AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂಟ್ಯೂಬ್ ವಿರುದ್ಧ ಅಭಿಷೇಕ್-ಐಶ್ವರ್ಯಾ ಮೊಕದ್ದಮೆ, ನಾಲ್ಕು ಕೋಟಿ ಪರಿಹಾರಕ್ಕೆ ಬೇಡಿಕೆ

Abhishek Bachchan and Aishwarya Rai: ಬಾಲಿವುಡ್​ನ ತಾರಾ ಜೋಡಿ ಆಗಿರುವ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರುಗಳು ಯೂಟ್ಯೂಬ್ ಹಾಗೂ ಗೂಗಲ್ ಸಂಸ್ಥೆಯ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿವೆ. ಜೊತೆಗೆ ಕೆಲ ಯೂಟ್ಯೂಬ್ ಚಾನೆಲ್​​ಗಳ ಮೇಲೂ ಸಹ ದೂರು ದಾಖಲಿಸಿದ್ದು, ನಾಲ್ಕು ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಷ್ಟಕ್ಕೂ ಪ್ರಕರಣ ಏನು?

ಯೂಟ್ಯೂಬ್ ವಿರುದ್ಧ ಅಭಿಷೇಕ್-ಐಶ್ವರ್ಯಾ ಮೊಕದ್ದಮೆ, ನಾಲ್ಕು ಕೋಟಿ ಪರಿಹಾರಕ್ಕೆ ಬೇಡಿಕೆ
Abhishek Bachchan Aishwarya
ಮಂಜುನಾಥ ಸಿ.
|

Updated on: Oct 02, 2025 | 5:43 PM

Share

ಸಿನಿಮಾ ತಾರೆಯರ ಹಲವಾರು ವಿಡಿಯೋಗಳು, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಇಂಟರ್ನೆಟ್​​ನ ಹಲವು ಸ್ಪೇಸ್​​ನಲ್ಲಿ ಹರಿದಾಡುತ್ತಲೇ ಇರುತ್ತವೆ. ನಟ-ನಟಿಯರ ಸಿನಿಮಾ ದೃಶ್ಯಗಳು, ಅವರ ಖಾಸಗಿ ಕಾರ್ಯಕ್ರಮ ಹೀಗೆ ಹಲವಾರು ವಿಚಾರಗಳ ಬಗ್ಗೆ ದಿನಕ್ಕೆ ಸಾವಿರಾರು ವಿಡಿಯೋಗಳು ಯೂಟ್ಯೂಬ್​​ಗೆ ಅಪ್​ಲೋಡ್ ಆಗುತ್ತಲೇ ಇರುತ್ತವೆ. ಸಿನಿಮಾ ಮಂದಿಗೆ ಯೂಟ್ಯೂಬ್​​ ಒಂದು ಪ್ರಚಾರ ಮಾಧ್ಯಮವೂ ಹೌದು. ಆದರೆ ಈಗ ಬಾಲಿವುಡ್​ನ ತಾರಾ ಜೋಡಿಯಾಗಿರುವ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರುಗಳು ಯೂಟ್ಯೂಬ್ ವಿರುದ್ಧವೇ ಮೊಕದ್ದಮೆ ದಾಖಲಿಸಿದ್ದಾರೆ ಮಾತ್ರವಲ್ಲದೆ ನಾಲ್ಕು ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇರಿಸಿದ್ದಾರೆ.

ಅಭಿಷೇಕ್ ಮತ್ತು ಐಶ್ವರ್ಯಾ ರೈ ಅವರ ಹಲವಾರು ವಿಡಿಯೋಗಳು ಯೂಟ್ಯೂಬ್​​​ನಲ್ಲಿ ಈಗಾಗಲೇ ಲಭ್ಯವಿದೆ. ಆದರೆ ಇತ್ತೀಚೆಗೆ ಎಐ ಬಳಸಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಸುಳ್ಳು ವಿಡಿಯೋಗಳನ್ನು ಸೃಷ್ಟಿಸಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್ ಮಾಡಲಾಗುತ್ತಿದೆ. ಅದರಲ್ಲೂ ಯೂಟ್ಯೂಬ್​​​ನಲ್ಲಿ ಈ ರೀತಿಯ ನಕಲಿ ವಿಡಿಯೋಗಳ ಹಾವಳಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಇದೀಗ ಅಭಿಷೇಕ್ ಮತ್ತು ಐಶ್ವರ್ಯಾ ರೈ ಅವರುಗಳು ಯೂಟ್ಯೂಬ್​​ನ ಮಾತೃಸಂಸ್ಥೆ ಆಗಿರುವ ಗೂಗಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ಇತ್ತೀಚೆಗಷ್ಟೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರುಗಳು ನ್ಯಾಯಾಲಯದ ಮೊರೆ ಹೋಗಿ ತಮ್ಮ ವ್ಯಕ್ತಿತ್ವದ ಹಕ್ಕನ್ನು ಪಡೆದುಕೊಂಡಿದ್ದಾರೆ. ತಮ್ಮ ಚಿತ್ರ, ಧ್ವನಿ, ಹೆಸರು, ವ್ಯಕ್ತಿತ್ವ, ಹಾವಭಾವದ ನಕಲುಗಳನ್ನು ಅವರ ಅನುಮತಿ ಇಲ್ಲದೆ ಎಲ್ಲಿಯೂ ಬಳಸುವಂತಿಲ್ಲ. ಅದರ ಬೆನ್ನಲ್ಲೆ ತಮ್ಮ ಅನುಮತಿ ಇಲ್ಲದೆ ಅಪ್​ಲೋಡ್ ಆಗಿರುವ ವಿಡಿಯೋಗಳನ್ನು ತೆಗೆಯುವಂತೆ ಯೂಟ್ಯೂಬ್​​ಗೆ ಮನವಿ ಸಹ ಮಾಡಿದ್ದರು. ಆದರೆ ಇತ್ತೀಚೆಗೆ ಅಭಿಷೇಕ್ ಮತ್ತು ಐಶ್ವರ್ಯಾ ರೈ ಅವರುಗಳ ಎಐ ವಿಡಿಯೋಗಳು ಒಂದರ ಹಿಂದೊಂದು ಬಿಡುಗಡೆ ಆದ ಬೆನ್ನಲ್ಲೆ ಇದೀಗ ದೆಹಲಿ ಹೈಕೋರ್ಟ್​​ನಲ್ಲಿ ಗೂಗಲ್ ಹಾಗೂ ಯೂಟ್ಯೂಬ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಇದನ್ನೂ ಓದಿ:ಅಭಿಷೇಕ್ ಅಬ್ಬರಕ್ಕೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ರ‍್ಯಾಂಕಿಂಗ್ ಷೇಕ್ ಷೇಕ್ 

ತಮಗೆ ಆಗಿರುವ ನಷ್ಟಕ್ಕೆ 4.50 ಲಕ್ಷ ಡಾಲರ್ ಅಂದರೆ ನಾಲ್ಕು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಬಗ್ಗೆ ಯೂಟ್ಯೂಬ್​​​ನಲ್ಲಿ ಅಪ್​ಲೋಡ್ ಆಗಿರುವ ವಿಡಿಯೋಗಳಲ್ಲಿ ಲೈಂಗಿಕತೆಯ ಅಂಶಗಳು ಇದೆಯೆಂದು ದಂಪತಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನಲ್ಲಿ ‘ಎಐ ಬಾಲಿವುಡ್ ಇಷ್ಕ್​’ ಹೆಸರಿನ ಯೂಟ್ಯೂಬ್ ಚಾನೆಲ್​​ನ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಯೂಟ್ಯೂಬ್ ಚಾನೆಲ್​​ನಲ್ಲಿ 259 ಎಐ ಜನರೇಟೆಡ್ ವಿಡಿಯೋಗಳಿದ್ದು ಬಹುತೇಕ ವಿಡಿಯೋಗಳು ಬಾಲಿವುಡ್ ನಟ-ನಟಿಯರ ಬಗೆಗೆ ಆಗಿದೆ. ವಿಡಿಯೋಗಳಲ್ಲಿ ಅಶ್ಲೀಲ ಭಾಷೆ, ಚಿತ್ರಗಳನ್ನು ಸಹ ಬಳಸಲಾಗಿದೆ.

ದಂಪತಿ ದಾಖಲಿಸಿರುವ ದೂರಿನಲ್ಲಿ ಯೂಟ್ಯೂಬ್​​ನ ವಿಡಿಯೋ ಹಾಗೂ ಪ್ರೈವಸಿ ಪಾಲಿಸಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಲಾಗಿದ್ದು, ಈ ಪಾಲಿಸಿಗಳು ವ್ಯಕ್ತಿಯ ಖಾಸಗಿತನ ಹಕ್ಕುಗಳಿಗೆ ಅನುಗುಣವಾಗಿಲ್ಲ ಎಂದು ಸಹ ವಾದಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ