀರಿಸ್ನಲ್ಲಿ ಅವರು ಮಾಡಿದ ಹತೋಡಾ ತ್ಯಾಗಿ ಪಾತ್ರ ಗಮನ ಸೆಳೆಯಿತು. ‘ಸ್ತ್ರೀ 2’ ಸಿನಿಮಾದಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಈ ಚಿತ್ರದಲ್ಲಿ ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್ ಮೊದಲಾದವರು ನಟಿಸಿದ್ದಾರೆ. ಈ ಸನಿಮಾಸ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ