ಸೈಫ್ ಅಲಿ ಖಾನ್ ಕೈತಪ್ಪಿ ಹೋಯ್ತು 15 ಸಾವಿರ ಕೋಟಿ ಮೌಲ್ಯದ ಆಸ್ತಿ
Saif Ali Khan: ಬಾಲಿವುಡ್ನ ಸ್ಟಾರ್ ನಟ ಸೈಪ್ ಅಲಿ ಖಾನ್ ಅವರದ್ದು ನವಾಬರ ಕುಟುಂಬ. ಒಂದು ಸಮಯದಲ್ಲಿ ಭಾರತದ ಶ್ರೀಮಂತ ಕುಟುಂಬ ಅವರದ್ದು. ಈಗಾಗಲೇ ವಂಶಪಾರ್ಯಂಪರವಾಗಿ ಹಲವು ಆಸ್ತಿಗಳು ಅವರಿಗೆ ಬಂದಿವೆ. ಆದರೆ ಇದೀಗ ಸುಮಾರು 15 ಸಾವಿರ ಕೋಟಿ ಮೌಲ್ಯದ ಆಸ್ತಿಯೊಂದನ್ನು ಸೈಫ್ ಅಲಿ ಖಾನ್ ಮತ್ತು ಕುಟುಂಬ ಕಳೆದುಕೊಂಡಿದೆ. ಯಾವುದು ಆ ಆಸ್ತಿ?

ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan), ನವಾಬ್ ಕುಟುಂಬದವರು. ಒಂದು ಕಾಲದ ಅರಸರ ಕುಟುಂಬ ಅವರದ್ದು. ಈಗಲೂ ಸಹ ಅವರನ್ನು ನವಾಬ್ ಎಂದೇ ಅಭಿಮಾನಿಗಳು ಕರೆಯುತ್ತಾರೆ. ಅವರ ಪಟೌಡಿ ಕುಟುಂಬ ಭಾರತದ ಶ್ರೀಮಂತ ಕುಟುಂಬದಲ್ಲಿ ಒಂದಾಗಿತ್ತು. ಈಗಲೂ ಸಹ ಸೈಫ್ ಕುಟುಂಬದ ಸುಪರ್ಧಿಯಲ್ಲಿ ಸಾವಿರಾರು ಕೋಟಿ ಮೌಲ್ಯದ ಆಸ್ತಿಗಳು ಇವೆ. ಆದರೆ ಇತ್ತೀಚೆಗೆ ಭಾರಿ ದೊಡ್ಡ ಮೌಲ್ಯದ ಆಸ್ತಿಯೊಂದನ್ನು ಸೈಫ್ ಅಲಿ ಖಾನ್ ಕಳೆದುಕೊಂಡಿದ್ದಾರೆ. ಸುಮಾರು 10 ವರ್ಷಗಳಿಂದಲೂ ನಡೆಯುತ್ತಿದ್ದ ಕಾನೂನು ಹೋರಾಟದಲ್ಲಿ ಸೈಫ್ಗೆ ಭಾರಿ ಹಿನ್ನಡೆ ಆಗಿದೆ.
ಮಧ್ಯ ಪ್ರದೇಶದ ಭೂಪಾಲದಲ್ಲಿ ನವಾಬರಿಗೆ ಸೇರಿದ ಭಾರಿ ಮೌಲ್ಯದ ಆಸ್ತಿ ಮತ್ತು ಅರಮನೆ ಒಂದಿದೆ. ಈ ಅರಮನೆಯ ಒಡೆತನಕ್ಕೆ ಸಂಬಂಧಿಸಿದಂತೆ ಕಳೆದ ಇಪ್ಪತ್ತು ವರ್ಷಗಳಿಂದಲೂ ಕಾನೂನು ಹೋರಾಟ ನಡೆದಿತ್ತು. ಸೈಫ್ ಅಲಿ ಖಾನ್ ಕುಟುಂಬದವರು ಸಹ ಹಲವು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ಹಾಕಿಕೊಂಡಿದ್ದರು. ಆದರೆ ಇತ್ತೀಚೆಗೆ ಮಧ್ಯ ಪ್ರದೇಶ ಹೈಕೋರ್ಟ್ ನೀಡಿರುವ ತೀರ್ಪಿನಂತೆ, ಭೋಪಾಲದ ಸುಮಾರು 15 ಸಾವಿರ ಕೋಟಿ ಮೌಲ್ಯದ ಆಸ್ತಿ ಸೈಫ್ ಅಲಿ ಖಾನ್ ಕೈತಪ್ಪಿದೆ.
1999 ರಲ್ಲಿ ಎರಡು ಸಿವಿಲ್ ಮೊಕದ್ದಮೆಗಳನ್ನು ಭೋಪಾಲದ ನವಾಬ್ ಆಸ್ತಿಯ ಕುರಿತಾಗಿ ಹೂಡಲಾಯಿತು. ಆಸ್ತಿಯ ವಿಭಜನೆ, ಸ್ವಾಧೀನ ಮತ್ತು ಪೂರ್ವಜರ ಆಸ್ತಿಯ ಸರಿಯಾದ ಲೆಕ್ಕಪತ್ರವನ್ನು ಕೋರಿ ಅರ್ಜಿಗಳನ್ನು ಹಾಕಲಾಗಿತ್ತು. 1960 ರಲ್ಲಿ ನವಾಬ್ ಹಮೀದುಲ್ಲಾ ಖಾನ್ ನಿಧನದ ಬಳಿಕ ಭೂಪಾಲದ ಆಸ್ತಿಯ ವಿವಾದ ಪ್ರಾರಂಭವಾಯ್ತು. ಮುಸ್ಲಿಂ ಪರ್ಸನಲ್ ಲಾ ಪ್ರಕಾರ, ನವಾಬ್ ಹಮೀದುಲ್ಲಾ ಖಾನ್ ಆಸ್ತಿಗೆ ಅವರ ಮಗಳು ಮಾತ್ರ ಪಾಲುದಾರರಲ್ಲದೆ, ಅವರ ಕುಟುಂಬದವರೆಲ್ಲ ಪಾಲುದಾರರು ಎಂದು ಪರಿಗಣಿಸಬೇಕು ಎಂದಿದೆ. ಆದರೆ 1962ರಲ್ಲಿ ಸರ್ಕಾರ ಬರೆದಿರುವ ಪತ್ರದಂತೆ ನವಾಬ್ ಹಮೀದುಲ್ಲಾ ಖಾನ್ ಪುತ್ರ ಸಜಿದಾ ಸುಲ್ತಾನ್ ಮಾತ್ರವೇ ಅವರ ತಂದೆಯ ಆಸ್ತಿಯ ಒಡತಿ ಎಂದು ಘೋಷಿಸಿತು. 1949ರ ವಿಲೀನ ಒಪ್ಪಂದದಂತೆ ಸಜಿದಾ ಸುಲ್ತಾನ್ ಅವರನ್ನು ಏಕೈಕ ಮಾಲಕಿ ಆಗಿ ಘೋಷಿಸಲಾಗಿತ್ತು.
ಇದನ್ನೂ ಓದಿ:ಬಾಲಿವುಡ್ನ ಹೊಸ ಯುವ ಜೋಡಿ, ಕಾರ್ತಿಕ್ ಜೊತೆಗೆ ಕನ್ನಡತಿ ಶ್ರೀಲೀಲಾ ಡೇಟಿಂಗ್
ಸಾಜಿದಾ ಸುಲ್ತಾನ್ ಅವರು ಸೈಫ್ ಅಲಿ ಖಾನ್ ಅವರ ಸ್ವಂತ ಅಜ್ಜಿ. ಅಂದರೆ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ತಾಯಿ. ಸಾಜಿದಾ ಸುಲ್ತಾನ್ ಅವರನ್ನು ನವಾಬ್ ಬೇಗಮ್ ಆಫ್ ಭೂಪಾಲ್ ಎಂದೇ ಕರೆಯಲಾಗಿತ್ತು. ಆದರೆ ಇದೀಗ ಮಧ್ಯ ಪ್ರದೇಶ ಹೈಕೋರ್ಟ್ ನೀಡಿರುವ ಆದೇಶದಂತೆ ಭೂಪಾಲದ ಆಸ್ತಿಯನ್ನು ‘ಶತ್ರು ಆಸ್ತಿ’ ಎಂದು ಪರಿಗಣಿಸಲಾಗಿದೆ. ಆ ಮೂಲಕ ಸೈಫ್ ಅಲಿ ಖಾನ್, ಅವರ ತಾಯಿ ಹಾಗೂ ಸಹೋದರಿಗೆ ಆ ಆಸ್ತಿಯಲ್ಲಿ ಹಕ್ಕಿಲ್ಲದಂತೆ ಆಗಿದೆ. ಆದರೆ ಸೈಫ್ ಅಲಿ ಖಾನ್ ಕುಟುಂಬದವರು ಇದೀಗ ಸುಪ್ರೀಂಕೋರ್ಟ್ಗೆ ಮೊರೆ ಹೋಗುವ ಸಾಧ್ಯತೆ ಇದೆ.
ಸೈಫ್ ಅಲಿ ಖಾನ್ ಒಡೆತನದಲ್ಲಿ ಅವರ ಕುಟುಂಬದ ಒಡೆತನದಲ್ಲಿ ಇನ್ನೂ ಕೆಲವು ಅರಮನೆಗಳು, ವಂಶಪಾರಂಪರ್ಯವಾಗಿ ಬಂದಿರುವ ಆಸ್ತಿಗಳು ಕೆಲವು ಇವೆ. ಕೆಲವು ಆಸ್ತಿಗಳು ಈಗಾಗಲೇ ಕುಟುಂಬದ ಕೈತಪ್ಪಿ ಹೋಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ