ವೃತ್ತಿಪರ ಫುಟ್‌ಬಾಲ್ ಆಟಗಾರ ಆಗಲಿದ್ದಾರೆ ಬಾಲಿವುಡ್ ನಟ ಟೈಗರ್ ಶ್ರಾಫ್

ಬಾಲಿವುಡ್‌ನ ಖ್ಯಾತ ಆಕ್ಷನ್ ನಟ ಟೈಗರ್ ಶ್ರಾಫ್ ಈಗ ವೃತ್ತಿಪರ ಫುಟ್‌ಬಾಲ್ ಆಟಗಾರನಾಗಿ ಮೈದಾನಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಪ್ರತಿಷ್ಠಿತ 135ನೇ ಡ್ಯುರಾಂಡ್ ಕಪ್ ಟೂರ್ನಿಯಲ್ಲಿ ಅವರು ಮುಂಬೈ ಎಫ್‌ಸಿ ತಂಡದ ಪರವಾಗಿ ಆಡಲಿದ್ದಾರೆ ಎಂದು ವರದಿಗಳು ಆಗಿವೆ. ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹಾಗೂ ರೋಮಾಂಚನ ಸೃಷ್ಟಿಸಿದೆ.

ವೃತ್ತಿಪರ ಫುಟ್‌ಬಾಲ್ ಆಟಗಾರ ಆಗಲಿದ್ದಾರೆ ಬಾಲಿವುಡ್ ನಟ ಟೈಗರ್ ಶ್ರಾಫ್
ಟೈಗರ್ ಶ್ರಾಫ್

Updated on: Jul 28, 2026 | 2:53 PM

ಮುಖ್ಯಾಂಶಗಳು

  • ಚಿತ್ರರಂಗದಿಂದ ಫುಟ್‌ಬಾಲ್ ಮೈದಾನಕ್ಕೆ ಜಂಪ್ ಮಾಡಿದ ಟೈಗರ್ ಶ್ರಾಫ್
  • ಪ್ರತಿಷ್ಠಿತ ಡ್ಯುರಾಂಡ್ ಕಪ್‌ನಲ್ಲಿ ಮುಂಬೈ ತಂಡದ ಪರ ಆಡಲಿದ್ದಾರೆ ನಟ
  • ರೀಲ್ ಹೀರೋ ಈಗ ರಿಯಲ್ ಸ್ಪೋರ್ಟ್ಸ್‌ಮನ್ 

ಬಾಲಿವುಡ್‌ ನಟ ಟೈಗರ್ ಶ್ರಾಫ್ (Tiger Shroff) ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ತಮ್ಮ ಮಾರ್ಷಲ್ ಆರ್ಟ್ಸ್ ಮತ್ತು ಫಿಟ್ನೆಸ್‌ಗೆ ಹೆಸರಾಗಿರುವ ಅವರು ಫುಟ್​​ಬಾಲ್ ಮೈದಾನಕ್ಕೆ ಇಳಿಯುತ್ತಿದ್ದಾರೆ. ಹಾಗಂತ ಅವರು ಫುಟ್​​ಬಾಲ್ ಆಧರಿಸಿ ಸಿನಿಮಾ ಮಾಡುತ್ತಿದ್ದಾರೆ ಎಂದುಕೊಳ್ಳಬೇಡಿ. ಅವರು ಈಗ ವೃತ್ತಿಪರ ಫುಟ್‌ಬಾಲ್‌ ಜಗತ್ತಿಗೆ ಕಾಲಿಡಲಿದ್ದಾರೆ ಎಂಬ ವರದಿಗಳು ಹೇಳಿವೆ. ಪ್ರತಿಷ್ಠಿತ ಡ್ಯುರಾಂಡ್ ಕಪ್ ಟೂರ್ನಿಯಲ್ಲಿ ಅವರು ಮುಂಬೈ ಎಫ್‌ಸಿ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಉದ್ಯಮಿ ಅಲಿ ಅಹ್ಮದ್ ಒಡೆತನದ ಮುಂಬೈ ಎಫ್‌ಸಿ ತಂಡದೊಂದಿಗೆ ಟೈಗರ್ ಶ್ರಾಫ್ ತರಬೇತಿ ಪಡೆಯುತ್ತಿದ್ದಾರೆ. ಅವರು ತಂಡದೊಂದಿಗೆ ನಿಯಮಿತವಾಗಿ ಅಭ್ಯಾಸ ಅವಧಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಕ್ರೀಡಾ ಕೌಶಲ್ಯ ಮತ್ತು ಬದ್ಧತೆಗೆ ತರಬೇತುದಾರರು ಫುಲ್ ಫಿದಾ ಆಗಿದ್ದಾರೆ. ಭವಿಷ್ಯದಲ್ಲಿ ಅವರು ತಂಡದ ಖಾಯಂ ಸದಸ್ಯರಾಗುವ ಸಾಧ್ಯತೆಯೂ ಇದೆ.

ಡ್ಯುರಾಂಡ್ ಕಪ್ ಪಂದ್ಯಾವಳಿಗಳಿಗಾಗಿ ಟೈಗರ್ ಶ್ರಾಫ್ ಮತ್ತು ಅವರ ತಂಡ ಜುಲೈ 30ರಂದು ಶಿಲ್ಲಾಂಗ್‌ಗೆ ಪ್ರಯಾಣ ಬೆಳೆಸಲಿದೆ. ನಟ ಅಥವಾ ಕ್ಲಬ್‌ನಿಂದ ಈ ಬಗ್ಗೆ ಇನ್ನು ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಇದನ್ನೂ ಓದಿ: ಅಬ್ಬಾ ಅದು ಹೆಂಗೆ ಫ್ಲಿಪ್ ಮಾಡ್ತಾರೆ ನೋಡಿ ಟೈಗರ್ ಶ್ರಾಫ್

ಟೈಗರ್ ಶ್ರಾಫ್ ಅವರು ಕ್ರಿಕೆಟ್ ಹಾಗೂ ಫುಟ್​​ಬಾಲ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅವರು ಆಟ ಆಡೋದು ಆಗಾಗ ಕಾಣಿಸುತ್ತದೆ. ಈ ವಿಡಿಯೋಗಳು ಆಗಾಗ ವೈರಲ್ ಆಗಿ ಸದ್ದು ಮಾಡುತ್ತವೆ. ಸಿನಿಮಾ ವಿಷಯಕ್ಕೆ ಬಂದರೆ ಟೈಗರ್ ಶ್ರಾಫ್ ಇತ್ತೀಚೆಗೆ ಸಂಜಯ್ ದತ್ ಜೊತೆ ‘ಬಾಗಿ 4’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ರಾಮ್ ಮಾಧ್ವಾನಿ ನಿರ್ದೇಶನದ ಹೊಸ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆಯ ‘ಲಗ್ ಜಾ ಗಲೇ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದೀಗ ಅವರು ಫುಟ್‌ಬಾಲ್ ಮೈದಾನಕ್ಕೆ ಇಳಿಯುತ್ತಿರುವುದು ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us