ಐಶ್ವರ್ಯಾ ಮಗಳು ಆರಾಧ್ಯಾಳಲ್ಲಿರುವ ತಪ್ಪು ಕಂಡು ಹಿಡಿಯೋದೇ ಇವರ ಕೆಲಸ
ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಮಗಳು ಆರಾಧ್ಯಾ ಬಚ್ಚನ್ ಗಣಪತಿ ದರ್ಶನಕ್ಕೆ ಭೇಟಿ ನೀಡಿದ್ದು ವೈರಲ್ ಆಗಿದೆ. ಆರಾಧ್ಯಾ ಅವರ ಲುಕ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕರು ಆರಾಧ್ಯಾ ಅವರನ್ನು ಟೀಕೆ ಮಾಡಿದ್ದಾರೆ. ಇದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಾಲಿವುಡ್ ನಟಿ ಐಶ್ವರ್ಯಾ ರೈ ಪ್ರತಿ ವರ್ಷ ಮುಂಬೈನ ಜಿಎಸ್‌ಬಿ ಗಣಪತಿ ದರ್ಶನಕ್ಕೆ ಹೋಗುತ್ತಾರೆ. ಈ ವರ್ಷ ಐಶ್ವರ್ಯಾ ಅವರು ಮಗಳು ಆರಾಧ್ಯಾ ಬಚ್ಚನ್ ಜೊತೆ ತೆರಳಿ ಗಣಪತಿಯ ದರ್ಶನ ಪಡೆದರು. ಐಶ್ವರ್ಯಾ ಮತ್ತು ಆರಾಧ್ಯಾ ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಬಾರಿ, ಆರಾಧ್ಯಾ ಅವರನ್ನು ನೋಡಿದ ನಂತರ, ನೆಟ್ಟಿಗರು ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಆರಾಧ್ಯಾ ಮತ್ತು ಐಶ್ವರ್ಯಾ ಅವರ ವೀಡಿಯೊಗೆ ಅನೇಕ ನೆಟ್ಟಿಗರು ಕಾಮೆಂಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋದಲ್ಲಿ, ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯಾ ಬಚ್ಚನ್ ಗಣೇಶನ ಆಶೀರ್ವಾದ ಪಡೆಯಲು ಭಕ್ತರ ಗುಂಪಿನ ಮೂಲಕ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಮಂಡಲವನ್ನು ಪ್ರವೇಶಿಸುವ ಮೊದಲು, ಇಬ್ಬರೂ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನಿಂತರು. ಐಶ್ವರ್ಯಾ ಮತ್ತು ಆರಾಧ್ಯ ಅವರನ್ನು ನೋಡಲು ಅಭಿಮಾನಿಗಳ ದೊಡ್ಡ ಗುಂಪು ನೆರೆದಿತ್ತು.
‘ಆರಾಧ್ಯಗೆ ಏನಾಗಿದೆ? ಅವಳು ಏಕೆ ವಿಚಿತ್ರವಾಗಿ ಕಾಣುತ್ತಾಳೆ’ ಎಂದು ಕೆಲವರು ಕೇಳಿದ್ದಾರೆ. ‘ತಾಯಿ ಮತ್ತು ಮಗಳು ಇಬ್ಬರೂ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಇದಕ್ಕಾಗಿ ಬೇರೆ ರೀತಿ ಕಾಣುತ್ತಾರೆ’ ಎಂದು ಕೆಲವರು ಹೇಳಿದ್ದಾರೆ. ‘ಆರಾಧ್ಯಾ ತನ್ನ ತಾಯಿಯಂತೆ ಕಾಣುತ್ತಿಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಆರಾಧ್ಯಾಗೆ ಒಂದು ಹೇರ್ ಬ್ಯಾಂಡ್ ಆದರೂ ಕೊಡಿಸಬೇಕಿದೆ’ ಎಂದಿದ್ದಾರೆ. ಆರಾಧ್ಯಾಳ ತಪ್ಪನ್ನೇ ಹುಡುಕೋದು ಕೆಲವರ ಕೆಲಸವಾಗಿದೆ ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ಆರಾಧ್ಯಾ ಬಚ್ಚನ್ ಬೆಳೆಸಿದ ಸಂಪೂರ್ಣ ಕ್ರೆಡಿಟ್ ಐಶ್ವರ್ಯಾಗೆ ಕೊಟ್ಟ ಅಭಿಷೇಕ್ ಬಚ್ಚನ್
ಕಳೆದ ಕೆಲವು ದಿನಗಳಿಂದ ಅಭಿಷೇಕ್ ಮತ್ತು ಐಶ್ವರ್ಯಾ ಅವರ ವಿಚ್ಛೇದನದ ಮಾತುಕತೆಗಳು ಜೋರಾಗಿ ನಡೆಯುತ್ತಿದ್ದವು. ಆದರೆ ಕೆಲವು ದಿನಗಳ ಹಿಂದೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಇದರಿಂದ ವಿಚ್ಛೇದನದ ಮಾತುಕತೆಗಳು ಕೊನೆಗೊಂಡವು. ಆರಾಧ್ಯಾ ಅವರ ಶಾಲಾ ವಾರ್ಷಿಕ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಇದಲ್ಲದೆ, ಐಶ್ವರ್ಯಾ ಕೂಡ ಅಭಿಷೇಕ್ ಅವರ 49 ನೇ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.
View this post on Instagram
ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಐಶ್ವರ್ಯಾ ಮತ್ತು ಅಭಿಷೇಕ್ ಮದುವೆಯಾಗಲು ನಿರ್ಧರಿಸಿದರು. ಐಶ್ವರ್ಯಾ ಮತ್ತು ಅಭಿಷೇಕ್ 2007 ರಲ್ಲಿ ತಮ್ಮ ಕುಟುಂಬಗಳ ಸಮ್ಮುಖದಲ್ಲಿ ವಿವಾಹವಾದರು. ಅವರ ವಿವಾಹದ ಫೋಟೋಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. 2011 ರಲ್ಲಿ, ದಂಪತಿಗಳು ತಮ್ಮ ಮಗಳು ಆರಾಧ್ಯ ಬಚ್ಚನ್ ಅವರನ್ನು ಜಗತ್ತಿಗೆ ಸ್ವಾಗತಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







