ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ವಿಚ್ಛೇದನ ವದಂತಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈಗಾಗಲೇ ಇವರು ಬೇರೆ ಬೇರೆ ಆಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಅಭಿಷೇಕ್ ಬಚ್ಚನ್ ಅವರು ನೀಡಿದ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ‘ನಾನಿನ್ನೂ ವಿವಾಹಿತ’ ಎಂದು ಅವರು ಹೇಳಿಕೆ ನೀಡಿದ್ದಾರೆ. ಇದರಿಂದ ಅಭಿಷೇಕ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಇತ್ತೀಚೆಗೆ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಅನಂತ್ ಅಂಬಾನಿ ಮದುವೆಗೂ ಇವರು ಪ್ರತ್ಯೇಕವಾಗಿ ಬಂದಿದ್ದು ಚರ್ಚೆ ಹುಟ್ಟುಹಾಕಿತು. ಆ ಬಳಿಕ ಡಿವೋರ್ಸ್ಗೆ ಸಂಬಂಧಿಸಿದ ಪೋಸ್ಟ್ ಲೈಕ್ ಮಾಡಿ ಅವರು ಸುದ್ದಿ ಆದರು. ಅಭಿಷೇಕ್ ಬಚ್ಚನ್ ಅವರು ಮಾಧ್ಯಮಗಳ ಕೈಗೆ ಸಿಗುತ್ತಿಲ್ಲ. ಪ್ರೆಸ್ಮೀಟ್ಗಳಲ್ಲಿ ಭಾಗಿ ಆಗುತ್ತಿಲ್ಲ. ಹೀಗಿರುವಾಗಲೇ ಅವರು ವಿದೇಶಿ ಮಾಧ್ಯಮ ಒಂದಕ್ಕೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
‘ವದಂತಿಗಳ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ನೀವೆಲ್ಲರೂ ಬೇರೆ ರೀತಿಯಲ್ಲೇ ಸುದ್ದಿ ಪ್ರಕಟಿಸಿದ್ದೀರಿ. ನೀವು ಏನ್ನಾದರೂ ಒಂದು ಸುದ್ದಿ ಪ್ರಕಟಿಸಬೇಕು. ಅದು ನನಗೆ ಅರ್ಥವಾಗುತ್ತದೆ. ನಾವು ಸೆಲೆಬ್ರಿಟಿಗಳು ಅದನ್ನು ತೆಗೆದುಕೊಳ್ಳಬೇಕು’ ಎಂದು ಅಭಿಷೇಕ್ ಹೇಳಿರೋದಾಗಿ ವರದಿ ಆಗಿದೆ. ‘ನಾನಿನ್ನೂ ವಿವಾಹಿತ’ ಎಂದು ಅವರು ಹೇಳಿದ್ದಾರಂತೆ.
ಅಭಿಷೇಕ್ ಹಾಗೂ ಐಶ್ವರ್ಯಾ ಸಂಬಂಧಕ್ಕೆ 17 ವರ್ಷ. ಈ ದಂಪತಿಗೆ ಆರಾಧ್ಯಾ ಹೆಸರಿನ ಮಗಳು ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ದಂಪತಿ ಒಟ್ಟಾಗಿ ಫೋಟೋ ಶೇರ್ ಮಾಡಿಕೊಳ್ಳೋದು ಕಡಿಮೆ ಆಗಿದೆ. ಜನ್ಮದಿನ ಹಾಗೂ ವಿವಾಹ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ಮಾತ್ರ ಇವರು ಫೋಟೋ ಅಪ್ಲೋಡ್ ಮಾಡುತ್ತಾರೆ.
ಇದನ್ನೂ ಓದಿ: ಐಶ್ವರ್ಯಾ ಹಾಗೂ ಅಭಿಷೇಕ್ ವಿಚ್ಛೇದನ ಪಡೆಯದೆ ಇರಲು ಇದುವೇ ಕಾರಣ
ಅಭಿಷೇಕ್ ಹಾಗೂ ಐಶ್ವರ್ಯಾ ಮಧ್ಯೆ ಎಲ್ಲವೂ ಸರಿ ಇದೆ ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಈ ವಿಚಾರವನ್ನು ಒಪ್ಪುವುದಿಲ್ಲ. ಈ ದಂಪತಿ ಮಧ್ಯೆ ಕಿರಿಕ್ ಉಂಟಾಗಲು ಅಮಿತಾಭ್ ಬಚ್ಚನ್ ವರ್ತನೆ ಕಾರಣ ಎನ್ನುವ ಮಾತುಗಳೂ ಇವೆ. ಆದರೆ, ಈ ವಿಚಾರ ಇನ್ನೂ ಅಧಿಕೃತ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:46 am, Mon, 12 August 24