ಸಲ್ಮಾನ್ ಖಾನ್​ಗೆ ಬಂದಿತ್ತು ‘ಘಜಿನಿ’ ಆಫರ್​; ಮಾಡದ ತಪ್ಪಿಗೆ ಕೈ ತಪ್ಪಿತ್ತು ಸಿನಿಮಾ

Aamir Khan: ಸಲ್ಮಾನ್ ಖಾನ್ ನಟಿಸಿರುವ ‘ಭಜರಂಗಿ ಭಾಯಿಜಾನ್’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಲ್ಲು ವೃತ್ತಿ ಬದುಕಿನ ದೊಡ್ಡ ಹಿಟ್​ಗಳಲ್ಲಿ ಒಂದಾಗಿತ್ತು ಆ ಸಿನಿಮಾ. ಆದರೆ ಆ ಸಿನಿಮಾದ ನಾಯಕನ ಪಾತ್ರಕ್ಕೆ ಮೊದಲ ಆಯ್ಕೆ ಸಲ್ಮಾನ್ ಖಾನ್ ಆಗಿರಲಿಲ್ಲ ಬದಲಿಗೆ ಆಮಿರ್ ಖಾನ್ ಆಗಿದ್ದರು.

ಸಲ್ಮಾನ್ ಖಾನ್​ಗೆ ಬಂದಿತ್ತು ‘ಘಜಿನಿ’ ಆಫರ್​; ಮಾಡದ ತಪ್ಪಿಗೆ ಕೈ ತಪ್ಪಿತ್ತು ಸಿನಿಮಾ
Bajrangi Bhaijaan
Updated By: ಮಂಜುನಾಥ ಸಿ.

Updated on: Mar 27, 2025 | 6:27 PM

ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್​ನ ಖ್ಯಾತ ನಟ. ಅವರು ಹಲವು ಹಿಟ್​ಗಳನ್ನು ನೀಡಿದ್ದಾರೆ. ಅವರು ಬಾಲಿವುಡ್​ನ ಬಾಕ್ಸ್ ಆಫೀಸ್ ಸುಲ್ತಾನ್ ಆಗಿದ್ದಾರೆ. ಅವರು ಮಾಡಿರುವ ಅನೇಕ ಸಿನಿಮಾಗಳು ಈಗಲೂ ಪ್ರೇಕ್ಷಕರ ಮನದಲ್ಲಿ ಹಾಗೆಯೇ ಉಳಿದಿದೆ. ಈಗ ಅವರು ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ಅದೇನೆಂದರೆ ‘ಘಜಿನಿ’ ಚಿತ್ರದ ಆಫರ್ ಸಲ್ಮಾನ್ ಖಾನ್ ಅವರಿಗೆ ಹೋಗಬೇಕಿತ್ತಂತೆ. ತಾವು ಮಾಡದ ತಪ್ಪಿಗೆ ಈ ಆಫರ್ ತಪ್ಪೋಯ್ತು ಎಂದಿದ್ದಾರೆ.

ಸಲ್ಮಾನ್ ಖಾನ್ ಈ ಮೊದಲು ಸಾಕಷ್ಟು ಕೋಪಗೊಳ್ಳುತ್ತಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ಇದು ಅರ್ಧ ನಿಜ, ಅರ್ಧ ಸುಳ್ಳು.  ಇತ್ತೀಚೆಗೆ ಅವರು ಕೋಪ ಮಾಡಿಕೊಳ್ಳುವುದು ಕಡಿಮೆ ಆಗಿದೆ. ಮೊದಲು ಸಲ್ಲು ಸಾಕಷ್ಟು ಕೋಪಗೊಳ್ಳುತ್ತಿದ್ದರು ಎನ್ನಲಾಗಿತ್ತು. ಈ ಕಾರಣದಿಂದ ಅವರಿಗೆ ಸಿನಿಮಾ ಆಫರ್ ನೀಡಬಾರದು ಎನ್ನುವ ನಿರ್ಧಾರಕ್ಕೆ ಮುರುಗದಾಸ್ ಬಂದರು.

ಘಜಿನಿ ಸಿನಿಮಾದಲ್ಲಿ ಘಜಿನಿ ಹೆಸರಿನ ವಿಲನ್ ಪಾತ್ರ ಮಾಡಿದ ವ್ಯಕ್ತಿ ಪ್ರದೀಪ್ ರಾವತ್. ‘ನಾನು ಪ್ರದೀಪ್ ರಾವತ್​ನಿಂದ ಘಜಿನಿ ಸಿನಿಮಾ ಬಗ್ಗೆ ಕೇಳಿದೆ. ನನ್ನನ್ನು ಮುರುಗದಾಸ್ ಆಯ್ಕೆ ಮಾಡಬೇಕು ಎಂದುಕೊಂಡಿದ್ದರು. ಪ್ರದೀಪ್ ನನ್ನ ಗೆಳೆಯ. ನಾನು ಹಾಗೂ ಅವನು 4-5 ಸಿನಿಮಾ ಮಾಡಿದ್ದೆವು’ ಎಂದಿದ್ದಾರೆ ಸಲ್ಮಾನ್ ಖಾನ್.

ಇದನ್ನೂ ಓದಿ:ರಶ್ಮಿಕಾರನ್ನು ನೋಡಿ ನನ್ನ ಆ ದಿನಗಳು ನೆನಪಾದವು: ಸಲ್ಮಾನ್ ಖಾನ್

‘ಎಆರ್​ ಮುರುಗದಾಸ್ ಅವರು ತುಂಬಾನೇ ಶಿಸ್ತಿನ ವ್ಯಕ್ತಿ. ಸಲ್ಮಾನ್ ಖಾನ್ ಹೇಗೆ ಮುರುಗದಾಸ್ ಜೊತೆ ಕೆಲಸ ಮಾಡುತ್ತಾರೆ? ಸಲ್ಮಾನ್ ಖಾನ್​ಗೆ ಸಿಟ್ಟಿನ ಸಮಸ್ಯೆ ಇದೆ’ ಎಂಬ ಮಾತನ್ನು ಪ್ರದೀಪ್ ಹೇಳಿದ್ದರಂತೆ. ಈ ವದಂತಿಯಿಂದ ಸಲ್ಮಾನ್ ಖಾನ್ ಆಯ್ಕೆ ಮಾಡುವ ನಿರ್ಧಾರದಿಂದ ಮುರುಗದಾಸ್ ಹಿಂದೆ ಬಂದರು ಎನ್ನಲಾಗಿದೆ.

ಸಲ್ಮಾನ್ ಖಾನ್ ಅವರಿಗೆ ಪ್ರದೀಪ್ ಮೇಲೆ ಕೋಪವೇ ಬಂತಂತೆ. ‘ನಾನು ನಿನ್ನ ಮೇಲೆ ಯಾವಾಗ ಕೋಪಗೊಂಡೆ’ ಎಂದು ಸಲ್ಮಾನ್ ಖಾನ್ ಅವರು ಪ್ರದೀಪ್ ಬಳಿ ಕೇಳಬೇಕು ಎಂದುಕೊಂಡಿದ್ದರಂತೆ. ಆದರೆ, ಆ ಬಳಿಕ ಇಬ್ಬರ ಭೇಟಿ ಆಗಲೇ ಇಲ್ಲ.

ಆ ಬಳಿಕ ಸಲ್ಲು ಹಾಗೂ ಮುರುಗದಾಸ್ ಸಿನಿಮಾನೇ ಮಾಡಲಿಲ್ಲ. ಈಗ ಇಬ್ಬರೂ ಮತ್ತೆ ಒಂದಾಗಿದ್ದಾರೆ. ‘ಸಿಕಂದರ್’ ಚಿತ್ರವನ್ನು ಮುರುಗದಾಸ್ ನಿರ್ದೇಶನ ಮಾಡಿದ್ದು, ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿ. ಈ ಚಿತ್ರ ಮಾರ್ಚ್ 30ರಂದು ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ