The Kerala Story: ಹಾಫ್ ಸೆಂಚುರಿ ಬಾರಿಸಿದ ‘ದಿ ಕೇರಳ ಸ್ಟೋರಿ’; 5 ದಿನವೂ ಅಬ್ಬರಿಸಿದ ಚಿತ್ರಕ್ಕೆ 56 ಕೋಟಿ ರೂಪಾಯಿ ಗಳಿಕೆ
The Kerala Story Box Office Collection: ಅದಾ ಶರ್ಮಾ ಅವರು ಮುಖ್ಯಭೂಮಿಕೆ ನಿಭಾಯಿಸಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಈವರಗೆ ಈ ಚಿತ್ರಕ್ಕೆ 56.86 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ನಾಗಾಲೋಟ ಮುಂದುವರಿದಿದೆ. ನಿರೀಕ್ಷೆಗೂ ಮೀರಿ ಈ ಚಿತ್ರ ಕಲೆಕ್ಷನ್ ಮಾಡುತ್ತಿದೆ. ಮೇ 5ರಂದು ಈ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನ ಸಾಧಾರಣ ಗಳಿಕೆ ಆಗಿತ್ತು. ಆದರೆ ಎರಡನೇ ದಿನ ಕಲೆಕ್ಷನ್ನಲ್ಲಿ ಗಣನೀಯ ಏರಿಕೆ ಕಂಡಿತು. ಸೋಮವಾರದ ಬಳಿಕ ‘ದಿ ಕೇರಳ ಸ್ಟೋರಿ’ ಚಿತ್ರದ ಗಲ್ಲಾಪೆಟ್ಟಿಗೆ ಕಮಾಯಿ ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ರೀತಿ ಆಗಿಲ್ಲ. ಜನರು ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಹಾಗಾಗಿ ಸೋಮವಾರದ ನಂತರ ಕೂಡ ಕಲೆಕ್ಷನ್ (Box Office Collection) ಹೆಚ್ಚಾಗುತ್ತಿದೆ. 5 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿರುವ ಈ ಚಿತ್ರ ಹಾಫ್ ಸೆಂಚುರಿ ಬಾರಿಸಿದೆ. ಅಂದರೆ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 5 ದಿನಕ್ಕೆ 56.86 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಮೊದಲ ದಿನ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ 8.3 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ದಿನ ಕಲೆಕ್ಷನ್ ಹೆಚ್ಚಾಯಿತು. ಶನಿವಾರ (ಮೇ 6) ಈ ಸಿನಿಮಾ ಬರೋಬ್ಬರಿ 11.22 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನವಾದ ಭಾನುವಾರ 16.40 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸದ್ದು ಮಾಡಿತು. ಸೋಮವಾರ (ಮೇ 8) ಬಾಕ್ಸ್ ಆಫೀಸ್ ಹಣೆಬರಹ ಏನಾಗಬಹುದು ಎಂಬ ಕೌತುಕ ಇತ್ತು. ನಾಲ್ಕನೇ ದಿನ ಈ ಸಿನಿಮಾ 10 ಕೋಟಿ ರೂಪಾಯಿ ಗಳಿಸಿತು. ಮಂಗಳವಾರ 11.14 ಕೋಟಿ ರೂಪಾಯಿ ಗಳಿಸಿದೆ.
#TheKeralaStory continues its BLOCKBUSTER RUN… Hits HALF-CENTURY [₹ 50 cr]… Day 5 [Tue] is HIGHER than Day 4 [Mon] and Day 1 [Fri], SUPERB TRENDING… Fri 8.03 cr, Sat 11.22 cr, Sun 16.40 cr, Mon 10.07 cr, Tue 11.14 cr. Total: ₹ 56.86 cr. #India biz. #Boxoffice pic.twitter.com/2hcXS4LN9D
— taran adarsh (@taran_adarsh) May 10, 2023
ಬಹುಭಾಷಾ ನಟಿ ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್ ಜಿಹಾದ್ ಮತ್ತು ಮತಾಂತರದ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ವಿವಾದಾತ್ಮಕ ಕಥಾಹಂದರ ಇರುವುದರಿಂದ ಅನೇಕ ಕಡೆಗಳಲ್ಲಿ ಈ ಸಿನಿಮಾದ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಹಾಗಿದ್ದರೂ ಕೂಡ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. 2ನೇ ವೀಕೆಂಡ್ನಲ್ಲೂ ಭರ್ಜರಿ ಕಮಾಯಿ ಆಗುವ ನಿರೀಕ್ಷೆ ಇದೆ.
ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಕಾರಣಾಂತರಗಳಿಂದ ತಮಿಳುನಾಡಿನಲ್ಲೂ ‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ಅಡ್ಡಿ ಉಂಟಾಗಿದೆ. ಹಾಗಿದ್ದರೂ ಕೂಡ ಇನ್ನುಳಿದ ರಾಜ್ಯಗಳಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.