Adah Sharma Birthday: ಕನ್ನಡದಲ್ಲೂ ನಟಿಸಿರುವ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ ಕುರಿತ ಆಸಕ್ತಿಕರ ವಿಷಯಗಳು..
The Kerala Story | Adah Sharma: 2008ರಿಂದಲೂ ಅದಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
ಬಹುಭಾಷಾ ನಟಿ ಅದಾ ಶರ್ಮಾ (Adah Sharma) ಅವರ ಖ್ಯಾತಿ ಹೆಚ್ಚಾಗಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾದಿಂದ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಇದ್ದಾರೆ. ಆದರೆ ಅವರಿಗೆ ಗಮನಾರ್ಹ ಯಶಸ್ಸು ಸಿಕ್ಕಿರುವುದು ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರದಿಂದ. ಮೇ 5ರಂದು ಈ ಸಿನಿಮಾ ಬಿಡುಗಡೆ ಆಯಿತು. ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಬಂದ ಎಲ್ಲರೂ ಅದಾ ಶರ್ಮಾ ನಟನೆ ಬಗ್ಗೆ ಮಾತನಾಡಿದ್ದಾರೆ. ಅವರ ಅಭಿನಯಕ್ಕೆ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ. ಈ ಗೆಲುವಿನ ನಡುವೆಯೇ ಅದಾ ಶರ್ಮಾ ಹುಟ್ಟುಹಬ್ಬ (Adah Sharma Birthday) ಆಚರಿಸಿಕೊಳ್ಳತ್ತಿದ್ದಾರೆ. ಹೌದು, ಇಂದು (ಮೇ 11) ಅವರಿಗೆ ಜನ್ಮದಿನದ ಸಂಭ್ರಮ. 31ನೇ ಬರ್ತ್‌ಡೇ ಆಚರಿಸಿಕೊಳ್ಳುತ್ತಿರುವ ಅದಾ ಶರ್ಮಾ ಅವರಿಗೆ ಅಭಿಮಾನಿಗಳು ಮತ್ತು ಆಪ್ತರು ಶುಭಾಶಯ ಕೋರುತ್ತಿದ್ದಾರೆ. ಕನ್ನಡದಲ್ಲೂ ನಟಿಸಿರುವ ಅವರ ಬಗೆಗಿನ ಕೆಲವು ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ..
2008ರಿಂದಲೂ ಅದಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಕನ್ನಡದಲ್ಲಿ ಅವರು ನಟಿಸಿದ ಏಕೈಕ ಸಿನಿಮಾ ‘ರಣವಿಕ್ರಮ’. 2015ರಲ್ಲಿ ತೆರೆಕಂಡಿದ್ದ ಆ ಚಿತ್ರಕ್ಕೆ ಪುನೀತ್ ರಾಜ್ಕುಮಾರ್ ಹೀರೋ ಆಗಿದ್ದರು. ಪುನೀತ್ಗೆ ಜೋಡಿಯಾಗಿ ಅದಾ ಶರ್ಮಾ ಅಭಿನಯಿಸಿದ್ದರು. ಆ ಬಳಿಕ ಅವರು ಕನ್ನಡದಲ್ಲಿ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಮಿಂಚಿದ ಅದಾ ಶರ್ಮಾ
10ನೇ ತರಗತಿಯಲ್ಲಿ ಇರುವಾಗಲೇ ಅದಾ ಶರ್ಮಾ ಅವರಿಗೆ ನಟಿಯಾಗುವ ಬಯಕೆ ಮೂಡಿತ್ತು. ಆದರೆ ಹೈಸ್ಕೂಲ್ ಶಿಕ್ಷಣ ಮುಗಿಯುವ ತನಕ ಸಿನಿಮಾದಲ್ಲಿ ನಟಿಸಲು ಅವರ ಪೋಷಕರು ಅವಕಾಶ ನೀಡಲಿಲ್ಲ. ನಂತರ ಅವರು ಅನೇಕ ಸಿನಿಮಾಗಳಿಗೆ ಆಡಿಷನ್ ನೀಡಲು ಶುರುಮಾಡಿದರು. ಅದಾ ಶರ್ಮಾ ಮೊದಲು ನಟಿಸಿದ್ದು ಹಿಂದಿಯ ‘1920’ ಸಿನಿಮಾದಲ್ಲಿ. 2014ರ ಬಳಿಕ ಅವರಿಗೆ ಬೇರೆ ಭಾಷೆಗಳಿಂದ ಅವಕಾಶಗಳು ಸಿಗಲು ಆರಂಭಿಸಿದವು.
Adah Sharma: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಗಮನ ಸೆಳೆದ ಅದಾ ಶರ್ಮಾ ನಟನೆ; ಪ್ರೇಕ್ಷಕರಿಂದ ಸಿಕ್ತು ಮೆಚ್ಚುಗೆ
ನಟನೆ ಮಾತ್ರವಲ್ಲದೇ ಡ್ಯಾನ್ಸ್ನಲ್ಲೂ ಅದಾ ಶರ್ಮಾ ಅವರಿಗೆ ಸಖತ್ ಆಸಕ್ತಿ ಇದೆ. ಹಲವು ಡ್ಯಾನ್ಸ್ ಪ್ರಕಾರಗಳಲ್ಲಿ ಅವರು ತರಬೇತಿ ಪಡೆದಿದ್ದಾರೆ. ಕಥಕ್, ಸಾಲ್ಸಾ, ಬೆಲ್ಲಿ ಡ್ಯಾನ್ಸ್ ಮತ್ತು ಜಿಮ್ನಾಸ್ಟಿಕ್ನಲ್ಲಿ ಅದಾ ಶರ್ಮಾ ಅವರು ಪಳಗಿದ್ದಾರೆ. ಅವರ ಡ್ಯಾನ್ಸ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Adah Sharma: ‘ಮೊದಲು ಸಿನಿಮಾ ನೋಡಿ, ಆಮೇಲೆ ಮಾತಾಡಿ’: ‘ದಿ ಕೇರಳ ಸ್ಟೋರಿ’ ವಿವಾದಕ್ಕೆ ಅದಾ ಶರ್ಮಾ ಪ್ರತಿಕ್ರಿಯೆ
ಪ್ರಾಣಿಗಳ ಬಗ್ಗೆ ಅದಾ ಶರ್ಮಾ ಅವರಿಗೆ ವಿಶೇಷ ಕಾಳಜಿ ಇದೆ. ಪ್ರಾಣಿಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಹಲವು ಸಂಘಟನೆಗಳ ಜೊತೆಗೆ ಅವರು ಕೈ ಜೋಡಿಸಿದ್ದಾರೆ. ವಿಶೇಷವಾಗಿ, ಬೀದಿ ನಾಯಿಗಳನ್ನು ದತ್ತು ಪಡೆಯುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕೆಲವು ಅಭಿಯಾನಗಳಲ್ಲಿ ಅವರು ಪಾಲ್ಗೊಂಡಿದ್ದರು. ದುಬಾರಿ ಬೆಲೆಯ ವಿದೇಶಿ ತಳಿ ನಾಯಿಗಳನ್ನು ಸಾಕುವ ಬದಲು ಭಾರತದ ಬೀದಿ ನಾಯಿಗಳನ್ನು ದತ್ತು ಪಡೆಯಲು ಅವರು ಜನರಿಗೆ ಪ್ರೇರಣೆ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.