ಬಾಲಿವುಡ್ಗೆ ಚೇತರಿಕೆ ತಂದ ‘ಸ್ತ್ರೀ 2’ ಸಿನಿಮಾ; ಮೂರು ದಿನದಲ್ಲಿ ದಾಖಲೆ ಗಳಿಕೆ
‘ಸ್ತ್ರೀ 2’ ಸಿನಿಮಾಗೆ ಭಾನುವಾರ (ಆಗಸ್ಟ್ 18) ಪ್ರಮುಖ ಎನಿಸಿಕೊಂಡಿದೆ. ಈ ಚಿತ್ರ ಭಾನುವಾರ ಸುಮಾರು 50 ಕೋಟಿ ರೂಪಾಯಿ ಗಳಿಕೆ ಮಾಡೋ ನಿರೀಕ್ಷೆ ಇದೆ. ಇನ್ನು, ಸೋಮವಾರ ರಕ್ಷಾ ಬಂಧನದ ನಿಮಿತ್ತ ಕೆಲವು ಕಡೆಗಳಲ್ಲಿ ರಜೆ ಇದು. ಅದು ಚಿತ್ರಕ್ಕೆ ಸಹಕಾರಿ ಆಗುವ ನಿರೀಕ್ಷೆ ಇದೆ.
ಬಾಲಿವುಡ್ನಲ್ಲಿ ಇತ್ತೀಚೆಗೆ ಯಾವುದೇ ಸಿನಿಮಾ ದೊಡ್ಡ ಗೆಲುವು ಕಂಡಿರಲಿಲ್ಲ. ಈ ವರ್ಷ ಯಾವ ಸಿನಿಮಾಗಳು ಭರ್ಜರಿ ಗಳಿಕೆ ಮಾಡಿರಲಿಲ್ಲ. ಈ ಕೊರಗನ್ನು ‘ಸ್ತ್ರೀ 2’ ಸಿನಿಮಾ ನೀಗಿಸಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಕೇವಲ ಮೂರು ದಿನಕ್ಕೆ ಈ ಚಿತ್ರ 135 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಈ ಸಿನಿಮಾದಿಂದ ಶ್ರದ್ಧಾ ಕಪೂರ್ ಅವರು ಗೆಲುವಿನ ನಗೆ ಬೀರಿದ್ದಾರೆ.
ಆಗಸ್ಟ್ 15ರಂದು ‘ಸ್ತ್ರೀ 2’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಮೂರು ದಿನಗಳಲ್ಲಿ 135.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಪ್ರೀಮಿಯರ್ ಶೋನಿಂದ 8.5 ಕೋಟಿ ರೂಪಾಯಿ, ಮೊದಲ ದಿನದ ಕಲೆಕ್ಷನ್ನಿಂದ 51.8 ಕೋಟಿ ರೂಪಾಯಿ, ಎರಡನೇ ದಿನ 31.4 ಕೋಟಿ ರೂಪಾಯಿ ಹಾಗೂ ಶನಿವಾರ 44 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ಒಟ್ಟಾರೆ ಕಲೆಕ್ಷನ್ 135 ಕೋಟಿ ರೂಪಾಯಿ ಆಗಿದೆ.
‘ಸ್ತ್ರೀ 2’ ಸಿನಿಮಾಗೆ ಭಾನುವಾರ (ಆಗಸ್ಟ್ 18) ಪ್ರಮುಖ ಎನಿಸಿಕೊಂಡಿದೆ. ಈ ಚಿತ್ರ ಭಾನುವಾರ ಸುಮಾರು 50 ಕೋಟಿ ರೂಪಾಯಿ ಗಳಿಕೆ ಮಾಡೋ ನಿರೀಕ್ಷೆ ಇದೆ. ಇನ್ನು, ಸೋಮವಾರ ರಕ್ಷಾ ಬಂಧನದ ನಿಮಿತ್ತ ಕೆಲವು ಕಡೆಗಳಲ್ಲಿ ರಜೆ ಇದು. ಅದು ಚಿತ್ರಕ್ಕೆ ಸಹಕಾರಿ ಆಗುವ ನಿರೀಕ್ಷೆ ಇದೆ. ‘ಸ್ತ್ರೀ 2’ ಚಿತ್ರವನ್ನು ಮುಂಬೈ, ದೆಹಲಿ, ಪುಣೆ ಹಾಗೂ ಬೆಂಗಳೂರಿನಲ್ಲಿ ಹೆಚ್ಚಿನ ಜನರು ವೀಕ್ಷಿಸುತ್ತಿದ್ದಾರೆ.
Movies to enter ₹100 Crores Nett club in just 2 days. 🔥
– #Pathaan – #Jawan – #Animal – #Stree2#Stree2 Only female Centric Film in the list.. @ShraddhaKapoor #ShahRukhKhan #RanbirKapoor pic.twitter.com/nwgYNOrEgm
— Real Box office™ (@Real_Box_0ffice) August 18, 2024
ಇದನ್ನೂ ಓದಿ: ‘ಸ್ತ್ರೀ 2’ ಸಿನಿಮಾ ಸೂಪರ್ ಹಿಟ್; ಎರಡೇ ದಿನಕ್ಕೆ 125 ಕೋಟಿ ರೂಪಾಯಿ ಕಲೆಕ್ಷನ್
‘ಸ್ತ್ರೀ’ ಸಿನಿಮಾ 2018ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಅದರ ಮುಂದುವರಿದ ಭಾಗವಾಗಿ ‘ಸ್ತ್ರೀ 2’ ಸಿನಿಮಾ ಮೂಡಿ ಬಂದಿದೆ. ಈ ಸಿನಿಮಾದಲ್ಲಿ ಭರ್ಜರಿ ಕಾಮಿಡಿ ಇದೆ ಎನ್ನಲಾಗಿದೆ. ಈ ಚಿತ್ರವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.