ಆರಾಧ್ಯಾ ಬಚ್ಚನ್ ಬೆಳೆಸಿದ ಸಂಪೂರ್ಣ ಕ್ರೆಡಿಟ್ ಐಶ್ವರ್ಯಾಗೆ ಕೊಟ್ಟ ಅಭಿಷೇಕ್ ಬಚ್ಚನ್
Abhishek Bachchan: ಮಗಳು ಆರಾಧ್ಯಾಳನ್ನು ಸಾಕಿ ಅವರಿಗೆ ವ್ಯಕ್ತಿತ್ವ ಕಲಿಸಿದ ಪೂರ್ಣ ಕ್ರೆಡಿಟ್ ಅನ್ನು ಅಭಿಷೇಕ್ ಬಚ್ಚನ್ ಅವರು ತಮ್ಮ ಪತ್ನಿ ಐಶ್ವರ್ಯಾ ರೈ ಅವರಿಗೆ ನೀಡಿದ್ದಾರೆ. ಸಂದರ್ಶನದಲ್ಲಿ ಐಶ್ವರ್ಯಾ ಅವರ ನಿಸ್ವಾರ್ಥ ತ್ಯಾಗವನ್ನು ಅವರು ಮೆಚ್ಚಿಕೊಂಡಿದ್ದಾರೆ. ಅಭಿಷೇಕ್ ಅವರ ಚಲನಚಿತ್ರ ವೃತ್ತಿಜೀವನ ಮತ್ತು ಕುಟುಂಬ ಜೀವನದ ಬಗ್ಗೆಯೂ ಚರ್ಚಿಸಲಾಗಿದೆ. ಐಶ್ವರ್ಯಾ ಮತ್ತು ಅಭಿಷೇಕ್ ಅವರ ವಿಚ್ಛೇದನದ ವದಂತಿಗಳನ್ನು ಅವರು ನಿರಾಕರಿಸಿದ್ದಾರೆ.

ಅಭಿಷೇಕ್ ಬಚ್ಚನ್ (Abhishek Bachchan) ಅವರು ಐಶ್ವರ್ಯಾ ರೈ ಜೊತೆ ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರಿಗೆ ಆರಾಧ್ಯಾ ಹೆಸರಿನ ಮಗಳು ಇದ್ದಾರೆ. ಮಗಳು ಹುಟ್ಟಿದ ಬಳಿಕ ಐಶ್ವರ್ಯಾ ಅವರು ಸಿನಿಮಾ ಮಾಡಿದ್ದು ತುಂಬಾನೇ ಕಡಿಮೆ ಎಂದರೂ ತಪ್ಪಾಗಲಾರದು. ಈಗ ಅಭಿಷೇಕ್ ಬಚ್ಚನ್ ಅವರು ಮಗಳನ್ನು ಬೆಳೆಸಿದ ಸಂಪೂರ್ಣ ಕ್ರೆಡಿಟ್ನ ಅಭಿಷೇಕ್ ಅವರು ಐಶ್ವರ್ಯಾಗೆ ನೀಡಿದ್ದಾರೆ. ನವಂದೀಪ್ ರಕ್ಷಿತ್ ಜೊತೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಅವರು ಈ ಮಾತನ್ನು ಹೇಳಿದರು.
ಅಭಿಷೇಕ್ ಬಚ್ಚನ್ ಅವರು ‘ನಾನು ಆರಾಧ್ಯಾ ತಾಯಿ ಐಶ್ವರ್ಯಾಗೆ ಸಂಪೂರ್ಣವಾಗಿ ಕ್ರೆಡಿಟ್ ಕೊಡುತ್ತೇನೆ. ನಾನು ನನ್ನ ಸಿನಿಮಾಗಳನ್ನು ಮಾಡಲು ಹೊರಗೆ ಹೋಗುತ್ತೇನೆ. ಆದರೆ ಐಶ್ವರ್ಯಾ ಆರಾಧ್ಯ ಜೊತೆ ಮನೆಯಲ್ಲೇ ಇದ್ದು, ಅವಳ ಬೆಳೆಸೋ ಕೆಲಸ ಮಾಡಿದ್ದಾರೆ. ಅವರು ನಿಜಕ್ಕೂ ಅದ್ಭುತ, ನಿಸ್ವಾರ್ಥಿ. ನನಗೆ ಅದು ಅದ್ಭುತವೆನಿಸುತ್ತದೆ. ತಾಯಂದಿರು ಮಾತ್ರ ತ್ಯಾಗಮಯಿ ಗುಣ ಹೊಂದಿರುತ್ತಾರೆ’ ಎಂದಿದ್ದಾರೆ.
ಇದನ್ನೂ ಓದಿ:ಆರಾಧ್ಯಾ ವಿಚಾರದಲ್ಲಿ ಟೀಕೆ ಎದುರಿಸಿದ ಐಶ್ವರ್ಯಾ ರೈ
‘ತಂದೆಯಂದಿರು ಯಾವಾಗಲೂ ಹೊರಗೆ ಹೋಗಿ ಕೆಲಸ ಮಾಡುತ್ತಾರೆ. ಆದರೆ, ತಾಯಂದಿರು ನಿಂತು ಮಕ್ಕಳನ್ನು ಸಾಕುತ್ತಾರೆ. ಆರಾಧ್ಯಾಳ ಬೆಳೆಸಿದ ಕ್ರೆಡಿಟ್ ಐಶ್ವರ್ಯಾಗೆ ಸೇರುತ್ತದೆ’ ಎಂದು ಅವರು ಹೇಳಿದ್ದಾರೆ. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ 2007ರಲ್ಲಿ ವಿವಾಹ ಆದರು. 2011ರ ನವೆಂಬರ್ನಲ್ಲಿ ಆರಾಧ್ಯಾ ಜನಿಸಿದಳು. ಇತ್ತೀಚೆಗೆ ಐಶ್ವರ್ಯಾ ಹಾಗೂ ಅಭಿಷೇಕ್ ಬೇರೆ ಆಗುತ್ತಾರೆ ಎನ್ನವ ಸುದ್ದಿ ಇದೆ. ಆದರೆ, ಇದನ್ನು ಅವರು ಒಪ್ಪಿಲ್ಲ. ಪ್ರತಿ ಬಾರಿ ಅವರು ಇದನ್ನು ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ.
ಅಭಿಷೇಕ್ ಬಚ್ಚನ್ ಅವರು 25 ವರ್ಷ ಚಿತ್ರರಂಗದಲ್ಲಿ ಕಳೆದಿದ್ದಾರೆ. ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಇತ್ತೀಚೆಗೆ ಅವರು ನಟನೆ ‘ಹೌಸ್ಫುಲ್ 5’ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಯಶಸ್ಸು ಕಂಡಿತು. ಅವರು ಸೋಲೋ ಹೀರೋ ಆಗಿ ಗೆಲುವು ಕಂಡಿಲ್ಲ. ಅವರು ‘ಕಿಂಗ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್, ಅವರ ಮಗಳು ಸುಹಾನಾ ಖಾನ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ವಿಲನ್ ಪಾತ್ರವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ