ಜನಪ್ರಿಯ ಗಾಯಕ ಉದಿತ್ ನಾರಾಯಣ್ (Udith Narayan) ಪುತ್ರ ಆದಿತ್ಯ ನಾರಾಯಣ್ ಸಹ ಒಳ್ಳೆಯ ಗಾಯಕರಾಗಿದ್ದು ಈಗಾಗಲೇ ಹಲವು ಸಿನಿಮಾಗಳಲ್ಲಿ ಹಾಡಿದ್ದಾರೆ. ತಮ್ಮದೇ ಬ್ಯಾಂಡ್ ಕಟ್ಟಿಕೊಂಡು ಲೈವ್ ಶೋಗಳನ್ನು ಸಹ ಮಾಡುತ್ತಾರೆ. ಲೈವ್ ಶೋಗಳಿಂದ ಭಾರಿ ಪ್ರಮಾಣದ ಹಣ ಗಾಯಕರಿಗೆ ಸಂಗೀತಕಾರರಿಗೆ ಇತ್ತೀಚಿನ ವರ್ಷಗಳಲ್ಲಿ ಹರಿದು ಬರುತ್ತಿದೆ. ಆದರೆ ಈ ಲೈವ್ ಶೋಗಳಲ್ಲಿ ಒಮ್ಮೊಮ್ಮೆ ಪ್ರೇಕ್ಷಕರು ದುರ್ವರ್ತನೆ ತೋರುವುದುಂಟು, ಆದರೆ ಈ ಬಾರಿ ಗಾಯಕ ಆದಿತ್ಯ ನಾರಾಯವಣ್ ಅಹಂಕಾರದಿಂದ ವರ್ತಿಸಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲೈವ್ ಶೋಗಳಲ್ಲಿ ಪ್ರೇಕ್ಷಕರೊಟ್ಟಿಗೆ ಸಂವಾದ ಮಾಡಿಕೊಂಡು ಗಾಯಕರು ಹಾಡು ಹಾಡುತ್ತಾರೆ. ಕೆಲವೊಮ್ಮೆ ವೇದಿಕೆ ಮೇಲಿನಿಂದಲೇ ಸೆಲ್ಫಿ ಸಹ ನೀಡುತ್ತಾರೆ. ಆದಿತ್ಯ ನಾರಾಯಣ್ ಚತ್ತೀಸ್ಘಡದ ಬಿಲಾಲಿಯಲ್ಲಿ ಲೈವ್ ಕಾನ್ಸರ್ಟ್ ಮಾಡುತ್ತಿದ್ದರು. ವೇದಿಕೆ ಮೇಲೆ ಓಡಾಡುತ್ತಾ ಹಾಡು ಹಾಡಿದರು. ಜನರನ್ನು ರಂಜಿಸಿದರು. ಆದರೆ ಈ ವೇಳೆ ವೇದಿಕೆಯ ಕೆಳಗಿದ್ದ ಅಭಿಮಾನಿಯೊಬ್ಬ ಅವನ ಫೋನ್ ನೀಡಿ ಸೆಲ್ಫಿ ತೆಗೆದುಕೊಡುವಂತೆ ಕೇಳಿದ್ದಾನೆ. ಇದರಿಂದ ಸಿಟ್ಟಾದ ಆದಿತ್ಯ, ಮೊದಲು ಮೈಕ್ನಿಂದ ಆ ವ್ಯಕ್ತಿಯ ಕೈಗೆ ಹೊಡೆದಿದ್ದಾನೆ, ಬಳಿಕ ಆತನ ಫೋನ್ ಕಿತ್ತುಕೊಂಡು ಅದನ್ನು ದೂರ ಬಿಸಾಡಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ:ಆಟೋಗ್ರಾಫ್ ನೀಡಲು ಹೆಲಿಕ್ಯಾಪ್ಟರ್ನಲ್ಲಿ ಬರುತ್ತಿದ್ದ ಗಾಯಕ ಕುಮಾರ್ ಸಾನು
ಆದಿತ್ಯ ಬಿಸಾಡಿದ ಫೋನು ಎರಡು ಭಾಗವಾಗಿ ಒಡೆದು ಹೋಗಿದೆ. ಆ ಫೋನ್ನ ಚಿತ್ರವೂ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೆಲ್ಫಿ ಕೇಳಲೆಂದು ಆ ಯುವಕ ತನ್ನ ಫೋನ್ನಿಂದ ವೇದಿಕೆ ಮೇಲಿದ್ದ ಆದಿತ್ಯನ ಕಾಲಿಗೆ ಮೆತ್ತಗೆ ಹೊಡೆದಿದ್ದಾನಷ್ಟೆ, ಇದಕ್ಕೆ ಕೋಪಗೊಂಡು ಫೋನ್ ಅನ್ನು ಎತ್ತಿ ಬಿಸಾಡಿದ್ದಾರೆ ಆದಿತ್ಯ ನಾರಾಯಣ್.
Aditya Narayan, son of ace singer Udit Narayan, gained popularity through fans’ support, but now he assaults a fan by throwing his mobile. #AdityaNarayan should be banned from participating in concerts for a couple of years and apologize to the fan for his actions. He needs a… pic.twitter.com/n2Chkx5FIr
— Deepak Khatri (@Deepakkhatri812) February 12, 2024
ಆದಿತ್ಯಾರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಆದಿತ್ಯಾ ನಾರಾಯಣ್ರ ವರ್ತನೆ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಆದಿತ್ಯಾ ನಾರಾಯಣ್ ಅಭಿಮಾನಿಗಳಿಂದಲೇ ಬೆಳೆದವರು, ಈಗ ಅಹಂಕಾರದಿಂದ ಅಭಿಮಾನಗಳ ಮೇಲೆ ಅಹಂಕಾರ ತೋರುತ್ತಿದ್ದಾರೆ. ಈತನಿಗೆ ಸರಿಯಾಗಿ ಬುದ್ಧಿಕಲಿಸಬೇಕು ಈತನ ಲೈವ್ ಕಾನ್ಸರ್ಟ್ ಗೆ ಅವಕಾಶ ನೀಡಬಾರದು. ಯಾರೂ ಸಹ ಈತನಿಂದ ಲೈವ್ ಕಾನ್ಸರ್ಟ್ ಮಾಡಿಸಬೇಡಿ ಎಂದು ಒತ್ತಾಯಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ