ರಿಷಬ್ ಶೆಟ್ಟಿ ಜೊತೆಗಿನ ಭೇಟಿ ಬಗ್ಗೆ ನವಾಜುದ್ದೀನ್ ಸಿದ್ಧಿಕಿ ಮಾತು, ಒಟ್ಟಿಗೆ ಕೆಲಸ ಮಾಡ್ತಾರಾ?

Nawazuddin Siddiqui: ಬಾಲಿವುಡ್ ಸ್ಟಾರ್ ನಟ ನವಾಜುದ್ದೀನ್ ಸಿದ್ಧಿಕಿ ಸ್ಯಾಂಡಲ್​ವುಡ್ ಸ್ಟಾರ್ ರಿಷಬ್ ಶೆಟ್ಟಿ ಅವರ ಬಗ್ಗೆ ಮಾತನಾಡಿದ್ದಾರೆ.

ರಿಷಬ್ ಶೆಟ್ಟಿ ಜೊತೆಗಿನ ಭೇಟಿ ಬಗ್ಗೆ ನವಾಜುದ್ದೀನ್ ಸಿದ್ಧಿಕಿ ಮಾತು, ಒಟ್ಟಿಗೆ ಕೆಲಸ ಮಾಡ್ತಾರಾ?
ನವಾಜುದ್ಧೀನ್ ಸಿದ್ಧಿಕಿ
Follow us
ಮಂಜುನಾಥ ಸಿ.
|

Updated on:May 09, 2023 | 11:18 PM

ಕಾಂತಾರ (Kantara) ಸಿನಿಮಾದ ಬಳಿಕ ರಿಷಬ್ ಶೆಟ್ಟಿ (Rishab Shetty) ಪ್ಯಾನ್ ಇಂಡಿಯಾ (Pan India) ಸ್ಟಾರ್ ಆಗಿದ್ದಾರೆ. ಒಂದು ಸಿನಿಮಾ ಹಿಟ್ ಆಗಿದ್ದೇ ತಡ ಬಾಲಿವುಡ್, ಟಾಲಿವುಡ್, ಮಾಲಿವುಡ್, ಕಾಲಿವುಡ್ ಎಲ್ಲೆಲ್ಲೂ ಅವರ ಜನಪ್ರಿಯತೆ ಹರಡಿದೆ, ಹಲವು ಚಿತ್ರರಂಗದ ಧುರಿಣರು ರಿಷಬ್​ರ ಗೆಳೆತನಕ್ಕೆ ಕೈಚಾಚಿದ್ದಾರೆ. ಕಾಂತಾರ ಸಿನಿಮಾ ಹಿಂದಿ ಪ್ರದೇಶದಲ್ಲಿ ದೊಡ್ಡ ಹಿಟ್ ಆದ ಬೆನ್ನಲ್ಲೆ ಬಾಲಿವುಡ್​ನ ಹಲವು ಖ್ಯಾತನಾಮ ನಟರು ರಿಷಬ್ ರೊಟ್ಟಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅನುಪಮ್ ಖೇರ್, ಆಯುಷ್ಮಾನ್ ಖುರಾನಾ ಇನ್ನೂ ಕೆಲವರು ರಿಷಬ್ ಶೆಟ್ಟಿಯೊಟ್ಟಿಗಿನ ತಮ್ಮ ಗೆಳೆತನದ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ನಡುವೆ ಬಾಲಿವುಡ್​ನ ಖ್ಯಾತ ನಟ ನವಾಜುದ್ಧೀನ್ ಸಿದ್ಧಿಕಿ ತಮ್ಮ ಹಾಗೂ ರಿಷಬ್ ಶೆಟ್ಟಿ gಗೆಳೆತನದ ಬಗ್ಗೆ ಮಾತನಾಡಿದ್ದಾರೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ರಿಷಬ್ ಹಾಗೂ ನಾನು ಭೇಟಿಯಾಗಿದ್ದೆವು. ನನ್ನ ಮನೆಗೆ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ಕಾಂತಾರ ತಂಡ ಬಂದು ಆತಿಥ್ಯ ಸ್ವೀಕರಿಸಿತ್ತು. ನನ್ನ ಹಾಗೂ ರಿಷಬ್ ಶೆಟ್ಟಿಯ ನಡುವೆ ಸಾಕಷ್ಟು ವಿಷಯಗಳು ಕಾಮನ್ ಆಗಿವೆ ಆ ಸಾಮಾನ್ಯ ವಿಷಯಗಳ ಬಗ್ಗೆ ನಾವು ಗಂಟೆಗಟ್ಟಲೆ ಮಾತನಾಡಿದೆವು” ಎಂದಿದ್ದಾರೆ.

ಮುಂದುವರೆದು, ”ರಿಷಬ್ ಹಾಗೂ ಅವರ ಗೆಳೆಯರು ಸಾಕಷ್ಟು ರಂಗಭೂಮಿ ಚಟುವಟಿಕೆಗಳನ್ನು ಮಾಡಿದ್ದಾರೆ. ಮತ್ತೊಂದು ಪ್ರಮುಖ ವಿಷಯವೆಂದರೆ ನಮ್ಮಿಬ್ಬರ ಗುರುಗಳು ಒಂದೇ. ಈ ಮೊದಲೂ ಸಹ ನಮ್ಮಿಬ್ಬರಿಗೂ ಪರಿಚಯವಿತ್ತು, ನಾವು ಮೊದಲೇ ಪರಿಚಿತರು. ಅವರು ಇನ್ನೂ ರಂಗಭೂಮಿಯೊಟ್ಟಿಗೆ ತಮ್ಮ ಸಂಬಂಧ ಇರಿಸಿಕೊಂಡಿದ್ದಾರೆ. ತಮ್ಮ ನೆಲಮೂಲದೊಂದಿಗೆ ಸಂಬಂಧ ಇರಿಸಿಕೊಂಡಿದ್ದಾರೆ, ತಮ್ಮ ಸಂಸ್ಕೃತಿಯ ಬಗ್ಗೆ ಸಿನಿಮಾ ಸಹ ಮಾಡಿದ್ದಾರೆ. ನಮ್ಮ ಗುರುಗಳು ಒಬ್ಬರೇ ಆಗಿರುವ ಕಾರಣ ನಾವು ಬೇಗನೆ ಗೆಳೆಯರಾಗಿಬಿಟ್ಟೆವು” ಎಂದಿದ್ದಾರೆ.

ಕಾಂತಾರ 2 ಸಿನಿಮಾದಲ್ಲಿ ನೀವೂ ನಟಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ನವಾಜುದ್ಧೀನ್ ಸಿದ್ಧಿಕಿ, ”ಆ ಬಗ್ಗೆ ನಾನು ಈಗಲೇ ಏನೂ ಹೇಳಲಾಗದು. ನೋಡೋಣ ಅವಕಾಶ ದೊರೆತರೆ ಖಂಡಿತ ನಟಿಸುತ್ತೇನೆ. ರಿಷಬ್ ಅದ್ಭುತವಾದ ನಟ, ನಿರ್ದೇಶಕ ಬಹಳ ಪ್ರತಿಭಾವಂತ, ರಾಜ್ ಬಿ ಶೆಟ್ಟಿ ಸೇರಿದಂತೆ ಅವರ ಇಡೀ ತಂಡವೆ ಬಹಳ ಪ್ರತಿಭಾವಂತ ತಂಡ. ಅವರೊಟ್ಟಿಗೆ ಕೆಲಸ ಮಾಡುವುದು ಖುಷಿಯ ವಿಷಯ ಎಂದಿದ್ದಾರೆ ನವಾಜುದ್ಧೀನ್ ಸಿದ್ಧಿಕಿ.

ನವಾಜುದ್ಧೀನ್ ಸಿದ್ಧಿಕಿ ಪ್ರಸ್ತುತ ಸಾರಾ ರಾರಾ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗದ್ದಾರೆ. ಕಂಗನಾ ರನೌತ್ ಜೊತೆಗೆ ಟಿಕು ವೆಡ್ಸ್ ಶೇರು ಹೆಸರಿನ ಸಿನಿಮಾದಲ್ಲಿ ನಟಿಸುತ್ತದ್ದಾರೆ. ಅದರ ಜೊತೆಗೆ ಇನ್ನೂ ಕೆಲವು ಸಿನಿಮಾಗಳಲ್ಲಿ ನವಾಜುದ್ಧೀನ್ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತ ಚಿತ್ರರಂಗ ಅವರಿಗೆ ಹೊಸದೇನೂ ಅಲ್ಲ. ಈ ಹಿಂದೆ ರಜನೀಕಾಂತ್​ರ ಸಿನಿಮಾ ಒಂದರಲ್ಲಿ ಸಿದ್ಧಿಕಿ ನಟಿಸಿದ್ದಾರೆ. ಇದೀಗ ತೆಲುಗು ಸಿನಿಮಾ ಒಂದನ್ನು ಸಹ ಸಿದ್ಧಿಕಿ ಒಪ್ಪಿಕೊಂಡಿದ್ದಾರೆ.

ಇನ್ನು ರಿಷಬ್ ಶೆಟ್ಟಿ, ಕಾಂತಾರ ಸಿನಿಮಾದಿಂದ ರಾಷ್ಟ್ರದಾದ್ಯಂತ ಭಾರಿ ಹೆಸರು ಗಳಿಸಿದ್ದು ಇದೀಗ ಕಾಂತಾರ 2 ಸಿನಿಮಾಕ್ಕೆ ಕೈ ಹಾಕಿದ್ದಾರೆ. ಕಾಂತಾರ ಸಿನಿಮಾ ನಡೆದ ಕಾಲಘಟ್ಟಕ್ಕಿಂತಲೂ ಹಿಂದಿನ ಕಾಲಘಟ್ಟದ ಕತೆಯನ್ನು ಕಾಂತಾರ 2 ಸಿನಿಮಾ ಒಳಗೊಂಡಿರಲಿದೆ. ಸಿನಿಮಾದ ಚಿತ್ರಕತೆಯ ಮೊದಲ ಡ್ರಾಫ್ಟ್ ಮುಗಿದಿದ್ದು ಸಿನಿಮಾದ ಚಿತ್ರೀಕರಣ ಈ ಮಳೆಗಾಲಕ್ಕೆ ಪ್ರಾರಂಭವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:16 pm, Tue, 9 May 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ