Rakhi Sawant: ಮೈಸೂರು ಜೈಲಿನಿಂದಲೇ ರಾಖಿ ಕೊಲ್ಲಲು ಪ್ಲ್ಯಾನ್? ಆದಿಲ್ ಖಾನ್ ಬಗ್ಗೆ ಹೊಸ ಆರೋಪ

ರಾಖಿ ಸಾವಂತ್ ಅವರದ್ದು ವಿಚಿತ್ರ ಸ್ವಭಾವ. ಎಲ್ಲಾ ವಿಚಾರಗಳಲ್ಲೂ ಅವರು ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಚಿಕ್ಕ ವಿಚಾರ ಸಿಕ್ಕರೂ ಅದರಿಂದ ಪ್ರಚಾರ ಪಡೆಯುತ್ತಾರೆ.

Rakhi Sawant: ಮೈಸೂರು ಜೈಲಿನಿಂದಲೇ ರಾಖಿ ಕೊಲ್ಲಲು ಪ್ಲ್ಯಾನ್? ಆದಿಲ್ ಖಾನ್ ಬಗ್ಗೆ ಹೊಸ ಆರೋಪ
ರಾಖಿ ಸಾವಂತ್

Updated on: May 16, 2023 | 11:28 AM

ಮುಖ್ಯಾಂಶಗಳು

  • ರಾಖಿ ಸಾವಂತ್ ಅವರದ್ದು ವಿಚಿತ್ರ ಸ್ವಭಾವ
  • ಎಲ್ಲಾ ವಿಚಾರಗಳಲ್ಲೂ ಅವರು ಗಮನ ಸೆಳೆಯಲು ಪ್ರಯತ್ನಿಸುತ್ತಾರೆ
  • ಚಿಕ್ಕ ವಿಚಾರ ಸಿಕ್ಕರೂ ಅದರಿಂದ ಪ್ರಚಾರ ಪಡೆಯುತ್ತಾರೆ

ರಾಖಿ ಸಾವಂತ್ (Rakhi Sawant) ಅವರ ಗೋಳು ಇಂದು ನಾಳೆಗೆ ಮುಗಿಯುವ ರೀತಿ ಕಾಣುತ್ತಿಲ್ಲ. ಒಂದಲ್ಲಾ ಒಂದು ವಿಚಾರ ಇಟ್ಟುಕೊಂಡು ಅವರು ಜನರ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಚಿಕ್ಕ ವಿಚಾರ ಸಿಕ್ಕರೂ ಸಾಕು ಅದನ್ನು ದೊಡ್ಡದಾಗಿ ಮಾಡುತ್ತಾರೆ. ಆದಿಲ್ ಖಾನ್​ ಜೊತೆಗಿನ ಮದುವೆ ವಿಚಾರವನ್ನು ಮುಚ್ಚಿಟ್ಟಿದ್ದ ಅವರು ನಂತರ ಅದನ್ನು ರಿವೀಲ್ ಮಾಡಿದರು. ಪತಿ ಬಗ್ಗೆ ರಾಖಿ ಸಾವಂತ್ ಹಲವು ಆರೋಪ ಮಾಡಿದ್ದು, ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಆದಿಲ್​ನ ಅರೆಸ್ಟ್​ ಮಾಡಲಾಗಿದೆ.  ಈಗ ರಾಖಿ ಹೊಸ ಆರೋಪ ಮಾಡಿದ್ದಾರೆ. ‘ನನ್ನನ್ನು ಕೊಲ್ಲಲು ಆದಿಲ್ ಜೈಲಿನಿಂದಲೇ ಪ್ಲಾನ್ ಮಾಡಿದ್ದಾನೆ’ ಎಂದು ಅವರು ಹೇಳಿದ್ದಾರೆ.

ರಾಖಿ ಸಾವಂತ್ ಅವರದ್ದು ವಿಚಿತ್ರ ಸ್ವಭಾವ. ಎಲ್ಲಾ ವಿಚಾರಗಳಲ್ಲೂ ಅವರು ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಚಿಕ್ಕ ವಿಚಾರ ಸಿಕ್ಕರೂ ಅದರಿಂದ ಪ್ರಚಾರ ಪಡೆಯುತ್ತಾರೆ. ಸಲ್ಮಾನ್ ಖಾನ್​ಗೆ ಬೆದರಿಕೆ ಬಂದಾಗ ತಮಗೂ ಬೆದರಿಕೆ ಬಂದಿದೆ ಎಂದು ಹೇಳಿಕೊಂಡು ಓಡಾಡಿದ್ದರು. ಹೆಲ್ಮೆಟ್ ಧರಿಸಿ ರಸ್ತೆ ಮೇಲೆಲ್ಲ ಸುತ್ತಾಡಿದ್ದರು. ಈಗ ಅವರು ಹೊಸ ಡ್ರಾಮಾ ಶುರು ಮಾಡಿದಂತಿದೆ. ಪತಿಯಿಂದ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.

‘ಆದಿಲ್​ ನನ್ನನ್ನು ಕೊಲ್ಲಲು ಜೈಲಿನಿಂದಲೇ ಸಂಚು ರೂಪಿಸುತ್ತಿದ್ದಾನೆ. ನನ್ನ ಮುಗಿಸಲು ಕಾಂಟ್ರ್ಯಾಕ್ಟ್ ನೀಡಿದ್ದಾನೆ. ನೀನು ನನ್ನನ್ನು ಕೊಲ್ಲಲು ಸಾಧ್ಯವಿಲ್ಲ. ನೀನು ಹೀಗೇಕೆ ಮಾಡುತ್ತಿದ್ದೀಯಾ? ಹಣಕ್ಕಾಗಿಯೇ ಅಥವಾ ದ್ವೇಷಕ್ಕಾಗಿಯೇ?’ ಎಂದು ರಾಖಿ ಪ್ರಶ್ನೆ ಮಾಡಿದ್ದಾರೆ.

‘ಆದಿಲ್ ನಿತ್ಯ ಜೈಲಿನಿಂದ ನನಗೆ ಕರೆ ಮಾಡುತ್ತಾನೆ. ಐ ಲವ್ ಯೂ ಎನ್ನುತ್ತಾನೆ. ನನ್ನನ್ನು ಇಲ್ಲಿಂದ ಬಿಡಿಸು ಎನ್ನುತ್ತಾನೆ. ನಾನು ಅವನನ್ನು ಕ್ಷಮಿಸಿದ್ದೇನೆ. ಆದರೆ, ನಾನು ಅವನನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ’ ಎಂದು ರಾಖಿ ಹೇಳಿದ್ದಾರೆ.

ಇದನ್ನೂ ಓದಿ: ‘ನಾನು ಹಿಂದೂ ಅಂತ ಆದಿಲ್​ ಖಾನ್​ ಮನೆಯವರು ನನ್ನ ಸೇರಿಸಿಕೊಳ್ತಿಲ್ಲ’; ಮೈಸೂರಲ್ಲಿ ರಾಖಿ ಸಾವಂತ್​ ಕಣ್ಣೀರು

ಫೆಬ್ರವರಿ 7ರಂದು ರಾಖಿ ಸಾವಂತ್ ಪತಿ ಆದಿಲ್​ನ ಅರೆಸ್ಟ್​ ಮಾಡಲಾಯಿತು. ಆದಿಲ್​ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ರಾಖಿ ಸಾವಂತ್ ದೂರಿದ್ದರು. ಅಷ್ಟೇ ಅಲ್ಲ ದೈಹಿಕವಾಗಿ ಆತ ಹಿಂಸೆ ನೀಡಿದ್ದಾನೆ ಎಂದೆಲ್ಲ ಆರೋಪ ಮಾಡಿದ್ದರು ರಾಖಿ. ಹೀಗಾಗಿ, ಆದಿಲ್​ನ ಬಂಧಿಸಲಾಗಿದೆ. ಇರಾನಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪವೂ ಅವರ ಮೇಲಿದೆ. ಸದ್ಯ ಅವರು ಮೈಸೂರಿನ ಜೈಲಿನಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:21 am, Tue, 16 May 23

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us