ಐಶ್ವರ್ಯಾ ಹಾಗೂ ಅಭಿಷೇಕ್ ವಿಚ್ಛೇದನ ಪಡೆಯದೆ ಇರಲು ಇದುವೇ ಕಾರಣ

| Updated By: ರಾಜೇಶ್ ದುಗ್ಗುಮನೆ

Updated on: Aug 10, 2024 | 9:06 AM

ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಒಟ್ಟಾಗಿ ಇಲ್ಲ ಎನ್ನಲಾಗಿದೆ. ಅವರು ತಾಯಿ ಮನೆಯಲ್ಲಿ ವಾಸವಾಗಿದ್ದಾರಂತೆ. ಅಭಿಷೇಕ್ ಹಾಗೂ ಐಶ್ವರ್ಯಾ ಮಧ್ಯೆ ಏನಾಯಿತು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸಂಬಂಧ ಇನ್ನೂ ಹಾಗೆಯೇ ಇರಲು ಮಗಳು ಆರಾಧ್ಯಾ ಕಾರಣ ಎನ್ನಲಾಗಿದೆ.

ಐಶ್ವರ್ಯಾ ಹಾಗೂ ಅಭಿಷೇಕ್ ವಿಚ್ಛೇದನ ಪಡೆಯದೆ ಇರಲು ಇದುವೇ ಕಾರಣ
ಅಭಿಷೇಕ್-ಐಶ್ವರ್ಯಾ
Follow us on

ಕಳೆದ ಕೆಲವು ದಿನಗಳಿಂದ ಬಚ್ಚನ್ ಕುಟುಂಬದಲ್ಲಿ ವಿಚ್ಛೇದನದ ಮಾತುಗಳು ಜೋರಾಗಿದೆ. ಆದರೆ ಕುಟುಂಬದ ಯಾವುದೇ ಸದಸ್ಯರು ಇನ್ನೂ ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡಿಲ್ಲ. ಬಚ್ಚನ್ ಕುಟುಂಬ ಅಭಿಮಾನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ಐಶ್ವರ್ಯಾ ಹಾಗೂ ಅಭಿಷೇಕ್ ಪ್ರತ್ಯೇಕವಾಗಿ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆಗೆ ಆಗಮಿಸಿದ್ದು ಇವರ ವಿಚ್ಛೇದನ ಹುಟ್ಟಲು ಕಾರಣ. ಐಶ್ವರ್ಯಾ-ಅಭಿಷೇಕ್ ಜಗಳವಾಡಿದರೂ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.

ಮಾಧ್ಯಮ ವರದಿಗಳ ಪ್ರಕಾರ ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಒಟ್ಟಾಗಿ ಇಲ್ಲ. ಇಬ್ಬರ ನಡುವೆ ಏನಾಯಿತು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸಂಬಂಧ ಇನ್ನೂ ಹಾಗೆಯೇ ಇರಲು ಮಗಳು ಆರಾಧ್ಯಾ ಕಾರಣ ಎನ್ನಲಾಗಿದೆ. ಸಂದರ್ಶನ ಒಂದರಲ್ಲಿ ಅಭಿಷೇಕ್ ಅವರು ಮಾತೊಂದನ್ನು ಹೇಳಿದ್ದರು. ‘ಆರಾಧ್ಯ ಹುಟ್ಟಿದ ನಂತರ ಐಶ್ವರ್ಯಾ ಕೆಲಸ ಮಾಡಲು ಬಯಸಿದರೆ ಮಗುವನ್ನು ನಾನು ನೋಡಿಕೊಳ್ಳುತ್ತೇನೆ’ ಎಂದಿದ್ದರು.

ಬಚ್ಚನ್ ಕುಟುಂಬದಲ್ಲಿ ಇದುವರೆಗೆ ಯಾವುದೇ ವಿಚ್ಛೇದನಗಳು ನಡೆದಿಲ್ಲ. ಐಶ್ವರ್ಯಾ-ಅಭಿಷೇಕ್ ಕಹಿ ಸಂಬಂಧದ ನಂತರವೂ ಒಟ್ಟಿಗೆ ಇರಲು ಇದೇ ಕಾರಣ ಎನ್ನಲಾಗಿದೆ. ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಮದುವೆ ಆಗಿ ಹಲವು ದಶಕ ಕಳೆದಿದೆ. ರೇಖಾ ಜೊತೆ ಅಮಿತಾಭ್ ಹೆಸರು ಕೇಳಿ ಬಂತು. ಆದಾಗ್ಯೂ ಅಮಿತಾಭ್ ಜೊತೆ ಜಯಾ ನಿಂತಿದ್ದಾರೆ.

ಶ್ವೇತಾ ಬಚ್ಚನ್ ಮತ್ತು ನಿಖಿಲ್ ನಂದಾ ಅವರ ಸಂಬಂಧವು ಮುರಿದು ಹೋಗಿದೆ ಎನ್ನಲಾಗಿದೆ. ಈಗ ಶ್ವೇತಾ ಹೆಚ್ಚು ಕಾಲ ತಂದೆ ಅಮಿತಾಭ್​ ಬಚ್ಚನ್ ಮನೆಯಲ್ಲಿಯೇ ಇರುತ್ತಾರೆ. ಕುಟುಂಬದ ಮಾನ ಉಳಿಸಲು ಶ್ವೇತಾ ಅವರು ನಿಖಿಲ್​ಗೆ ವಿಚ್ಛೇದನ ನೀಡಿಲ್ಲ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ಐಶ್ವರ್ಯಾಗೆ ಕಾರು ಉಡುಗೊರೆ ಕೊಟ್ಟ ಅಭಿಷೇಕ್ ಬಚ್ಚನ್? ವಿಚ್ಛೇದನ ವದಂತಿಗೆ ಬ್ರೇಕ್

ಬಚ್ಚನ್ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳನ್ನು ನೋಡಿದ ಐಶ್ವರ್ಯಾ ರೈ ಅವರು ಮಗಳು ಆರಾಧ್ಯಾ ಅವರ ಜೊತೆ ತಾಯಿಯ ಮನೆಯಲ್ಲಿಯೇ ಇರುತ್ತಾರೆ. ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಪಡೆಯಬಾರದು ಎಂಬುದು ಅಭಿಮಾನಿಗಳ ಅಪೇಕ್ಷೆ. ಈಗ ಇಬ್ಬರೂ ಮೊದಲಿನಂತೆ ಅನೇಕ ಕಡೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಐಶ್ವರ್ಯಾ- ಅಭಿಷೇಕ್ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:05 am, Sat, 10 August 24