‘ದಂಗಲ್ ಚಿತ್ರಕ್ಕೆ ಸೀಕ್ವೆಲ್ ಮಾಡೋ ಸಮಯ’; ವಿನೇಶ್ ಫೋಗಟ್ ಜೀವನ ಆಧರಿಸಿ ಬರಲಿದೆ ಸಿನಿಮಾ?

|

Updated on: Aug 07, 2024 | 8:53 AM

ಪ್ಯಾರಿಸ್ ಒಲಂಪಿಕ್ಸ್​ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್‌ ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅವರ ಜೀವನ ಆಧರಿಸಿ ಸಿನಿಮಾ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

‘ದಂಗಲ್ ಚಿತ್ರಕ್ಕೆ ಸೀಕ್ವೆಲ್ ಮಾಡೋ ಸಮಯ’; ವಿನೇಶ್ ಫೋಗಟ್ ಜೀವನ ಆಧರಿಸಿ ಬರಲಿದೆ ಸಿನಿಮಾ?
‘ದಂಗಲ್ ಚಿತ್ರಕ್ಕೆ ಸೀಕ್ವೆಲ್ ಮಾಡೋ ಸಮಯ’; ವಿನೇಶ್ ಫೋಗಟ್ ಜೀವನ ಆಧರಿಸಿ ಬರಲಿದೆ ಸಿನಿಮಾ?
Follow us on

ಭಾರತದ ವ್ರೆಸ್ಲರ್ ವಿನೇಶ್ ಫೋಗಟ್ ಅವರು 2024ರ ಒಲಂಪಿಕ್ಸ್​​ನಲ್ಲಿ 50 ಕೆಜಿ ವಿಭಾಗದ ಮಹಿಳಾ ವ್ರೆಸ್ಲಿಂಗ್​ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಫೈನಲ್ ಪ್ರವೇಶ ಮಾಡಿದ್ದಾರೆ. ಇದರಿಂದ ಭಾರತಕ್ಕೆ ಮತ್ತೊಂದು ಪದಕ ಸಿಗೋದು ಖಚಿತ ಆಗಿದೆ. ಇವರು ಸಾಗಿ ಬಂದ ಹಾದಿ ಅನೇಕರಿಗೆ ಮಾದರಿ. ಅವರ ಜೀವನ ಆಧರಿಸಿ ಸಿನಿಮಾ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ‘ದಂಗಲ್ 2’ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳಲಾಗುತ್ತಿದೆ.

ವಿನೇಶ್ ಅವರು 2016 ಹಾಗೂ 2020ರ ಒಲಂಪಿಕ್​ನ ಕ್ವಾಟರ್​ಫೈನಲ್​ನಲ್ಲಿ ವಿನೇಶ್ ಸೋತಿದ್ದರು. ಈಗ ಅವರು ಕ್ಯೂಬಾದ ಆಟಗಾರ್ತಿಯನ್ನು ಸೋಲಿಸಿ ಫೈನಲ್ ತಲುಪಿದ್ದಾರೆ. ಒಲಂಪಿಕ್ ವ್ರೆಸ್ಲಿಂಗ್​ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಖ್ಯಾತಿ ಇವರಿಗೆ ಸಿಕ್ಕಿದೆ. ಈ ಕಥೆಯನ್ನು ಆಧರಿಸಿ ಸಿನಿಮಾ ಮಾಡುವ ಆಗ್ರಹ ಕೇಳಿ ಬಂದಿದೆ.

2016ರಲ್ಲಿ ‘ದಂಗಲ್’ ಸಿನಿಮಾ ರಿಲೀಸ್ ಆಯಿತು. ಆಮಿರ್ ಖಾನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಸಾಕಷ್ಟು ಗಮನ ಸೆಳೆಯಿತ್ತು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಹುಡುಗಿ ಚಿನ್ನದ ಪದಕ ಗೆಲ್ಲುವ ಕಥೆ ಈ ಚಿತ್ರದಲ್ಲಿ ಇತ್ತು. ವಿನೇಶ್ ಹಾದಿಯೂ ಸಾಕಷ್ಟು ದುರ್ಗಮ ಆಗಿತ್ತು. ಹೀಗಾಗಿ, ‘ದಂಗಲ್ 2’ ಮಾಡುವ ಆಗ್ರಹ ಕೇಳಿ ಬಂದಿದೆ.

ಇದನ್ನೂ ಓದಿ: ಫೈನಲ್​ ಪ್ರವೇಶಿಸಿ ಕುಸ್ತಿಪಟು ವಿನೇಶ್ ಫೋಗಟ್, ಭಾರತಕ್ಕೆ ಮತ್ತೊಂದು ಪದಕ ಖಾತ್ರಿ

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ‘ದಂಗಲ್ 2 ಮಾಡುವ ಸಮಯ. ಆಮಿರ್ ಖಾನ್ ಅವರು ಇದಕ್ಕೆ ರೆಡಿ ಆಗಬೇಕು’ ಎಂದು ಕೆಲವರು ಆಗ್ರಹಿಸಿದ್ದಾರೆ. ‘ದಂಗಲ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈಗ ವಿನೇಶ್ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದರೆ ಯಶಸ್ಸು ಸಿಕ್ಕರೂ ಸಿಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:49 am, Wed, 7 August 24