ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಅಭಿಷೇಕ್-ಐಶ್ವರ್ಯಾ: ಊಹಾಪೋಹಗಳಿಗೆ ತೆರೆ
Aishwarya Rai-Abhishek Bahchcan: ಐಶ್ವರ್ಯಾ ಮತ್ತು ಅಭಿಷೇಕ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಹರಿದಾಡಲು ಆರಂಭವಾಗಿವೆ. ಅಭಿಷೇಕ್ ಹೆಸರು ಮತ್ತೊಬ್ಬ ನಟಿಯ ಜೊತೆಗೂ ಸಹ ಕೇಳಿ ಬಂದಿತ್ತು. ಐಶ್ವರ್ಯಾ, ಈಗಾಗಲೇ ಬೇರೆ ವಾಸಿಸುತ್ತಿದ್ದಾರೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ಆದರೆ ಆ ಊಹಾಪೋಹಗಳಿಗೆ ಮತ್ತೊಮ್ಮೆ ತೆರೆ ಎಳೆದಿದ್ದಾರೆ ಅಭಿಷೇಕ್ ಮತ್ತು ಐಶ್ವರ್ಯಾ ರೈ.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ (Aishwarya Rai) ಬಾಲಿವುಡ್ನ ತಾರಾ ದಂಪತಿ. ಇವರ ವಿವಾಹದಿಂದ ಈಗಿನ ವರೆಗೂ ದಾಂಪತ್ಯದ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಬಂದಿವೆ. ಅಭಿಷೇಕ್ ಮತ್ತು ಐಶ್ವರ್ಯಾಗೆ ಮದುವೆಯಾಗಿ 19 ವರ್ಷಗಳಾಗುತ್ತಾ ಬಂದಿದೆ. ಇಬ್ಬರಿಗೂ ಆರಾಧ್ಯಾ ಹೆಸರಿನ ಮುದ್ದಾದ ಮಗಳಿದ್ದಾಳೆ. ಆದರೆ ಇತ್ತೀಚೆಗೆ ಐಶ್ವರ್ಯಾ ಮತ್ತು ಅಭಿಷೇಕ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಹರಿದಾಡಲು ಆರಂಭವಾಗಿವೆ. ಅಭಿಷೇಕ್ ಹೆಸರು ಮತ್ತೊಬ್ಬ ನಟಿಯ ಜೊತೆಗೂ ಸಹ ಕೇಳಿ ಬಂದಿತ್ತು. ಐಶ್ವರ್ಯಾ, ಈಗಾಗಲೇ ಬೇರೆ ವಾಸಿಸುತ್ತಿದ್ದಾರೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ಆದರೆ ಆ ಊಹಾಪೋಹಗಳಿಗೆ ಮತ್ತೊಮ್ಮೆ ತೆರೆ ಎಳೆದಿದ್ದಾರೆ ಅಭಿಷೇಕ್ ಮತ್ತು ಐಶ್ವರ್ಯಾ ರೈ.
14 ವರ್ಷದ ಆರಾಧ್ಯಾ ಬಚ್ಚನ್, ಮುಂಬೈನ ಧೀರುಬಾಯ್ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಿನ್ನೆಯಷ್ಟೆ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ನಡೆದಿದ್ದು, ವಾರ್ಷಿಕೋತ್ಸವದಲ್ಲಿ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಅವರುಗಳು ಪಾಲ್ಗೊಂಡಿದ್ದರು. ಮಗಳ ಸಾಂಸ್ಕೃತಿ ಕಾರ್ಯಕ್ರಮ ನೋಡಲು ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಒಟ್ಟಿಗೆ ಆಗಮಿಸಿದ್ದರು. ಮಾತ್ರವಲ್ಲದೆ ಅಮಿತಾಬ್ ಬಚ್ಚನ್ ಸಹ ಬಂದಿದ್ದರು. ಐಶ್ವರ್ಯಾ ರೈ ಅವರ ತಾಯಿ ವೃಂದಾ ರೈ ಸಹ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಇದನ್ನೂ ಓದಿ:‘ವಾರ್ 2’ ಸೋತ ಬಳಿಕ ಮತ್ತೊಮ್ಮೆ ಬಾಲಿವುಡ್ ಕದ ತಟ್ಟಿದ ಜೂನಿಯರ್ ಎನ್ಟಿಆರ್?
ಕೆಲ ವರ್ಷಗಳ ಹಿಂದೆ ಐಶ್ವರ್ಯಾ ರೈ ಮಗಳು ಆರಾಧ್ಯ ಮತ್ತು ಶಾರುಖ್ ಖಾನ್ ಕಿರಿಯ ಪುತ್ರ ಅಬ್ರಾಮ್ ಒಟ್ಟಿಗೆ ಒಂದು ನಾಟಕದಲ್ಲಿ ನಟನೆ ಮಾಡಿದ್ದರು. ನಾಟಕದ ದೃಶ್ಯಗಳು ಆಗ ಸಖತ್ ವೈರಲ್ ಆಗಿದ್ದವು. ಆದರೆ ಈ ಬಾರಿ ಶಾಲೆಯ ವಾರ್ಷಿಕೋತ್ಸವದ ವೇದಿಕೆ ಕಾರ್ಯಕ್ರಮದ ದೃಶ್ಯಗಳು ಯಾವುದೂ ಸಹ ಹೊರಬಂದಿಲ್ಲ.
ಕಳೆದ ಕೆಲ ತಿಂಗಳುಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದೂರಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಐಶ್ವರ್ಯಾ ಮತ್ತು ಅಭಿಷೇಕ್ ಜೊತೆಯಾಗಿ ಕಾಣಿಸಿಕೊಂಡು ಆ ಸುದ್ದಿಗಳನ್ನು ಅಲ್ಲಗಳೆಯುತ್ತಲೇ ಇದ್ದಾರೆ. ಇತ್ತೀಚೆಗೆ ಸ್ವತಃ ಅಭಿಷೇಕ್ ಬಚ್ಚನ್, ಸಂದರ್ಶನವೊಂದರಲ್ಲಿ ಈ ಸದ್ದಿಯನ್ನು ತಳ್ಳಿ ಹಾಕಿದ್ದರು. ಅಲ್ಲದೆ, ‘ಪುತ್ರಿ ಆರಾಧ್ಯಗೆ, ತಮ್ಮ ಪೋಷಕರ ಬಗ್ಗೆ ಹೀಗೊಂದು ಸುದ್ದಿ ಹರಿದಾಡುತ್ತಿದೆ ಎಂಬುದು ಗೊತ್ತಿಲ್ಲ. ನಾವು ಆಕೆಗೆ ಫೋನ್ ಕೊಡಿಸಿಲ್ಲ. ಹಾಗಾಗಿ ಆಕೆಗೆ ಈ ರೀತಿಯ ಗಾಸಿಪ್ಗಳು ಗೊತ್ತಾಗುವುದಿಲ್ಲ. ಆಕೆಯ ಗೆಳಯರು ಸಹ ಐಶ್ವರ್ಯಾ ನಂಬರ್ಗೆ ಕರೆ ಮಾಡಿ, ಆರಾಧ್ಯ ಜೊತೆ ಮಾತನಾಡುತ್ತಾರೆ’ ಎಂದಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




