‘2 ಬಾರಿ ರಾಜ್ಯಸಭಾ ಸದಸ್ಯನಾಗುವ ಚಾನ್ಸ್​​ ತಿರಸ್ಕರಿಸಿದ್ದೆ’; ತೆರಿಗೆ ವಂಚನೆ ಆರೋಪದ ಬಳಿಕ ಸೋನು ಸೂದ್​ ಹೇಳಿಕೆ

| Updated By: ಮದನ್​ ಕುಮಾರ್​

Updated on: Sep 20, 2021 | 4:36 PM

ಸೋನು ಸೂದ್​ ರಾಜಕೀಯಕ್ಕೆ ಬರಬಹುದು ಎಂಬ ಅನುಮಾನ ಬಹುತೇಕರಿಗೆ ಇದೆ. ಆ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ತೆರಿಗೆ ವಂಚನೆ ಆರೋಪದ ಬೆನ್ನಲ್ಲೇ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

‘2 ಬಾರಿ ರಾಜ್ಯಸಭಾ ಸದಸ್ಯನಾಗುವ ಚಾನ್ಸ್​​ ತಿರಸ್ಕರಿಸಿದ್ದೆ’; ತೆರಿಗೆ ವಂಚನೆ ಆರೋಪದ ಬಳಿಕ ಸೋನು ಸೂದ್​ ಹೇಳಿಕೆ
ಸೋನು ಸೂದ್
Follow us on

ನಟ ಸೋನು ಸೂದ್​ ಅವರು ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದಕ್ಕೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸೋನು ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ, ಪರಿಶೀಲಿಸಿದ್ದಾರೆ. ಇದರ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸೋನು ಸೂದ್​ ಅವರು ತಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ತಮಗೆ ಈ ಹಿಂದೆ ಎರಡು ಪಕ್ಷಗಳು ರಾಜ್ಯಸಭೆಯ ಸೀಟ್​ ನೀಡಲು ಬಂದಿದ್ದಾಗ, ಅದನ್ನು ತಿರಸ್ಕರಿಸಿದ್ದಾಗಿ ಸೋನು ಹೇಳಿದ್ದಾರೆ. ರಾಜಕೀಯಕ್ಕೆ ಎಂಟ್ರಿ ನೀಡಲು ತಾವು ಮಾನಸಿಕವಾಗಿ ಸಿದ್ಧರಿಲ್ಲ ಎಂದು ಅವರು ಈ ಮೂಲಕ ಸ್ಪಷ್ಟಪಡಿಸಿದ್ದಾರೆ.

‘ಅಧಿಕಾರಿಗಳು ಕೇಳಿದ ಎಲ್ಲ ದಾಖಲೆಗಳನ್ನು ಒದಗಿಸಿದ್ದೇನೆ. ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅವರು ಅವರ ಕರ್ತವ್ಯ ಮಾಡಿದ್ದಾರೆ. ಅದೇ ರೀತಿ ನಾನು ನನ್ನ ಕೆಲಸ ಮಾಡಿದ್ದೇನೆ. ಎಲ್ಲ ಪ್ರಶ್ನೆಗಳಿಗೂ ದಾಖಲೆ ಸಮೇತ ಉತ್ತರ ನೀಡಿದ್ದೇನೆ. ಪ್ರತಿಯೊಬ್ಬರು ನೀಡಿದ ಒಂದು ರೂಪಾಯಿಗೂ ಕೂಡ ನಾನು ಲೆಕ್ಕ ಕೊಡುತ್ತೇನೆ’ ಎಂದು ಸೋನು ಸೂದ್​ ಹೇಳಿದ್ದಾರೆ.

ತೆರಿಗೆ ವಂಚನೆ ಆರೋಪದ ಬಳಿಕ ಸೋನು ಸೂದ್​ ಮೌನ ಮುರಿದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಿಮ್ಮ ಪರವಾಗಿರುವ ಕಥೆಯನ್ನು ನೀವೇ ಯಾವಾಗಲೂ ಹೇಳಬೇಕಾಗಿಲ್ಲ. ಕಾಲವೇ ಹೇಳಲಿದೆ’ ಎಂದು ಸೋನು ಸೂದ್​ ಬರಹ ಆರಂಭಿಸಿದ್ದಾರೆ.

‘ಈ ದೇಶದ ಜನರ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಫೌಂಡೇಷನ್​ನಲ್ಲಿ ಇರುವ ಒಂದೊಂದು ರೂಪಾಯಿ ಕೂಡ ಅಗತ್ಯ ಇರುವವರಿಗೆ ಸಹಾಯ ಮಾಡಲು ಮತ್ತು ಜನರ ಜೀವ ಉಳಿಸಲು ಕಾದಿದೆ. ಜಾಹೀರಾತಿನಿಂದ ನನಗೆ ಬರುವ ಸಂಭಾವನೆಯನ್ನು ನೇರವಾಗಿ ಮಾನವೀಯ ಕೆಲಸಗಳಿಗೆ ನೀಡಿ ಎಂದು ಕೂಡ ನಾನು ಪ್ರೋತ್ಸಾಹಿಸಿದ್ದೇನೆ. ಆ ಕೆಲಸವೂ ಸಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಕೆಲವು ಅತಿಥಿಗಳನ್ನು ಬರಮಾಡಿಕೊಳ್ಳುತ್ತ ಇದ್ದೆ. ಹಾಗಾಗಿ ನಿಮ್ಮ ಕರೆಗಳಿಗೆ ಉತ್ತರಿಸಲು ಆಗಲಿಲ್ಲ. ಈಗ ನಿಮ್ಮ ಸೇವೆಗಾಗಿ ಮರಳಿದ್ದೇನೆ. ನನ್ನ ಪಯಣ ಮುಂದುವರಿಯಲಿದೆ. ಜೈ ಹಿಂದ್’ ಎಂದು ಅವರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:

ಇಷ್ಟೆಲ್ಲ ಸಹಾಯ ಮಾಡಿದ ಸೋನು ಸೂದ್​ಗೆ ಜನರಿಂದ ಸಿಕ್ಕಿದ್ದೇನು? ಅದನ್ನು ಅಳತೆ ಮಾಡಲು ಸಾಧ್ಯವಿಲ್ಲ

ತಾಯಿ ಫೋಟೋ ಜೊತೆ ಸೋನು ಸೂದ್​ ಭಾವುಕ ಪತ್ರ; ಮನಮುಟ್ಟುವ ಸಾಲುಗಳು ಇಲ್ಲಿವೆ..