ದೇಶದಿಂದ ಕೊರೊನಾ ವೈರಸ್ ಓಡಿಸಬೇಕು ಎಂದು ವ್ಯಾಕ್ಸಿನ್ ಅಭಿಯಾನ ಮಾಡಲಾಗುತ್ತಿದೆ. ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಲಸಿಕೆ ನೀಡಲು ಸರ್ಕಾರಗಳು ಪ್ರಯತ್ನಿಸುತ್ತಿವೆ. ಆದರೆ ಕೆಲವರು ಕೊರೊನಾ ವ್ಯಾಕ್ಸಿನ್ ಬಗ್ಗೆ ಅಪಸ್ವರ ಎತ್ತುತ್ತಾ ಬಂದಿದ್ದಾರೆ. ಆ ಪೈಕಿ ನಟಿ ಪೂಜಾ ಬೇಡಿ ಕೂಡ ಒಬ್ಬರು. ಮೊದಲಿನಿಂದಲೂ ಕೊವಿಡ್ ಲಸಿಕೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಅವರಿಗೆ ಈಗ ಕೊರೊನಾ ಸೋಂಕು ತಗುಲಿದೆ! ಈ ಬಗ್ಗೆ ಅವರು ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ. ಲಸಿಕೆ ಪಡೆಯುವ ಬಗ್ಗೆ ಈಗ ತಮ್ಮ ನಿಲುವು ಏನು ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಪೂಜಾ ಬೇಡಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ಲಸಿಕೆ ತೆಗೆದುಕೊಳ್ಳದಿರುವ ಬಗ್ಗೆ ನಾನು ಮೊದಲಿನಿಂದಲೂ ಮಾತನಾಡುತ್ತಾ ಬಂದಿದ್ದೇನೆ. ವ್ಯಾಕ್ಸಿನ್ ಪಡೆಯಬಾರದು ಎಂಬುದು ನನ್ನ ನಿರ್ಧಾರ ಆಗಿತ್ತು. ಸ್ವಂತ ರೋಗ ನಿರೋಧಕ ಶಕ್ತಿಯೇ ನಿಧಾನವಾಗಿ ಹೆಚ್ಚಲಿದೆ. ನಿಮ್ಮ ಆಯ್ಕೆ ಏನು ಎಂಬುದನ್ನು ನೀವೇ ನಿರ್ಧರಿಸಿ’ ಎಂದು ಪೂಜಾ ಬೇಡಿ ಹೇಳಿದ್ದಾರೆ.
ಗೋವಾದಲ್ಲಿ ವಾಸವಾಗಿರುವ ಪೂಜಾ ಬೇಡಿ ಅವರು ಫಿಟ್ನೆಸ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೊವಿಡ್ ಲಕ್ಷಣಗಳು ಕಾಣಿಸಿಕೊಂಡಾಗ ಅವರು ಡಸ್ಟ್ ಅಲರ್ಜಿ ಆಗಿರಬಹುದು ಅಂತ ತಿಳಿದುಕೊಂಡಿದ್ದರು. ಆದರೆ ಪರಿಸ್ಥಿತಿ ನಿಧಾನಕ್ಕೆ ಹದಗೆಡಲು ಶುರುವಾಯಿತು. ಹಾಗಾಗಿ ಟೆಸ್ಟ್ ಮಾಡಿಸಿಕೊಳ್ಳಲು ತೀರ್ಮಾನಿಸಿದರು. ಆಗ ಅವರಿಗೆ ಕೊವಿಡ್ ಪಾಸಿಟಿವ್ ಆಗಿರುವುದು ತಿಳಿಯಿತು. ‘ಲಸಿಕೆ ಬರುವುದಕ್ಕಿಂತಲೂ ಮುನ್ನ ಕೊವಿಡ್ ತಗುಲಿಸಿಕೊಂಡ ಶೇ.99ರಷ್ಟು ಜನರು ಬದುಕಿದ್ದಾರೆ. ಲಸಿಕೆ ಪಡೆದ ನಂತರವೂ ಶೇ.99ರಷ್ಟು ಮಂದಿ ಬದುಕಿದ್ದಾರೆ. ನಾವು ಎಚ್ಚರಿಕೆಯಿಂದ ಇರಬೇಕು. ಗಾಬರಿ ಆಗುವ ಅವಶ್ಯಕತೆ ಇಲ್ಲ’ ಎಂದು ಪೂಜಾ ಬೇಡಿ ಹೇಳಿದ್ದಾರೆ.
Okkkkayyyy!finally bitten by the #COVID19 bug!!! Time to focus on every remedy and healing tool and modalities.
Love and happiness to all. Longer video is on my igtv feed. pic.twitter.com/46AIGmH1C5— Pooja Bedi (@poojabeditweets) October 17, 2021
ಆಗಸ್ಟ್ ತಿಂಗಳಲ್ಲಿ ಅವರು ಬಲವಂತದ ಲಸಿಕೆ ಅಭಿಯಾನದ ಬಗ್ಗೆ ಗರಂ ಆಗಿದ್ದರು. ‘ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯ ಹೇರುತ್ತಿವೆ. ಕೆಲಸ ಉಳಿಸಿಕೊಳ್ಳಲು ಉದ್ಯೋಗಿಗಳಿಗೆ ಇದು ಅನಿವಾರ್ಯ ಆಗುತ್ತಿದೆ. ಲಸಿಕೆಯ ಅಡ್ಡಪರಿಣಾಮದಿಂದ ಸಾವು ಅಥವಾ ವೈಕಲ್ಯ ಉಂಟಾದರೆ ಈ ಕಂಪನಿಗಳೇ ಪರಿಹಾರ ಕೊಡುತ್ತವಾ? ಲಸಿಕೆ ಪಡೆಯದೆಯೂ ಬದುಕುಳಿಯುವ ಸಾಧ್ಯತೆ ಶೇ.99ರಷ್ಟು ಇರುವಾಗ ನಿಜಕ್ಕೂ ಅಪಾಯದಲ್ಲಿ ಇರುವವರಿಗೆ ಮಾತ್ರ ಸರ್ಕಾರ ಲಸಿಕೆ ಹಾಕಿಸಬೇಕು. ಮಾಸ್ಕ್ ಧರಿಸುವಂತೆ ಹೇಳಬೇಕು. ಐಸೋಲೇಟ್ ಆಗುವಂತೆ ಸೂಚಿಸಬೇಕು. ಅದರ ಬದಲು ಇಡೀ ಜಗತ್ತಿಗೆ ಲಸಿಕೆ ಹಾಕಿಸುವುದಲ್ಲ. ಲಸಿಕೆ ಹಾಕಿಸಿಕೊಳ್ಳದವರನ್ನು ತಾರತಮ್ಯದಿಂದ ನೋಡಬಾರದು. ಹಾಗೆ ಮಾಡುವುದು ತರ್ಕರಹಿತ ಮತ್ತು ಅಪಾಯಕಾರಿ ಆಗುತ್ತದೆ’ ಎಂದು ಅವರು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ:
‘ನನ್ನ ಮಗ ಡ್ರಗ್ಸ್ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್; ಇಲ್ಲಿದೆ ಶಾಕಿಂಗ್ ವಿಡಿಯೋ
‘ಇನ್ಮೇಲೆ ಒಳ್ಳೇ ಮನುಷ್ಯ ಆಗ್ತೀನಿ’; ಎನ್ಸಿಬಿ ಅಧಿಕಾರಿಗಳಿಗೆ ಭರವಸೆ ನೀಡಿದ ಶಾರುಖ್ ಪುತ್ರ ಆರ್ಯನ್ ಖಾನ್
Published On - 1:11 pm, Mon, 18 October 21