ಸಹನಟಿಯರ ಸ್ತನಗಳ ಬಗ್ಗೆ ಕಮೆಂಟ್: ಅದಿತಿ ರಾವ್ ಹಳೆ ವಿಡಿಯೋ ವೈರಲ್

|

Updated on: Jul 28, 2023 | 5:52 PM

Aditi Rao Hydiri: ನಟಿ ಅದಿತಿ ರಾವ್ ಹೈದಿರಿ ಸಹ ನಟಿಯರ ಸ್ತನಗಳ ಬಗ್ಗೆ ಕಮೆಂಟ್ ಮಾಡಿದ್ದ ಹಳೆಯ ವಿಡಿಯೋ ವೈರಲ್ ಆಗಿದೆ.

ಸಹನಟಿಯರ ಸ್ತನಗಳ ಬಗ್ಗೆ ಕಮೆಂಟ್: ಅದಿತಿ ರಾವ್ ಹಳೆ ವಿಡಿಯೋ ವೈರಲ್
ಅದಿತಿ ರಾವ್ ಹೈದರಿ
Follow us on

ಸಿನಿಮಾ (Cinema) ನಟಿಯರ ನಡುವೆ ಮತ್ಸರ ತೀರಾ ಸಾಮಾನ್ಯ. ಸಹನಟಿಯರ ಸಿನಿಮಾ ಹಿಟ್ ಆದರೆ, ಹಾಡು ವೈರಲ್ ಆದರೆ, ಪ್ರಶಸ್ತಿ ದೊರೆತರೆ, ದೊಡ್ಡ ಬ್ಯಾನರ್ ಸಿನಿಮಾ ಸಿಕ್ಕರೆ, ಅಂದದ ಬಗ್ಗೆ ಜನ ಹೊಗಳಿದರೆ ಹೀಗೆ ಹಲವು ಕಾರಣಗಳಿಗೆ ಪರಸ್ಪರ ಮತ್ಸರಗಳನ್ನು ಬೆಳೆಸಿಕೊಳ್ಳುತ್ತಾರೆ. ಅದರಲ್ಲಿಯೂ ಸಹ ನಟಿಯರ ಫಿಟ್​ನೆಸ್ ಅಂದದ ಬಗ್ಗೆಯಂತೂ ಕೆಲವು ನಟಿಯರು ಬಹಳ ಉರಿದುಕೊಳ್ಳುತ್ತಾರೆ. ಆಗಾಗ್ಗೆ ಈ ಬಗ್ಗೆ ಕಮೆಂಟ್​ಗಳನ್ನು ಮಾಡುತ್ತಿರುತ್ತಾರೆ. ನಟಿ ಅದಿತಿ ರಾವ್ ಹೈದರಿ (Aditi Rao Hydari) ಸಹ ಇದಕ್ಕೆ ಹೊರತಲ್ಲ. ಈ ಹಿಂದೆ ಅವರು ಸಹನಟಿಯರ ಸ್ತನಗಳ ಬಗ್ಗೆ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದ್ದು, ನಟಿಯನ್ನು ಟ್ರೋಲ್ (Troll) ಮಾಡಲಾಗುತ್ತಿದೆ.

‘ಮರ್ಡರ್ 3’ ಸಿನಿಮಾದ ಪ್ರಚಾರದ ವೇಳೆ ಮಾಧ್ಯಮದವರು ಸಿನಿಮಾದ ನಾಯಕ ರಣ್​ದೀಪ್ ಹೂಡಾ ಕುರಿತು, ‘ಮರ್ಡರ್​ 1 ನಲ್ಲಿ ಮಲ್ಲಿಕಾ ಶೆರಾವತ್, 2 ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ಈಗ 3 ನಲ್ಲಿ ಅದಿತಿ ರಾವ್ ಹೈದರಿ ನಿಮಗೆ ಯಾರನ್ನು ನೋಡಿದರೆ ವಾವ್ ಎನಿಸುತ್ತದೆ ಎಂದು ಕೇಳಿದ್ದರು. ಇದಕ್ಕೆ ರನ್​ದೀಪ್ ಹೂಡಾ ತಮಾಷೆಯ ಉತ್ತರ ನೀಡುತ್ತಿರುವಾಗ ಮಧ್ಯ ಪ್ರವೇಶಿಸಿದ್ದ ಅದಿತಿ ರಾವ್ ಹೈದಿರಿ, ಆ ಇಬ್ಬರು ನಟಿಯರ ಅಂದದ ಬಗ್ಗೆ ಪರೋಕ್ಷ ಕಮೆಂಟ್ ಮಾಡಿ, ”ಎದೆಯಲ್ಲಿ ಸ್ಟೀಲ್ ಇರುವುದು ಮುಖ್ಯ, ಸ್ತನಗಳಲ್ಲಿ ಪ್ಲಾಸ್ಟಿಕ್ ಅಲ್ಲ” ಎನ್ನುವ ಮೂಲಕ. ನಟಿಯರು ಅಂದವಾಗಿ ಕಾಣಲು ಸ್ತನಗಳನ್ನು ಕೃತಕವಾಗಿ ಉಬ್ಬಿಸಿಕೊಂಡಿರುತ್ತಾರೆ ಎಂದಿದ್ದರು.

ಅದಾದ ಕೆಲ ತಿಂಗಳುಗಳ ಬಳಿಕ ಅದಿತಿ ಸಹ ಅಂಥಹುದೇ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿಗಳು ಹಬ್ಬಿತು. ಆ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ”ದೇಹ ಎನ್ನುವುದು ಅದನ್ನು ಹೊಂದಿದವರ ಆಸ್ತಿ. ತಮ್ಮ ದೇಹದೊಂದಿಗೆ ಏನು ಮಾಡಬೇಕು, ಏನು ಮಾಡಬಾರದು ಎಂಬುದು ಅವರ ವೈಯಕ್ತಿಕ ಆಯ್ಕೆ” ಎಂದಿದ್ದರು. ಒಂದೇ ವಿಷಯದ ಬಗ್ಗೆ ಅದಿತಿಯ ಎರಡು ಭಿನ್ನ ಹೇಳಿಕೆಗಳ ವಿಡಿಯೋಗಳನ್ನು ಕೊಲ್ಯಾಜ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಂಚಿಕೊಂಡಿದ್ದು, ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ:Kriti Sanon Birthday: ಕೃತಿ ಸನೋನ್​ಗೆ ಜನ್ಮದಿನದ ಸಂಭ್ರಮ; ಎಷ್ಟು ಆಸ್ತಿ ಮಾಡಿದ್ದಾರೆ ಈ ನಟಿ?

ಮಲಯಾಳಂನ ‘ಪ್ರಜಾಪತಿ’ ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟ ನಟಿ ಅದಿತಿ ರಾವ್ ಹೈದರಿ ತಮಿಳು, ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಮಾತ್ರವಲ್ಲದೆ ಹಿಂದಿಯ ಅನೇಕ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ‘ಡೆಲ್ಲಿ 6’, ‘ಧೋಬಿ ಘಾಟ್’, ‘ಪದ್ಮಾವತ್’, ‘ರಾಕ್​ಸ್ಟಾರ್’ ಇನ್ನೂ ಕೆಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ತೆಲುಗಿನ ‘ಮಹಾ ಸಮುದ್ರಮ್’, ‘ವಿ’, ಮಣಿರತ್ನಂ ನಿರ್ದೇಶನದ ತಮಿಳು ಸಿನಿಮಾ ‘ಕಾಟ್ರು ವಿಳೆಯಾಡು’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅದಿತಿ ರಾವ್ ಹೈದರಿ, ನಟ ಸಿದ್ಧಾರ್ಥ್ ಜೊತೆಗೆ ಪ್ರೇಮ ಸಂಬಂಧದಲ್ಲಿದ್ದಾರೆ. ಇಬ್ಬರೂ ತಮ್ಮ ಆಪ್ತ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಸಹ ಶೀಘ್ರದಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ