ಐಶ್ವರ್ಯಾ ರೈಗೆ ಆರೋಗ್ಯ ಸಮಸ್ಯೆ? ಮೂಡಿದೆ ಚರ್ಚೆ
ಇತ್ತೀಚೆಗಷ್ಟೇ ‘ಪ್ಯಾರಿಸ್ ಫ್ಯಾಶನ್ ವೀಕ್’ನಲ್ಲಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಅವರ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮತ್ತೊಮ್ಮೆ ಅವರ ತೂಕವನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.
‘ವಿಶ್ವ ಸುಂದರಿ’ ಪಟ್ಟ ಗೆದ್ದಿರುವ ಐಶ್ವರ್ಯಾ ರೈ ತಮ್ಮ ಸೌಂದರ್ಯದ ವಿಚಾರಕ್ಕಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಕೆಲವು ತಿಂಗಳುಗಳಿಂದ ಐಶ್ವರ್ಯಾ ಅವರ ವೈಯಕ್ತಿಕ ಜೀವನ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗಿದೆ. ಬಚ್ಚನ್ ಕುಟುಂಬ ಮತ್ತು ಅಭಿಷೇಕ್ ಕಾರಣದಿಂದ ಐಶ್ವರ್ಯಾ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂದು ವರದಿ ಆಗಿದೆ. ಈಗ ಐಶ್ವರ್ಯಾ ಲುಕ್ನ ಟ್ರೋಲ್ ಮಾಡಲಾಗುತ್ತಿದೆ.
ಐಶ್ವರ್ಯಾ ಅವರ ತೂಕ ಹೆಚ್ಚಾಗಿರೋದು ಮತ್ತು ವಿಚಿತ್ರವಾದ ಫ್ಯಾಷನ್‌ಗಾಗಿ ನೆಟ್ಟಿಗರು ಆಗಾಗ ಅವರನ್ನು ಟ್ರೋಲ್ ಮಾಡುತ್ತಾರೆ. ಇತ್ತೀಚೆಗಷ್ಟೇ ‘ಪ್ಯಾರಿಸ್ ಫ್ಯಾಶನ್ ವೀಕ್’ನಲ್ಲಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಅವರ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮತ್ತೊಮ್ಮೆ ಅವರ ತೂಕವನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.
ಐಶ್ವರ್ಯಾ ಡಯಟ್ ಮಾಡಬೇಕು, ಜಿಮ್‌ಗೆ ಹೋಗಬೇಕು ಎಂದು ಕೆಲವರು ಸಲಹೆ ನೀಡಲಾರಂಭಿಸಿದರು. ಈ ಟ್ರೋಲ್ ಬಗ್ಗೆ ಐಶ್ವರ್ಯಾ ಯಾವತ್ತೂ ಪ್ರತಿಕ್ರಿಯಿಸಿಲ್ಲ. ಆದರೆ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಐಶ್ವರ್ಯಾ ರೈ ಬಗ್ಗೆ ಕೆಲವರು ಆತಂಕಾರಿ ಹೇಳಿಕೆ ನೀಡಿದ್ದಾರೆ. ಐಶ್ವರ್ಯಾಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂದು ಪೋಸ್ಟ್ ಹೇಳಿಕೊಂಡಿದೆ.
‘ಬಾಡಿಶೇಮ್ ಬೇಡ’ ಎಂದು ಪೋಸ್ಟ್ ಬರೆದಿದ್ದು, ‘ನನ್ನ ಸ್ನೇಹಿತೆ ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಾರೆ. ಕಳೆದ ಕೆಲವು ವರ್ಷಗಳಿಂದ ಐಶ್ವರ್ಯಾ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ನನಗೆ ಹೇಳಿದ್ದಾರೆ. ಅದರ ಮಾಹಿತಿಯನ್ನು ನಾನು ಇಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಈ ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಇತರ ಬಾಲಿವುಡ್ ಸೆಲೆಬ್ರಿಟಿಗಳಂತೆ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಲು ಅಥವಾ ತೂಕ ಇಳಿಸುವ ಔಷಧಿಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಬರೆಯಲಾಗಿದೆ.
ಇದನ್ನೂ ಓದಿ: ವೇದಿಕೆ ಮೇಲೆ ಮಣಿರತ್ನಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಐಶ್ವರ್ಯಾ
‘ಅವರ ಸ್ಟೈಲಿಸ್ಟ್‌ಗಳು ತಪ್ಪಿಲ್ಲ. ಅವರಿಗೆ ಏನು ಇಷ್ಟವೋ ಅದನ್ನು ಧರಿಸುತ್ತಾರೆ. ಇದದಕ್ಕಾಗಿಯೇ ಅವರು ಆಗಾಗ್ಗೆ ವಿಚಿತ್ರವಾದ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ತಮ್ಮ ದೇಹವನ್ನು ಸಾಧ್ಯವಾದಷ್ಟು ಬಟ್ಟೆಯಲ್ಲಿ ಮರೆಮಾಡಲು ಬಯಸುತ್ತಾರೆ. ಜನರ ಗಮನ ತಮ್ಮ ಮೇಲೆ ಕೇಂದ್ರೀಕೃತವಾಗದಂತೆ ಈ ರೀತಿ ಮಾಡುತ್ತಿದ್ದಾರೆ. ಅವರು ಈಗ ತೋಳಿಲ್ಲದ ಉಡುಪುಗಳನ್ನು ಧರಿಸಲು ನಾಚಿಕೆಪಡುತ್ತಾರೆ’ ಎಂದು ಬರೆಯಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.