AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋಗ್ರಾಫ್ ನೀಡಲು ಹೆಲಿಕ್ಯಾಪ್ಟರ್​ನಲ್ಲಿ ಬರುತ್ತಿದ್ದ ಗಾಯಕ ಕುಮಾರ್ ಸಾನು

ನಟಿ ಕೃತಿ ಸನೋನ್ ಹಾಗೂ ಶಾಹಿದ್ ಕಪೂರ್ ಒಟ್ಟಾಗಿ ನಟಿಸಿರುವ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾ ಪ್ರಮೋಷನ್ ಕೆಲಸ ನಡೆಯುತ್ತಿದೆ. ರಿಯಾಲಿಟಿ ಶೋ ಒಂದಕ್ಕೆ ಇವರು ಬಂದಿದ್ದರು. ಈ ಶೋಗೆ ಕುಮಾರ್ ಸಾನು ಜಡ್ಜ್ ಆಗಿದ್ದರು. ಆಗ ಶಾಹಿದ್ ಹಳೆಯ ಘಟನೆ ಬಗ್ಗೆ ಮಾತನಾಡಿದ್ದಾರೆ.

ಆಟೋಗ್ರಾಫ್ ನೀಡಲು ಹೆಲಿಕ್ಯಾಪ್ಟರ್​ನಲ್ಲಿ ಬರುತ್ತಿದ್ದ ಗಾಯಕ ಕುಮಾರ್ ಸಾನು
ಕುಮಾರ್ ಸಾನು
ರಾಜೇಶ್ ದುಗ್ಗುಮನೆ
|

Updated on: Feb 07, 2024 | 2:27 PM

Share

ಕುಮಾರ್ ಸಾನು (Kumar Sanu) ಅವರು ಖ್ಯಾತ ಗಾಯಕ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. 80ರ ದಶಕದಲ್ಲೇ ಅವರು ಸಿನಿಮಾಗಳಿಗೆ ಹಾಡೋಕೆ ಪ್ರಾರಂಭಿಸಿದ್ದರು. 2003ರಲ್ಲಿ ‘ಇಷ್ಕ್ ವಿಷ್ಕ್’ ಸಿನಿಮಾ ಮೂಲಕ ಶಾಹಿದ್ ಕಪೂರ್ ಬಣ್ಣದ ಬದುಕು ಆರಂಭಿಸಿದ್ದರು. ಆ ಚಿತ್ರದಲ್ಲಿನ ಕೆಲವು ಹಾಡುಗಳನ್ನು ಕುಮಾರ್ ಸಾನು ಹಾಡಿದ್ದರು. ಅದಕ್ಕೂ ಮೊದಲು ಮ್ಯೂಸಿಕ್ ವಿಡಿಯೋಗಳಲ್ಲಿ ಶಾಹಿದ್ ಹಾಗೂ ಕುಮಾರ್ ಸಾನು ಒಟ್ಟಿಗೆ ಕೆಲಸ ಮಾಡಿದ್ದರು. ಇತ್ತೀಚೆಗೆ ಶಾಹಿದ್ ಅವರು ಅಪರೂಪದ ವಿಚಾರ ಹಂಚಿಕೊಂಡಿದ್ದಾರೆ.

ಶಾಹಿದ್ ಮತ್ತು ಬಾಲಿವುಡ್ ನಟಿ ಕೃತಿ ಸನೋನ್ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರದಲ್ಲಿ ಅವರು ಬ್ಯುಸಿ ಆಗಿದ್ದಾರೆ. ನಾನಾ ರಿಯಾಲಿಟಿ ಶೋಗಳಿಗೆ ತೆರಳಿ ಅವರು ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ಇವರು ಕಾಣಿಸಿಕೊಂಡರು. ತಮ್ಮ ಸಿನಿಮಾ ಪ್ರಚಾರ ಮಾಡಲು ಇವರು ಆಗಮಿಸಿದ್ದರು.

ಈ ರಿಯಾಲಿಟಿ ಶೋಗೆ ಕುಮಾರ್ ಸಾನು ಜಡ್ಜ್ ಆಗಿದ್ದರು. ಅವರನ್ನು ನೋಡಿ ಶಾಹಿದ್‌ಗೆ ಹಳೆಯ ಘಟನೆ ನೆನಪಾಯಿತು. ರಿಯಾಲಿಟಿ ಶೋ ವೇದಿಕೆಯಲ್ಲಿ ನಿಂತು ನೆನಪಿನ ಬುತ್ತಿ ತೆರೆದಿಟ್ಟರು ಶಾಹಿದ್. ‘ನಾವು ಮ್ಯೂಸಿಕ್ ವಿಡಿಯೋದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಶೂಟಿಂಗ್ ವೇಳೆ ಕುಮಾರ್ ಸಾನು ಹೆಲಿಕಾಪ್ಟರ್‌ನಲ್ಲಿ ಬಂದು ಆಟೋಗ್ರಾಫ್ ನೀಡಿದ್ದರು. ಆ ಸಮಯದಲ್ಲಿ ಸಾನು ತುಂಬಾ ಬ್ಯುಸಿಯಾಗಿದ್ದರು. ಹೆಲಿಕಾಪ್ಟರ್ ಮೂಲಕವೇ ಎಲ್ಲ ಕಡೆಗಳಲ್ಲಿ ಸಂಚರಿಸುತ್ತಿದ್ದರು. ಹೆಲಿಕಾಪ್ಟರ್​ನಲ್ಲೇ ಹಾಡಿನ ಚಿತ್ರೀಕರಣಕ್ಕೆ ಬಂದಿದ್ದರು. ಮೂರು ಹಾಡುಗಳನ್ನು ಹಾಡಿ, ಹಸ್ತಾಕ್ಷರ ನೀಡಿ ಹಿಂತಿರುಗಿದರು’ ಎಂದಿದ್ದಾರೆ ಶಾಹಿದ್.

ಇದನ್ನೂ ಓದಿ: ಕೃತಿ ಸನೋನ್​-ಶಾಹಿದ್ ಕಪೂರ್​ ನಡುವಿನ ಶೇಕಡ 25ರಷ್ಟು ಹಸಿಬಿಸಿ ದೃಶ್ಯಗಳಿಗೆ ಕತ್ತರಿ

‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾ ಬಗ್ಗೆ..

‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾ ಶುಕ್ರವಾರ (ಫೆಬ್ರವರಿ 9) ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಹಾಗೂ ಕೃತಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್​ ಪ್ರತಿಕ್ರಿಯೆ ಮುಗಿದಿದೆ. ಸಿನಿಮಾದಲ್ಲಿರುವ ಶೇ. 25ರಷ್ಟು ಹಸಿಬಿಸಿ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ. ಆರಾಧನಾ ಶಾ ಹಾಗೂ ಅಮಿತ್​ ಜೋಶಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಡಿಂಪಲ್​ ಕಪಾಡಿಯಾ, ಧರ್ಮೇಂದ್ರ, ರಾಜೇಶ್ ಕುಮಾರ್, ರಾಕೇಶ್​ ಬೇಡಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು