ಬೆಂಗಳೂರಿನ ಕೋಟ್ಯಧಿಪತಿ ಜೊತೆ ಸುಶಾಂತ್ ಮಾಜಿ ಗೆಳತಿ ಸುತ್ತಾಟ
Rhea Chakraborty: ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ, ಬೆಂಗಳೂರಿನ ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಜೊತೆಗೆ ಬೈಕಿನಲ್ಲಿ ಸುತ್ತಾಡುತ್ತಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ.
ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿ ಕೆಲ ವರ್ಷಗಳಾಗಿವೆ. ಸುಶಾಂತ್ ಸಿಂಗ್ ನಿಧನ ಬಾಲಿವುಡ್ಗೆ ತೀವ್ರ ಆಘಾತ ತಂದಿತ್ತು, ಮಾತ್ರವಲ್ಲದೆ ಸುಶಾಂತ್ ಸಿಂಗ್ ನಿಧನ ಬಾಲಿವುಡ್ನ ಹಲವರಿಗೆ ಸಮಸ್ಯೆಯೂ ಎದುರಾಗಿತ್ತು. ಸುಶಾಂತ್ ಸಿಂಗ್ ನಿಧನದ ಬಳಿಕ ಹೊರಬಂದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ನ ಹಲವು ದಿಗ್ಗಜರ ವಿಚಾರಣೆ ನಡೆಸಲಾಗಿತ್ತು. ಕೆಲವರು ಜೈಲು ಸಹ ಸೇರಿದರು. ಅದರಲ್ಲಿ ಸುಶಾಂತ್ರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಸಹ ಒಬ್ಬರು. ಸುಶಾಂತ್ ಮರಣಾನಂತರ ರಿಯಾ ಚಕ್ರವರ್ತಿ ಹಲವು ಸಮಸ್ಯೆಗಳನ್ನು ಎದುರಿಸಿದರು. ತೀವ್ರ ನಿಂದನೆಗೆ ಗುರಿಯಾದರು, ಜೈಲು ಪಾಲಾದರು ಈಗ ಎಲ್ಲವನ್ನೂ ಮೆಟ್ಟಿನಿಂತು ಎದ್ದು ನಿಂತಿದ್ದಾರೆ. ಸುಶಾಂತ್ ಅಗಲಿಕೆಯ ನೋವಿನಿಂದ ಹೊರಬಂದು ಬೆಂಗಳೂರಿನ ಖ್ಯಾತ ಉದ್ಯಮಿಯ ಜೊತೆ ಡೇಟಿಂಗ್ನಲ್ಲಿದ್ದಾರೆ.
ಭಾರತದ ನಂಬರ್ 1 ಷೇರು ಬ್ರೋಕರೇಜ್ ಕಂಪೆನಿ ಜಿರೋದಾದ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಜೊತೆಗೆ ರಿಯಾ ಚಕ್ರವರ್ತಿ ಸುತ್ತಾಡುತ್ತಿದ್ದಾರೆ. ಇತ್ತೀಚೆಗಷ್ಟೆ ರಿಯಾ ಚಕ್ರವರ್ತಿ ಹಾಗೂ ನಿಖಿಲ್ ಕಾಮತ್ ಬೈಕ್ನಲ್ಲಿ ಮುಂಬೈ ರಸ್ತೆಗಳಲ್ಲಿ ಓಡಾಡುತ್ತಿರುವ ವಿಡಿಯೋ, ಚಿತ್ರಗಳು ವೈರಲ್ ಆಗುತ್ತಿವೆ. ಚಿತ್ರದಲ್ಲಿ ದುಬಾರಿ ಸೂಪರ್ ಬೈಕ್ ಅನ್ನು ನಿಖಿಲ್ ಕಾಮತ್ ಓಡಿಸುತ್ತಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಪುಲ್ ಓವರ್ ಟಿ-ಶರ್ಟ್, ಶಾರ್ಟ್ಸ್ ಧರಿಸಿದ್ದಾರೆ. ಅರ್ಧ ಹೆಲ್ಮೆಟ್ ಅನ್ನು ಧರಿಸಿದ್ದಾರೆ. ಇನ್ನು ರಿಯಾ ಸಹ ಮುಖಕ್ಕೆ ಮಾಸ್ಕ್ ಧರಿಸಿ ಬೈಕ್ನ ಹಿಂದೆ ಕುಳಿತಿದ್ದಾರೆ. ಇಬ್ಬರು ಸಹ ಹೆಲ್ಮೆಟ್ ಧರಿಸಿಲ್ಲ.
ಇದನ್ನೂ ಓದಿ:ಸುಶಾಂತ್ ಸಾವಿನಿಂದ ಬದಲಾಯಿತು ರಿಯಾ ಚಕ್ರವರ್ತಿ ಜೀವನ; ಇರುವ ಆರೋಪ ಒಂದೆರಡಲ್ಲ
ಸೂಪರ್ ಬೈಕ್ನಲ್ಲಿ ನಿಖಿಲ್ ಹಾಗೂ ರಿಯಾ ಮುಂಬೈನಲ್ಲಿ ಸುತ್ತಾಡುತ್ತಿದ್ದು, ನಿಖಿಲ್ ಬೆಂಗಳೂರಿನಿಂದ ತಮ್ಮ ಬೆಂಗಳೂರನ್ನು ಮುಂಬೈಗೆ ತೆಗೆದುಕೊಂಡು ಹೋಗಿ ಅಲ್ಲಿ ರಿಯಾ ಚಕ್ರವರ್ತಿಯನ್ನು ಹಿಂದೆ ಕೂಡಿಸಿಕೊಂಡು ಸುತ್ತಾಡಿದ್ದಾರೆ. ನಿಖಿಲ್ ಹಾಗೂ ರಿಯಾ ಚಕ್ರವರ್ತಿ ಬೈಕ್ ರೈಡ್ ಮಾಡುತ್ತಿರುವ ವಿಡಿಯೋವನ್ನು ಕೆಲವರು ಚಿತ್ರೀಕರಿಸಿದ್ದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿವೆ. ವಿಡಿಯೋನಲ್ಲಿ ನಿಖಿಲ್ ಓಡಿಸುತ್ತಿರುವುದು ಸುಜುಕಿಯ ಬುಲೆವರ್ಡ್ ಎಂ109ಆರ್ ಬೈಕ್ ಅನ್ನು. ಇದರ ಬೆಲೆ ಭಾರತದಲ್ಲಿ ಸುಮಾರು 20 ಲಕ್ಷ ರೂಪಾಯಿಗಳು.
ಅಂದಹಾಗೆ ನಿಖಿಲ್ ಕಾಮತ್ 2019 ರಲ್ಲಿ ವಿವಾಹವಾಗಿದ್ದರು ಬಳಿಕ 2021 ರಲ್ಲಿ ವಿಚ್ಛೇದನ ಪಡೆದುಕೊಂಡರು. ಇದಕ್ಕೆ ಮುನ್ನ ನಟಿ, ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಜೊತೆಗೆ ರಿಲೇಷನ್ಶಿಪ್ನಲ್ಲಿದ್ದರು ನಿಖಿಲ್ ಕಾಮತ್. ಅದಾದ ಬಳಿಕ ಈಗ ರಿಯಾ ಚಕ್ರವರ್ತಿ ಜೊತೆಗೆ ಸುತ್ತಾಡುತ್ತಿದ್ದಾರೆ. ಇನ್ನು ರಿಯಾ, ಸುಶಾಂತ್ ಅಗಲಿದ ಬಳಿಕ ಬಹುತೇಕ ಒಂಟಿಯಾಗಿದ್ದರು. ಮಧ್ಯದಲ್ಲಿ ವ್ಯಕ್ತಿಯೊಬ್ಬರ ಜೊತೆಗೆ ರಿಯಾ ಹೆಸರು ಕೇಳಿ ಬಂದಿತ್ತಾದರೂ, ಅದು ಖಾತ್ರಿ ಆಗಿರಲಿಲ್ಲ. ಈಗ ರಿಯಾ ಚಕ್ರವರ್ತಿ, ನಿಖಿಲ್ ಜೊತೆ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ