ಸೆಲೆಬ್ರಿಟಿಗಳು ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಜಿಮ್ನಲ್ಲಿ (Gym) ಹೆಚ್ಚು ಸಮಯ ಕಳೆಯುತ್ತಾರೆ. ಕೆಲವರು ಯೋಗದ ಮೊರೆ ಕೂಡ ಹೋಗುತ್ತಾರೆ. ಒಟ್ಟಿನಲ್ಲಿ ನಿತ್ಯ ಒಂದಷ್ಟು ಸಮಯವನ್ನು ದೇಹ ಹುರಿಗೊಳಿಸಲು ಮೀಸಲಿಡುತ್ತಾರೆ. ನಟಿ ಜಾನ್ವಿ ಕಪೂರ್ ಕೂಡ ಇದಕ್ಕೆ ಹೊರತಾಗಿಲ್ಲ. ಬಾಲಿವುಡ್ನ ಸ್ಟಾರ್ ಕುಡಿ ಆಗಿರುವ ಜಾನ್ವಿ (Janhvi Kapoor) ನಿತ್ಯ ಒಂದಷ್ಟು ಸಮಯವನ್ನು ಫಿಟ್ನೆಸ್ ಕಾಯ್ದುಕೊಳ್ಳಲು ಮೀಸಲಿಟ್ಟಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.
‘ಧಡಕ್’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದವರು ಜಾನ್ವಿ. ಇದು ಮರಾಠಿ ಸಿನಿಮಾದ ರಿಮೇಕ್ ಆದರೂ ಹಿಂದಿಯಲ್ಲಿ ಈ ಚಿತ್ರ ಒಳ್ಳೆಯ ಗಳಿಕೆ ಕಂಡಿತು. ಮೊದಲ ಸಿನಿಮಾದಲ್ಲೇ ಗೆಲುವಿನ ರುಚಿ ಕಂಡರು ಜಾನ್ವಿ. ಆ ಬಳಿಕ ಅವರಿಗೆ ಒಳ್ಳೆಯ ಆಫರ್ಗಳು ಬಂದರೂ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. ‘ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್’, ‘ರೂಹಿ’ ಚಿತ್ರಗಳಲ್ಲಿ ಜಾನ್ವಿ ನಟನೆಯನ್ನು ಹೊಗಳಿದವರು ಕಡಿಮೆ. ಸದ್ಯ, ಹಲವು ಸಿನಿಮಾ ಕೆಲಸಗಳಲ್ಲಿ ಜಾನ್ವಿ ಬ್ಯುಸಿ ಇದ್ದಾರೆ. ಈ ಮಧ್ಯೆ ವರ್ಕೌಟ್ ಕೂಡ ಮಾಡುತ್ತಿದ್ದಾರೆ.
ಜಾನ್ವಿ ಕಪೂರ್ ಆ್ಯಂಟಿಗ್ರ್ಯಾವಿಟಿ ಕ್ಲಬ್ ಜಿಮ್ನಲ್ಲಿ ವರ್ಕೌಟ್ ನಡೆಸುತ್ತಾರೆ. ಈ ಜಿಮ್ನವರು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಜಾನ್ವಿ ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು, ಈಗ ಪೋಸ್ಟ್ ಮಾಡಲಾಗಿದೆ. ಇದು ಅತ್ಯಂತ ಕಷ್ಟದ ವರ್ಕೌಟ್ ಎಂದು ಹೇಳಲಾಗಿದೆ.
ಜಾನ್ವಿ ಸ್ಟಾರ್ ಕಿಡ್ ಆಗಿರುವುದರಿಂದ ಹಲವು ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ, ಎಲ್ಲಾ ಚಿತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ‘ಗುಡ್ ಲಕ್ ಜೆರ್ರಿ’, ‘ಮಿಲಿ’, ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಹಾಗೂ ‘ಬವಾಲ್’ ಸಿನಿಮಾಗಳಲ್ಲಿ ಸದ್ಯ ಅವರು ನಟಿಸುತ್ತಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಅವರು ಫ್ರೆಂಡ್ಸ್ ಜತೆ ಸುತ್ತಾಡೋಕೆ ತೆರಳುತ್ತಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಇದನ್ನೂ ಓದಿ: ಮೇ ತಿಂಗಳನ್ನು ಕಳೆದಿದ್ದು ಹೇಗೆ ಎಂಬುದನ್ನು ಫೋಟೋ ಮೂಲಕ ವಿವರಿಸಿದ ಜಾನ್ವಿ ಕಪೂರ್
ಇನ್ನು, ಜಾನ್ವಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳಲು ಹಿಂದೆ ಬಿದ್ದಿಲ್ಲ. ವಾರಕ್ಕೆ ಒಂದಾದರೂ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುತ್ತಾರೆ. ಈ ಫೋಟೋಗಳಿಗೆ ಲಕ್ಷಾಂತರ ಮಂದಿ ಲೈಕ್ಸ್ ಒತ್ತುತ್ತಾರೆ. ಅವರ ಅಭಿಮಾನಿ ಬಳಗ ನಿತ್ಯ ಹಿರಿದಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.