Cannes 2024: ಬ್ಯಾಂಡೇಜ್​ ಸುತ್ತಿಕೊಂಡೇ ರೆಡ್​ ಕಾರ್ಪೆಟ್​ ಮೇಲೆ ಮಿಂಚಿದ ಐಶ್ವರ್ಯಾ ರೈ ಬಚ್ಚನ್​

|

Updated on: May 16, 2024 | 10:59 PM

ಬಾಲಿವುಡ್​ ಬೆಡಗಿ ಐಶ್ವರ್ಯಾ ರೈ ಬಚ್ಚನ್​ ಅವರ ಕೈಗೆ ಪೆಟ್ಟಾಗಿದೆ. ಆದರೂ ಕೂಡ ಅವರು ಕಾನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗಿ ಆಗುವುದನ್ನು ತಪ್ಪಿಸಿಕೊಂಡಿಲ್ಲ. ಕೈಯಲ್ಲಿ ಬ್ಯಾಂಡೇಜ್​ ಇದ್ದರೂ ಸಹ ಅವರು ನಗು ನಗುತ್ತಲೇ ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ್ದಾರೆ. ಮಾಧ್ಯಮಗಳ ಕ್ಯಾಮೆರಾಗಳತ್ತ ನಗು ಚೆಲ್ಲಿದ್ದಾರೆ. ಅವರ ಫೋಟೋಗಳು ವೈರಲ್​ ಆಗಿವೆ.

Cannes 2024: ಬ್ಯಾಂಡೇಜ್​ ಸುತ್ತಿಕೊಂಡೇ ರೆಡ್​ ಕಾರ್ಪೆಟ್​ ಮೇಲೆ ಮಿಂಚಿದ ಐಶ್ವರ್ಯಾ ರೈ ಬಚ್ಚನ್​
ಐಶ್ವರ್ಯಾ ರೈ ಬಚ್ಚನ್
Follow us on

ನಟಿ ಐಶ್ವರ್ಯಾ ರೈ ಬಚ್ಚನ್​ (Aishwarya Rai Bachchan) ಅವರು ಸಿನಿಮಾ ಮಾತ್ರವಲ್ಲದೇ ಮಾಡೆಲಿಂಗ್​ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಜಾಗತಿಕ ಮಟ್ಟದ ಸೌಂದರ್ಯ ವರ್ಧಕ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿರುವ ಅವರು ಹಲವು ವರ್ಷಗಳಿಂದ ಕಾನ್​ ಚಿತ್ರೋತ್ಸವದ (Cannes Film Festival 2024) ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ. ಈ ಬಾರಿ ಕೂಡ ಅವರು ರೆಡ್​ ಕಾರ್ಪೆಟ್​ನಲ್ಲಿ ಮಿಂಚಿದ್ದಾರೆ. ಅಚ್ಚರಿ ಏನೆಂದರೆ, ಕೈಗೆ ಬ್ಯಾಂಡೇಜ್​ ಸುತ್ತಿಕೊಂಡೇ ಅವರು ರೆಡ್​ ಕಾರ್ಪೆಟ್​ನಲ್ಲಿ (Cannes Red Carpet) ನಡೆದು ಬಂದಿದ್ದಾರೆ. ಅವರ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿವೆ. ಅವರ ಆತ್ಮವಿಶ್ವಾಸಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.

ಬುಧವಾರ (ಮೇ 15) ರಾತ್ರಿ ಐಶ್ವರ್ಯಾ ರೈ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅವರ ಕೈಗೆ ಗಾಯ ಆಗಿದ್ದನ್ನು ನೋಡಿ ಅಭಿಮಾನಿಗಳಿಗೆ ಬೇಸರ ಆಗಿತ್ತು. ಕೈಗೆ ಪೆಟ್ಟಾಗಿರುವುದರಿಂದ ಈ ಬಾರಿ ಅವರು ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕುವುದು ಅನುಮಾನ ಎಂದು ಅನೇಕರು ಭಾವಿಸಿದ್ದರು. ಆದರೆ ಐಶ್ವರ್ಯಾ ರೈ ಅವರು ತಮ್ಮ ಬದ್ಧತೆ ತೋರಿಸಿದ್ದಾರೆ.

ಕೈಗೆ ಪೆಟ್ಟಾಗಿದೆ ಎಂಬ ನೆಪ ಹೇಳದೇ ಐಶ್ವರ್ಯಾ ರೈ ಅವರು ಕಾನ್​ ಫಿಲ್ಮ್ ಫೆಸ್ಟಿವಲ್​ನಲ್ಲಿ ಭಾಗಿ ಆಗಿದ್ದಾರೆ. ಕಪ್ಪು, ಬಿಳಿ ಮತ್ತು ಗೋಲ್ಡನ್​ ಬಣ್ಣಗಳಿಂದ ವಿನ್ಯಾಸಗೊಂಡ ಗೌನ್​ ಧರಿಸಿ ಅವರು ಮಿಂಚಿದ್ದಾರೆ. ಬಲಗೈನಲ್ಲಿ ಬ್ಯಾಂಡೇಜ್​ ಇದ್ದರೂ ಕೂಡ ಅವರು ಆ ಬಗ್ಗೆ ಹೆಚ್ಚು ಗಮನ ನೀಡಿಲ್ಲ. ಮೊದಲೇ ಒಪ್ಪಿಕೊಂಡ ಈ ಕೆಲಸವನ್ನು ಅವರು ಎಂದಿನ ಉತ್ಸಾಹದಲ್ಲಿ ಮಾಡಿ ಮುಗಿಸಿದ್ದಾರೆ. ಅವರ ಫೋಟೋಗಳಿಗೆ ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ರಜನಿಕಾಂತ್​ಗೆ ಐಶ್ವರ್ಯಾ ರೈ ಜೋಡಿ ಎಂದಾಗ ಕಕ್ಕಾಬಿಕ್ಕಿ ಆಗಿದ್ದ ರಾಜಸ್ಥಾನಿ ವ್ಯಕ್ತಿ

ಐಶ್ವರ್ಯಾ ರೈ ಬಚ್ಚನ್​ ಅವರಿಗೆ ಕಾನ್​ ಚಿತ್ರೋತ್ಸವ ಹೊಸದೇನೂ ಅಲ್ಲ. 2002ರಲ್ಲಿ ಅವರು ಮೊದಲ ಬಾರಿಗೆ ಕಾನ್ ಚಿತ್ರೋತ್ಸವದ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದರು. ಅಂದಿನಿಂದ ಇಂದಿನ ತನಕ ಅವರು ಪ್ರತಿ ವರ್ಷವೂ ಅಲ್ಲಿಗೆ ತೆರಳಿ ತಮ್ಮ ಹಾಜರಿ ಹಾಕಿದ್ದಾರೆ. ಈವರೆಗೂ 21 ಬಾರಿ ಅವರು ಕಾನ್​ ಫಿಲ್ಮ್​ ಫೆಸ್ಟಿವಲ್​ನ ರೆಡ್​ ಕಾರ್ಪೆಟ್​ನಲ್ಲಿ ವಾಕ್​ ಮಾಡಿದ್ದಾರೆ. ಈ ಬಾರಿ ಕೈಗೆ ಪೆಟ್ಟಾಗಿದ್ದನ್ನು ಕೂಡ ಅವರು ಲೆಕ್ಕಿಸದೇ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿ ನಗುಮುಖದಿಂದ ಪೋಸ್​ ನೀಡಿದ್ದಾರೆ.​

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.