ಸೆಲೆಬ್ರಿಟಿಗಳ ಹೋಲಿಕೆ ಇದೆ ಎಂಬ ಕಾರಣಕ್ಕೆ ಅನೇಕರು ಖ್ಯಾತಿ ಪಡೆದುಕೊಂಡ ಉದಾಹರಣೆ ಇದೆ. ವಿರಾಟ್ ಕೊಹ್ಲಿ (Virat Kohli), ಸಲ್ಮಾನ್ ಖಾನ್, ಹೃತಿಕ್ ರೋಷನ್ ರೀತಿ ಕಾಣಿಸಿಕೊಂಡ ಕಾರಣಕ್ಕೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಐಶ್ವರ್ಯಾ ರೈ (Aishwarya Rai) ರೀತಿಯಲ್ಲೇ ಕಾಣುವ ಆಶಿತಾ ಸಿಂಗ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಅವರಿಗೆ ಲಕ್ಷಾಂತರ ಮಂದಿ ಹಿಂಬಾಲಕರು ಇದ್ದಾರೆ.
ಐಶ್ವರ್ಯಾ ರೈ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಬಣ್ಣದ ಲೋಕದಲ್ಲಿ ಐಶ್ವರ್ಯಾ ರೈ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅಳೆದು, ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಅವರ ಜನಪ್ರಿಯತೆ ಕಡಿಮೆ ಆಗಿಲ್ಲ. ಅವರ ಅಭಿಮಾನಿ ಬಳಗ ದೊಡ್ಡದಾಗುತ್ತಿದೆ. ಅದೇ ರೀತಿ ಅವರಂತೆ ಕಾಣುವ ಆಶಿತಾ ಸಿಂಗ್ ಸಾಕಷ್ಟು ಹೆಸರು ಮಾಡುತ್ತಿದ್ದಾರೆ. ಅವರ ಹೊಸಹೊಸ ರೀಲ್ಸ್ ವೈರಲ್ ಆಗುತ್ತಿದೆ.
ಆಶಿತಾ ಹಂಚಿಕೊಂಡ ಹೊಸ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನೀವು ಐಶ್ವರ್ಯಾ ರೈ ಪ್ರೋ ಮ್ಯಾಕ್ಸ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ‘ಸಲ್ಮಾನ್ ಖಾನ್ ನಿಮಗೆ ಪ್ರಪೋಸ್ ಮಾಡಿದರೆ ನೀವು ಯಾವ ರೀತಿಯಲ್ಲಿ ಉತ್ತರಿಸುತ್ತೀರಿ’ ಎಂಬ ಪ್ರಶ್ನೆಯನ್ನು ಇಟ್ಟಿದ್ದಾರೆ. ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಒಂದು ಕಾಲದಲ್ಲಿ ಪ್ರೀತಿಯಲ್ಲಿದ್ದರು. ಇಬ್ಬರೂ ಡೇಟಿಂಗ್ ನಡೆಸಿದ್ದರು. ಆದರೆ, ಇವರ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ.
ಐಶ್ವರ್ಯಾ ರೈ ಅವರು ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ತಮಿಳು ಸಿನಿಮಾ ಆಗಿದ್ದು ಮಣಿ ರತ್ನಮ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿಯಾನ್ ವಿಕ್ರಮ್, ಕಾರ್ತಿ, ತ್ರಿಷಾ ಸೇರಿ ಅನೇಕ ಸ್ಟಾರ್ಗಳು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಐಶ್ವರ್ಯಾ ಅವರ ಪಾತ್ರ ಈಗಾಗಲೇ ರಿವೀಲ್ ಆಗಿದೆ.