ಭಾರಿ ಚರ್ಚೆಗೆ ಕಾರಣವಾದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಯಶಸ್ವಿಯಾಗಿ 15 ದಿನಗಳನ್ನು ಪೂರೈಸಿದೆ. ಇಷ್ಟು ದಿನ ಕಳೆದರೂ ಕೂಡ ಗಲ್ಲಾ ಪೆಟ್ಟಿಗೆಯಲ್ಲಿ ಈ ಚಿತ್ರದ ಹವಾ ಕಡಿಮೆ ಆಗಿಲ್ಲ. ಈವರೆಗೂ ಈ ಸಿನಿಮಾದ ಕಲೆಕ್ಷನ್ 171 ಕೋಟಿ ರೂಪಾಯಿ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ 200 ಕೋಟಿ ರೂಪಾಯಿ ಆಗಲಿದೆ ಎಂಬುದರಲ್ಲಿ ಅನುಮಾನವೇ ಬೇಡ. ಶನಿವಾರ (ಮೇ 20) ಹಾಗೂ ಭಾನುವಾರ (ಮೇ 21) ಇನ್ನೂ ಹೆಚ್ಚಿನ ಜನರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ. ಅದರ ಪರಿಣಾಮವಾಗಿ ‘ದಿ ಕೇರಳ ಸ್ಟೋರಿ’ ಕಲೆಕ್ಷನ್ನಲ್ಲಿ (The Kerala Story Collection) ಗಣನೀಯವಾಗಿ ಏರಿಕೆ ಕಾಣಲಿದೆ. ಈ ಸಿನಿಮಾದಲ್ಲಿ ನಟಿ ಅದಾ ಶರ್ಮಾ (Adah Sharma) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿರ್ದೇಶಕ ಸುದೀಪ್ತೋ ಸೇನ್ ಅವರ ಬೇಡಿಕೆ ಹೆಚ್ಚಾಗಿದೆ.
1ನೇ ದಿನ: 8.03 ಕೋಟಿ ರೂ.
2ನೇ ದಿನ: 11.22 ಕೋಟಿ ರೂ.
3ನೇ ದಿನ: 16.40 ಕೋಟಿ ರೂ.
4ನೇ ದಿನ: 10.07 ಕೋಟಿ ರೂ.
5ನೇ ದಿನ: 11.14 ಕೋಟಿ ರೂ.
6ನೇ ದಿನ: 12 ಕೋಟಿ ರೂ.
7ನೇ ದಿನ: 12.50 ಕೋಟಿ ರೂ.
8ನೇ ದಿನ: 12.23 ಕೋಟಿ ರೂ.
9ನೇ ದಿನ: 19.50 ಕೋಟಿ ರೂ.
10ನೇ ದಿನ: 23.75 ಕೋಟಿ ರೂ.
11ನೇ ದಿನ: 10.30 ಕೋಟಿ ರೂ.
12ನೇ ದಿನ: 9.65 ಕೋಟಿ ರೂ.
13ನೇ ದಿನ: 8.03 ಕೋಟಿ ರೂ.
14ನೇ ದಿನ: 7 ಕೋಟಿ ರೂಪಾಯಿ
ಇದನ್ನೂ ಓದಿ: Sudipto Sen: ‘ದಿ ಕೇರಳ ಸ್ಟೋರಿ 2’ ಮಾಡಲು ನಿರ್ದೇಶಕರಿಗೆ ಆಫರ್; ಇದರಲ್ಲಿ ತೋರಿಸಲಿರುವ ವಿಷಯ ಏನು?
‘ದಿ ಕೇರಳ ಸ್ಟೋರಿ’ ಸಿನಿಮಾಗೆ ಪಶ್ಚಿಮ ಬಂಗಾಳದಲ್ಲಿ ನಿಷೇಧ ಹೇರಲಾಗಿತ್ತು. ಆದರೆ ಸರ್ಕಾರದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ಚಿತ್ರತಂಡಕ್ಕೆ ಖುಷಿ ನೀಡಿದೆ. ಈ ಬಗ್ಗೆ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಅವರು ಈ ಸಿನಿಮಾವನ್ನು ಮಮತಾ ಬ್ಯಾನರ್ಜಿ ನೋಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
#TheKeralaStory is EXCELLENT in Week 2 [HIGHER than Week 1]… Should again post BIG NUMBERS in Weekend 3… [Week 2] Fri 12.35 cr, Sat 19.50 cr, Sun 23.75 cr, Mon 10.30 cr, Tue 9.65 cr, Wed 8.03 cr [updated], Thu 7 cr. Total: ₹ 171.72 cr. #India biz. #Boxoffice#TheKeralaStory… pic.twitter.com/peZpPWvHiD
— taran adarsh (@taran_adarsh) May 19, 2023
ಸ್ಟಾರ್ ನಟರು ಇಲ್ಲದಿದ್ದರೂ ಕೂಡ ‘ದಿ ಕೇರಳ ಸ್ಟೋರಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಣ ಮಾಡಿದೆ. ಇದು ಟ್ರೇಡ್ ವಿಶ್ಲೇಷಕರಿಗೂ ಅಚ್ಚರಿ ಮೂಡಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರದ ಓಟ ಮುಂದುವರಿದಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಕೂಡ ಯಶಸ್ವಿಯಾಗಿ ಪ್ರದರ್ಶನ ಕಂಡರೆ ಸಹಜವಾಗಿಯೇ ಕಲೆಕ್ಷನ್ ಹೆಚ್ಚಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.