ಆಪರೇಷನ್ ಸಿಂದೂರ್ ಬಗ್ಗೆ ತಡವಾಗಿ ಪೋಸ್ಟ್ ಮಾಡಿದ ಆಮಿರ್​ಗೆ ಟೀಕೆಗಳ ಸುರಿಮಳೆ

Aamir Khan: ಆಪರೇಷನ್ ಸಿಂಧೂರ್ ಯಶಸ್ಸಿನ ಬಗ್ಗೆ ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನಟ-ನಟಿಯರು, ಕ್ರಿಕೆಟಿಗರು ಹೀಗೆ ಹಲವು ಸೆಲೆಬ್ರಿಟಿಗಳು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ನಟ ಆಮಿರ್ ಖಾನ್ ಸಹ ಆಪರೇಷನ್ ಸಿಂಧೂರ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಆಮಿರ್ ಖಾನ್ ಈಗ ಅದೇ ಕಾರಣಕ್ಕೆ ಟ್ರೋಲ್ ಸಹ ಆಗುತ್ತಿದ್ದಾರೆ.

ಆಪರೇಷನ್ ಸಿಂದೂರ್ ಬಗ್ಗೆ ತಡವಾಗಿ ಪೋಸ್ಟ್ ಮಾಡಿದ ಆಮಿರ್​ಗೆ ಟೀಕೆಗಳ ಸುರಿಮಳೆ
Aamir Khan
Edited By:

Updated on: May 13, 2025 | 12:51 PM

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ‘ಆಪರೇಷನ್ ಸಿಂದೂರ್’ (Operation Sindhoor) ಮೂಲಕ ಭಾರತ ಸೂಕ್ತ ಪ್ರತ್ಯುತ್ತರ ನೀಡಿತು. ಏಪ್ರಿಲ್22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು. ನಂತರ ಮೇ 7ರಂದು ಭಾರತೀಯ ಸೇನೆಯು ‘ಆಪರೇಷನ್ ಸಿಂದೂರ್’ ನಡೆಸಿತು. ಇದಕ್ಕೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಅದೇ ರೀತಿ ಅನೇಕ ಬಾಲಿವುಡ್ ನಟರು ಈ ವಿಷಯದ ಬಗ್ಗೆ ಮೌನ ವಹಿಸಿರುವುದಕ್ಕೆ ಟೀಕೆ ವ್ಯಕ್ತವಾಗುತ್ತಿದೆ. ‘ಆಪರೇಷನ್ ಸಿಂದೂರ್’ ಆದ ಐದು ದಿನಗಳ ನಂತರ, ನಟ ಆಮಿರ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕಾಗಿ ನೆಟ್ಟಿಗರು ಅವರನ್ನು ಸಾಕಷ್ಟು ಟ್ರೋಲ್ ಮಾಡಿದ್ದಾರೆ.

ಆಮಿರ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮದೇ ಆದ ಅಧಿಕೃತ ಖಾತೆಯನ್ನು ಹೊಂದಿಲ್ಲ. ಅವರು ತಮ್ಮ ನಿರ್ಮಾಣ ಕಂಪನಿಯಾದ ಆಮಿರ್ ಖಾನ್ ಪ್ರೊಡಕ್ಷನ್ಸ್ ಖಾತೆಯ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅವರು ಸೋಮವಾರ ರಾತ್ರಿ ಆಪರೇಷನ್ ಸಿಂಧೂರ್ ಬಗ್ಗೆ ಒಂದು ಪೋಸ್ಟ್ ಬರೆದಿದ್ದಾರೆ.

ಇದರಲ್ಲಿ ‘ಆಪರೇಷನ್ ಸಿಂದೂರ್‌ನ ವೀರರಿಗೆ ನಮನಗಳು. ನಮ್ಮ ದೇಶದ ಭದ್ರತೆಗಾಗಿ ಹೋರಾಡುತ್ತಿರುವ ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ಅಚಲ ಬದ್ಧತೆಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಗೌರವಾನ್ವಿತ ಪ್ರಧಾನ ಮಂತ್ರಿಯವರ ನಾಯಕತ್ವ ಮತ್ತು ದೃಢನಿಶ್ಚಯಕ್ಕೂ ನಾನು ಧನ್ಯವಾದ ಅರ್ಪಿಸುತ್ತೇನೆ. ಜೈ ಹಿಂದ್’ ಎಂದು ಅವರು ಈ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಆಮಿರ್ ಖಾನ್​ಗೆ ಗೆಟೌಟ್ ಎಂದಿದ್ದರು ಒಬ್ಬ ನಿರ್ದೇಶಕ, ಆಮೇಲೇನಾಯ್ತು?

ಈ ಪೋಸ್ಟ್‌ನಲ್ಲಿ ಆಮಿರ್ ಆಪರೇಷನ್ ಸಿಂದೂರ್​ನ ಹೊಗಳಿದ್ದರೂ, ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ. ‘ನೀವು ಇಷ್ಟು ದಿನ ಪದಗಳನ್ನು ಹುಡುಕುತ್ತಿದ್ದೀರಾ’ ಎಂದು ಒಬ್ಬರು ವ್ಯಂಗ್ಯವಾಗಿ ಕೇಳಿದರು. ‘ನೀವು ಎಲ್ಲಿಗೆ ಕಣ್ಮರೆಯಾಗಿದ್ದಿರಿ? ಈಗ ಎಚ್ಚರಗೊಂಡಂತೆ ಭಾಸವಾಗುತ್ತಿದೆ’ ಎಂಬ ಟೀಕೆಗಳು ಬಂದಿವೆ.

ಆಪರೇಷನ್ ಸಿಂಧೂರ್ ಬಗ್ಗೆ ಆಮಿರ್ ಮಾತ್ರವಲ್ಲದೆ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮಿತಾಭ್ ಬಚ್ಚನ್ ಅವರಂತಹ ದೊಡ್ಡ ನಟರ ಮೌನ ಅಭಿಮಾನಿಗಳ ಕೋಪಕ್ಕೆ ಕಾರಣವಾಯಿತು. ಅದಾದ ನಂತರ, ಅಮಿತಾಭ್  ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಬರೆದರು. ಅದಕ್ಕೂ ಮೊದಲು, ಅವರು ಟ್ವಿಟರ್‌ನಲ್ಲಿ ನಿರಂತರವಾಗಿ ಖಾಲಿ ಪೋಸ್ಟ್‌ಗಳನ್ನು ಬರೆಯುತ್ತಿದ್ದರು. ಬಾಲಿವುಡ್ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ನೆಟ್ಟಿಗರು, ‘ನಿಜವಾದ ಹೀರೋಗಳು ಸಿನಿಮಾಗಳಲ್ಲಿ ನಟಿಸುವವರಲ್ಲ, ಗಡಿಯಲ್ಲಿ ಹೋರಾಡುವವರೆಂದು’ ಕಾಮೆಂಟ್ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ