ಸ್ಪರ್ಧೆ ಬೇಡ ಎಂಬ ನಿರ್ಧಾರ; ಅಂದುಕೊಂಡಿದ್ದಕ್ಕಿಂತ ಮೊದಲೇ ಆಮಿರ್ ಖಾನ್ ಸಿನಿಮಾ ರಿಲೀಸ್

ಆಮಿರ್ ಖಾನ್ ಅವರ ಮುಂಬರುವ ಚಿತ್ರ 'ಸಿತಾರೆ ಜಮೀನ್ ಪರ್' ಅಂದುಕೊಂಡಿದ್ದಕ್ಕಿಂತ ಮೊದಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಬೇರೆ ದೊಡ್ಡ ಚಿತ್ರಗಳೊಂದಿಗೆ ಸ್ಪರ್ಧಿಸದಿರಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಆಮಿರ್ ಖಾನ್. ಈ ಚಿತ್ರದ ಟ್ರೈಲರ್ ಅಜಯ್ ದೇವಗನ್ ಅವರ 'ರೇಡ್ 2' ಜೊತೆಗೆ ಬಿಡುಗಡೆಯಾಗಲಿದೆ.

ಸ್ಪರ್ಧೆ ಬೇಡ ಎಂಬ ನಿರ್ಧಾರ; ಅಂದುಕೊಂಡಿದ್ದಕ್ಕಿಂತ ಮೊದಲೇ ಆಮಿರ್ ಖಾನ್ ಸಿನಿಮಾ ರಿಲೀಸ್
ಆಮಿರ್ ಖಾನ್

Updated on: Apr 18, 2025 | 6:55 AM

ಆಮಿರ್ ಖಾನ್ (Aamir Khan) ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಆ ಸಂದರ್ಭದಲ್ಲಿ ಬೇರೆ ತಂಡಗಳು ತಮ್ಮ ಚಿತ್ರವನ್ನು ರಿಲೀಸ್ ಮಾಡಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಇತ್ತು. ಆದರೆ, ಈಗ ಆಮಿರ್ ಖಾನ್ ಅವರೇ ಭಯ ಬೀಳುವ ಪರಿಸ್ಥಿತಿ ಬಂದಿದೆ. ಸತತ ಸೋಲು, ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರವೇ ಇದ್ದಿದ್ದು ಈ ಭಯಕ್ಕೆ ಕಾರಣ. ಈಗ ಅವರ ನಟನೆಯ ‘ಸಿತಾರರೇ ಜಮೀನ್ ಪರ್’ ಸಿನಿಮಾ ರಿಲೀಸ್ ಆಗುತ್ತಿದೆ. ಆರ್​ಎಸ್​ ಪ್ರಸನ್ನ ನಿರ್ದೇಶನದ ಈ ಚಿತ್ರ ಜೂನ್ 20ರಂದು ರಿಲೀಸ್ ಆಗುವ ಸಾಧ್ಯತೆ ಇದೆ.

‘ತಾರೇ ಜಮೀನ್ ಪರ್’ ಸಿನಿಮಾ ಮಗುವಿಗೆ ಇರೋ ಅಪರೂಪದ ಕಾಯಿಲೆ ಬಗ್ಗೆ ವಿವರಿಸಿತ್ತು. ಈಗ ಆಮಿರ್ ಇದೇ ರೀತಿಯ ಕತೆಯೊಂದಿಗೆ ‘ಸಿತಾರೇ ಜಮೀನ್ ಪರ್’ ಸಿನಿಮಾ ಮಾಡಿದ್ದಾರೆ. ಈ ಚಿತ್ರ ಡಿಸೆಂಬರ್​​ನಲ್ಲಿ ರಿಲೀಸ್ ಆಗಲಿದೆ ಎಂದು ವರದಿ ಆಗಿತ್ತು. ಆದರೆ, ಕ್ರಿಸ್​ಮಸ್ ಸಂದರ್ಭದಲ್ಲಿ ಹಲವು ದೊಡ್ಡ ಸಿನಿಮಾಗಳು ತೆರೆಗೆ ಬರುತ್ತವೆ. ಈ ಕಾರಣಕ್ಕೆ ಸ್ಪರ್ಧೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಆಮಿರ್ ಖಾನ್ ಅವರು ‘ಸಿತಾರೇ ಜಮೀನ್ ಪರ್’ ಚಿತ್ರವನ್ನು ಜೂನ್ 20ಕ್ಕೆ ತೆರೆಗೆ ತರುವ ಆಲೋಚನೆಯಲ್ಲಿ ಇದ್ದಾರೆ. ಜೂನ್ ತಿಂಗಳಲ್ಲಿ ಯಾವುದೇ ದೊಡ್ಡ ಸಿನಿಮಾಗಳ ಘೋಷಣೆ ಆಗಿಲ್ಲ. ಅಲ್ಲದೆ, ಐಪಿಎಲ್ ಕೂಡ ಪೂರ್ಣಗೊಂಡಿರುತ್ತದೆ. ಈ ಕಾರಣಕ್ಕೆ ಆ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ
ಹೊಸ ಹೆಜ್ಜೆ ಇಡಲು ಸಿದ್ಧರಾದ ಶೈಲಜಾ ನಾಗ್‌-ಬಿ. ಸುರೇಶ್‌ ಮಗಳು ಚಂದನಾ ನಾಗ್‌
ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಸಂಬಂಧ ಈಗ ಹೇಗಿದೆ? ಇಲ್ಲಿದೆ ಉತ್ತರ  
ಪೀರಿಯಡ್ಸ್ ಬಗ್ಗೆ ಓಪನ್​ ಆಗಿ ಮಾತನಾಡೋದು ನಮಗೆ ಈಗಲೂ ನಾಚಿಕೆಯ ವಿಷಯ; ಸಮಂತಾ
ಚಿತ್ರರಂಗದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಪವನ್ ಕಲ್ಯಾಣ್

ಆಮಿರ್ ಖಾನ್ ಅವರ ಈ ಸಿನಿಮಾ ಭಿನ್ನವಾಗಿ ಇರಲಿದೆ. ಇದರಲ್ಲಿ ಯಾವುದೇ ಫೈಟ್ ಇರೋದಿಲ್ಲ. ಈ ಚಿತ್ರದಲ್ಲಿ ನಗು, ಭಾವಾನಾತ್ಮಕ ವಿಚಾರ ಹಾಗೂ ಡ್ರಾಮಾ ಇರಲಿದೆ. ಅಜಯ್ ದೇವಗನ್ ನಟನೆಯ ‘ರೇಡ್ 2’ ಸಿನಿಮಾ ಮೇ 1ರಂದು ರಿಲೀಸ್ ಆಗಲಿದೆ. ಈ ಸಿನಿಮಾದ ಜೊತೆ ಟ್ರೇಲರ್ ಅಟ್ಯಾಚ್ ಆಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: ‘ಸಿತಾರೆ ಜಮೀನ್ ಪರ್’ ಸಿನಿಮಾಕ್ಕೆ ಆಮಿರ್ ಖಾನ್ ಹೊಸ ಅವತಾರ

ಆಮಿರ್ ಖಾನ್ ಅವರು ‘ಲಾಹೋರ್: 1947’ ಸಿನಿಮಾ ನಿರ್ಮಾಣ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಸನ್ನಿ ಡಿಯೋಲ್ ಹೀರೋ. ಆಮಿರ್ ಖಾನ್ ಅವರು ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡಲು ರೆಡಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us