AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aditi Rao Hydari: ರಜೆಯಲ್ಲಿ ಎಂಜಾಯ್​ ಮಾಡುತ್ತಿರುವ ಅದಿತಿ ರಾವ್​ ಹೈದರಿ-ಸಿದ್ದಾರ್ಥ್​; ಒಟ್ಟಿಗೆ ಕಾಲ ಕಳೆದ ಜೋಡಿ ಹಕ್ಕಿ

ಸಿದ್ದಾರ್ಥ್​ ಮತ್ತು ಅದಿತಿ ರಾವ್​ ಹೈದರಿ ಅವರು ಒಂದಷ್ಟು ದಿನಗಳಿಂದ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಫೋಟೋಗಳು ವೈರಲ್​ ಆಗಿವೆ.

Aditi Rao Hydari: ರಜೆಯಲ್ಲಿ ಎಂಜಾಯ್​ ಮಾಡುತ್ತಿರುವ ಅದಿತಿ ರಾವ್​ ಹೈದರಿ-ಸಿದ್ದಾರ್ಥ್​; ಒಟ್ಟಿಗೆ ಕಾಲ ಕಳೆದ ಜೋಡಿ ಹಕ್ಕಿ
ಅದಿತಿ ರಾವ್​ ಹೈದರಿ, ಸಿದ್ದಾರ್ಥ್​
ಮದನ್​ ಕುಮಾರ್​
|

Updated on: Jun 04, 2023 | 1:26 PM

Share

ನಟಿ ಅದಿತಿ ರಾವ್​ ಹೈದರಿ (Aditi Rao Hydari) ಅವರು ವೈಯಕ್ತಿಕ ಜೀವನದ ಕಾರಣಕ್ಕೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಈಗ ಅವರು ಸಿನಿಮಾ ಚಟುವಟಿಕೆಗಳಿಂದ ಬಿಡುವು ಪಡೆದುಕೊಂಡು ರಜೆಯ ಮಜಾ ಸವಿಯುತ್ತಿದ್ದಾರೆ. ಅವರಿಗೆ ನಟ ಸಿದ್ದಾರ್ಥ್​ ಸಾಥ್​ ನೀಡಿದ್ದಾರೆ. ಸಿದ್ದಾರ್ಥ್​ (Siddharth) ಮತ್ತು ಅದಿತಿ ರಾವ್​ ಹೈದರಿ ಅವರು ಒಂದಷ್ಟು ದಿನಗಳಿಂದ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಫೋಟೋಗಳು ವೈರಲ್​ ಆಗಿವೆ. ಈಗ ಈ ಜೋಡಿ ಹಕ್ಕಿಗಳು ರಾಜಸ್ಥಾನಕ್ಕೆ ತೆರಳಿವೆ. ಅಲ್ಲಿ ಇಬ್ಬರೂ ಜೊತೆಯಾಗಿ ಫೋಟೋಗೆ ಪೋಸ್​ ನೀಡಿದ್ದಾರೆ. ಒಟ್ಟಿನಲ್ಲಿ ಇಬ್ಬರ ನಡುವಿನ ಪ್ರೀತಿಗೆ ಹೊಸ ಹೊಸ ಸಾಕ್ಷಿ ಸಿಗುತ್ತಲೇ ಇವೆ. ಆದಷ್ಟು ಬೇಗ ಇವರಿಬ್ಬರು ತಮ್ಮ ರಿಲೇಷನ್​ಶಿಪ್​ ಬಗ್ಗೆ ಬಹಿರಂಗವಾಗಿ ಮಾತನಾಡಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಅದಿತಿ ರಾವ್​ ಹೈದರಿ ಅವರಿಗೆ ಬಹುಭಾಷೆಯಲ್ಲಿ ಡಿಮ್ಯಾಂಡ್​ ಇದೆ. ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿ ಅವರು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅದೇ ರೀತಿ ಸಿದ್ದಾರ್ಥ್​ ಕೂಡ ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಇವರಿಬ್ಬರು ಮದುವೆ ಆಗಬಹುದು ಎಂಬುದು ಅನೇಕರ ಊಹೆ.

View this post on Instagram

A post shared by Bina Kak (@kakbina)

ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ನಡುವಿನ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಡುವಿನ ಸಮಯದಲ್ಲಿ ಒಟ್ಟಾಗಿ ಕಾಲ ಕಳೆದಿರುವ ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ಅವರು ಇತ್ತೀಚೆಗೆ ‘ಟಮ್​ ಟಮ್​..’ ಹಾಡಿಗೆ ಹೆಜ್ಜೆ ಹಾಕಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಅದು ವೈರಲ್​ ಆಗಿತ್ತು. ದಿಯಾ ಮಿರ್ಜಾ, ಫರ್ಹಾ ಖಾನ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಮೆಂಟ್​ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದರು. ಈ ಹಿಂದೆ ಅವರಿಬ್ಬರು ಬರ್ತ್​ಡೇ ಪ್ರಯುಕ್ತ ಪರಸ್ಪರ ವಿಶ್​ ಮಾಡಿಕೊಂಡಿದ್ದು ಗಮನ ಸೆಳೆದಿತ್ತು. ಸಿದ್ದಾರ್ಥ್​ ಅವರು ‘ಹೃದಯದ ರಾಜಕುಮಾರಿ’ ಎಂಬ ಕ್ಯಾಪ್ಷನ್​ನೊಂದಿಗೆ ಅದಿತಿ ಫೋಟೋ ಹಂಚಿಕೊಂಡಿದ್ದರು.

ಇದನ್ನೂ ಓದಿ: ನಟಿ ಅದಿತಿ ರಾವ್ ಜತೆ ತಮಿಳು ನಟ ಸಿದ್ದಾರ್ಥ್ ಡೇಟಿಂಗ್? ಮುಂಬೈನಲ್ಲಿ ಸುತ್ತಾಟ

ಅದಿತಿ ರಾವ್​ ಹೈದರಿ ಅವರು ಹಲವು ಭಾಷೆಯ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಅವರು ಇತ್ತೀಚೆಗೆ ಕಾನ್​ ಚಿತ್ರೋತ್ಸವಕ್ಕೆ ಹಾಜರಿ ಹಾಕಿದ್ದರು. ಕಾನ್​ ಚಿತ್ರೋತ್ಸವದಲ್ಲಿ ವಿವಿಧ ದೇಶ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಭಾರತದ ಅನೇಕ ನಟಿಯರು ಕೂಡ ಪಾಲ್ಗೊಂಡಿದ್ದರು. ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಅದಿತಿಗೆ ಈ ಚಾನ್ಸ್​ ಸಿಕ್ಕಿದ್ದಕ್ಕೆ ಅವರ ಅಭಿಮಾನಿಗಳಿಗೆ ಖುಷಿ ಆಗಿತ್ತು. ಕಳೆದ ವರ್ಷ ಕೂಡ ಅದಿತಿ ರಾವ್​ ಹೈದರಿ ಅವರು ಕಾನ್​ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದರು. ಈ ಬಾರಿ ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿತು. ಹಳದಿ ಬಣ್ಣದ ಗೌನ್​ ಧರಿಸಿ ಅವರು ರೆಡ್​ ಕಾರ್ಪೆಟ್​ನಲ್ಲಿ ಮಿಂಚಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ