ನಟಿ ಆಲಿಯಾ ಭಟ್ (Alia Bhatt) ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಎಸ್ಎಸ್ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಮೂಲಕ ಅವರು ದಕ್ಷಿಣ ಭಾರತಕ್ಕೂ ಕಾಲಿಟ್ಟಿದ್ದಾರೆ. ಆಲಿಯಾ ಸ್ಟಾರ್ ಕಿಡ್. ಈ ಕಾರಣಕ್ಕೆ ಅವರಿಗೆ ಸುಲಭವಾಗಿ ಚಿತ್ರರಂಗದ ಬಾಗಿಲು ತೆರೆಯಿತು. ಅವರ ಮೊದಲ ಸಿನಿಮಾ ‘ಸ್ಟುಡೆಂಟ್ ಆಫ್ ಇಯರ್’ಗೆ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ (Dharma Productions) ಬಂಡವಾಳ ಹೂಡಿತು. ಈ ಚಿತ್ರದಿಂದ ಅವರ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಸಿಕ್ಕಿತು. ಅವರು ತಮ್ಮ ನಟನೆ ಮೂಲಕ ಯಾರು ಎಂಬುದನ್ನು ಸಾಬೀತು ಮಾಡಿದ್ದಾರೆ. ಆದಾಗ್ಯೂ ಅವರು ಸ್ಟಾರ್ ಕಿಡ್ ಎನ್ನುವ ಬಗ್ಗೆ ಒಂದಷ್ಟು ಟೀಕೆಗಳು ಬರುತ್ತಲೇ ಇವೆ. ಈ ಬಗ್ಗೆ ಆಲಿಯಾ ಭಟ್ ಮಾತನಾಡಿದ್ದಾರೆ.
ಆಲಿಯಾ ಭಟ್ ಸೇರಿದಂತೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳಿಗೆ ನಿರ್ಮಾಪಕ ಕರಣ್ ಜೋಹರ್ ಅವರು ಗಾಡ್ ಫಾದರ್. ಸೆಲೆಬ್ರಿಟಿ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸೋದು ಎಂದರೆ ಅವರಿಗೆ ಎಲ್ಲಿಲ್ಲದ ಖುಷಿ. ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಆಲಿಯಾ ಭಟ್ ಅವರನ್ನು ಬಾಲಿವುಡ್ಗೆ ಕರಣ್ ಪರಿಚಯಿಸಿದರು. ಆಲಿಯಾ ಮೊದಲ ಸಿನಿಮಾದಲ್ಲೇ ಗ್ಲಾಮರ್ ಅವತಾರ ತಾಳಿ ಎಲ್ಲರ ಗಮನ ಸೆಳೆದರು. ಬಳಿಕ ಅವರು ಗ್ಲಾಮರ್ ಪಾತ್ರಕ್ಕೆ ಸೀಮಿತ ಮಾಡಿಕೊಂಡಿಲ್ಲ. ‘ಹೈವೇ’, ‘ಉಡ್ತಾ ಪಂಜಾಬ್’, ‘ಡಿಯರ್ ಜಿಂದಗಿ’, ‘ರಾಜಿ’ ಮೊದಲಾದ ಚಿತ್ರಗಳಲ್ಲಿ ನಟಿಸಿ ಅವರು ಗಮನ ಸೆಳೆದರು. ಆಲಿಯಾ ತಮ್ಮ ನಟನೆ ಮೂಲಕ ಗಮನ ಸೆಳೆದರೂ ಅವರ ಬಗ್ಗೆ ಟೀಕೆ ನಿಂತಿಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ಹಲವು ವರ್ಷಗಳಿಂದ ಈ ಮಾತು ಕೇಳಿದ್ದೇನೆ. ನಾನು ಸ್ಟಾರ್ ಕಿಡ್ ಆಗಿರುವುದರಿಂದ ನನಗೆ ಸುಲಭವಾಗಿ ಅವಕಾಶ ಸಿಕ್ಕಿತು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಕನಸುಗಳನ್ನು ಮತ್ತೊಬ್ಬರ ಕನಸುಗಳಿಗೆ ಹೋಲಿಸುತ್ತೇನೆ. ಕನಸುಗಳಲ್ಲಿ ದೊಡ್ಡದು, ಚಿಕ್ಕದು ಎಂಬುದಿಲ್ಲ. ಎಲ್ಲರ ಕನಸುಗಳು ಒಂದೇ. ಎಲ್ಲರ ಆಸೆಯೂ ಒಂದೇ. ನನಗೆ ಸವಲತ್ತು ಸಿಕ್ಕಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಈ ಕಾರಣಕ್ಕೆ ನಾನು ನನ್ನ ನೂರರಷ್ಟು ಶ್ರಮ ಹಾಕುತ್ತೇನೆ. ನನ್ನ ಕೆಲಸವನ್ನು ನಾನು ಎಂದಿಗೂ ಹಗುರವಾಗಿ ಸ್ವೀಕರಿಸಿಲ್ಲ’ ಎಂದಿದ್ದಾರೆ ಆಲಿಯಾ.
ಇದನ್ನೂ ಓದಿ: Alia Bhatt: ಆಲಿಯಾ ಭಟ್ ನೋಡಿ ಐಶ್ವರ್ಯಾ ರೈ ಎಂದು ಕೂಗಿದ ಪಾಪರಾಜಿಗಳು; ನಟಿಯ ಪ್ರತಿಕ್ರಿಯೆ ಹೇಗಿತ್ತು?
ಕಳೆದ ವರ್ಷ ಅಕ್ಟೋಬರ್ಗೆ ಆಲಿಯಾ ಭಟ್ ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷ ಕಳೆದಿದೆ. ಅವರು ಇತ್ತೀಚೆಗೆ ಐದನೇ ಫಿಲ್ಮ್ಫೇರ್ ಅವಾರ್ಡ್ ಗೆದ್ದಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿನ ಅವರ ನಟನೆಗೆ ಈ ಪ್ರಶಸ್ತಿ ಸಿಕ್ಕಿದೆ. ‘ಹಾರ್ಟ್ ಆಫ್ ಸ್ಟೋನ್’ ಮೂಲಕ ಆಲಿಯಾ ಹಾಲಿವುಡ್ಗೆ ಕಾಲಡುತ್ತಿದ್ದಾರೆ. ಇದಲ್ಲದೆ ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಅವರು ನಟಿಸಿದ್ದು, ರಿಲೀಸ್ಗೆ ರೆಡಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:09 am, Thu, 11 May 23