‘ಶೈತಾನ್’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಹೊಸ ದಾಖಲೆ ಬರೆದ ಅಜಯ್ ದೇವಗನ್
ಅಜಯ್ ದೇವಗನ್ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಸಾಕಷ್ಟು ಭಿನ್ನತೆ ತೋರುತ್ತಿದ್ದಾರೆ. ಇತ್ತೀಚೆಗೆ ಅವರು ‘ಶೈತಾನ್’ ಸಿನಿಮಾ ಮೂಲಕ ಗಮನ ಸೆಳೆದಿದ್ದಾರೆ. ಈ ಚಿತ್ರಕ್ಕೆ ಈಗ ಸೀಕ್ವೆಲ್ ಬರುತ್ತಿದೆ. ಈ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಮಾಹಿತಿ ಬರಬೇಕಿದೆ.
ಅಜಯ್ ದೇವಗನ್ ನಟನೆಯ ‘ಶೈತಾನ್’ ಸಿನಿಮಾ ದೊಡ್ಡ ಗೆಲುವು ಕಂಡಿತು. ಈ ಚಿತ್ರದಿಂದ ಅವರಿಗೆ ಭರ್ಜರಿ ಗೆಲುವು ಸಿಕ್ಕಿದೆ. ಈ ಸಿನಿಮಾಗೆ ಈಗ ಸೀಕ್ವೆಲ್ ಮಾಡಲು ತಂಡ ರೆಡಿ ಆಗಿದೆ. ಅಜಯ್ ದೇವಗನ್ ಅವರು ಸೀಕ್ವೆಲ್ನಲ್ಲಿ ನಟಿಸಲಿದ್ದಾರೆ. ಈ ಮೂಲಕ ‘ಶೈತಾನ್’ ಫ್ರಾಂಚೈಸ್ನ ಭಾಗವಾಗಿ ಅಜಯ್ ಇರಲಿದ್ದಾರೆ. ಇದರ ಜೊತೆಗೆ ಅವರು ವಿಶೇಷ ದಾಖಲೆಯನ್ನು ಕೂಡ ಬರೆದಿದ್ದಾರೆ.
ಈ ವರ್ಷ ರಿಲೀಸ್ ಆದ ‘ಶೈತಾನ್’ ಸಿನಿಮಾ ಮೆಚ್ಚುಗೆ ಪಡೆಯಿತು. ಬ್ಲ್ಯಾಕ್ ಮ್ಯಾಜಿಕ್ನ ಕಥೆ ಈ ಚಿತ್ರದಲ್ಲಿ ಇತ್ತು. ಅಜಯ್ ದೇವಗನ್ ಈ ಚಿತ್ರಕ್ಕೆ ಹೀರೋ. ಜ್ಯೋತಿಕಾ ಅವರು ಅಜಯ್ ದೇವಗನ್ ಪತ್ನಿ ಪಾತ್ರದಲ್ಲಿ ಕಾಣಸಿಕೊಂಡಿದ್ದರು. ಆರ್. ಮಾಧವನ್ ಅವರು ನೆಗೆಟಿವ್ ಶೇಡ್ನ ಪಾತ್ರ ಮಾಡಿದ್ದರು. ಈಗ ‘ಶೈತಾನ್’ ಫ್ರಾಂಚೈಸ್ ಆಗಿ ಬದಲಾಗುತ್ತಿದೆ. ಭಾರತದ ಹೀರೋ ಒಬ್ಬರು ಅತಿ ಹೆಚ್ಚು ಫ್ರಾಂಚೈಸ್ಗಳಲ್ಲಿ ನಟಿಸಿದ ಖ್ಯಾತಿ ಅಜಯ್ ದೇವಗನ್ಗೆ ಸಿಕ್ಕಿದೆ.
‘ಶೈತಾನ್ 2’ ಚಿತ್ರಕ್ಕೆ ಸ್ಕ್ರಿಪ್ಟ್ ಫೈನಲ್ ಆಗಿದೆ. ಅಜಯ್ ದೇವಗನ್ ಹಾಗೂ ಸಿನಿಮಾ ತಂಡದವರು ಮಾತುಕತೆ ನಡೆಸಿದ್ದು, ಈ ಸಿನಿಮಾ ಸೆಟ್ಟೇರಬೇಕು ಎಂದು ಆಶಿಸಿದ್ದಾರೆ. ಅಜಯ್ ದೇವಗನ್ ಅವರು ಬೇರೆ ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಈ ಚಿತ್ರದ ಕೆಲಸದಲ್ಲೂ ತೊಡಗಿಕೊಳ್ಳಲಿದ್ದಾರೆ.
ಸದ್ಯ ಅಜಯ್ ದೇವಗನ್ ಹಲವು ಸಿನಿಮಾ ಸೀಕ್ವೆಲ್ಗಳಲ್ಲಿ ನಟಿಸುತ್ತಿದ್ದಾರೆ. ‘ಸಿಂಗಂ ಅಗೇನ್’, ‘ರೇಡ್ 2’ ‘ದೇ ದೇ ಪ್ಯಾರ್ ದೇ 2’ ಹಾಗೂ ‘ಸನ್ ಆಫ್ ಸರ್ದಾರ್ 2’ ಚಿತ್ರಗಳಲ್ಲಿ ಅವರು ಬ್ಯುಸಿ ಇದ್ದಾರೆ. ಈಗ ಈ ಸಾಲಿಗೆ ‘ಶೈತಾನ್ 2’ ಕೂಡ ಸೇರ್ಪಡೆ ಆಗಿದೆ.
ಇದನ್ನೂ ಓದಿ: ಮೊದಲ ದಲಿತ ಕ್ರಿಕೇಟಿಗನ ಬಗ್ಗೆ ಬಯೋಪಿಕ್; ಮುಖ್ಯಭೂಮಿಕೆಯಲ್ಲಿ ಅಜಯ್ ದೇವಗನ್
ಅಜಯ್ ದೇವಗನ್ ಅವರು ಈ ಮೊದಲು ‘ಗೋಲ್ಮಾಲ್’ (4 ಸಿನಿಮಾಗಳು), ‘ಸಿಂಗಂ’ (2 ಸಿನಿಮಾ), ‘ಧಮಾಲ್’ (3 ಸಿನಿಮಾಗಳಿದ್ದು ‘ಟೋಟಲ್ ಧಮಾಲ್’ನಲ್ಲಿ ನಟನೆ), ‘ದೃಶ್ಯಂ’ (2 ಸಿನಿಮಾ) ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.