ಇವರು ಭಾರತದ ಅತ್ಯಂತ ಶ್ರೀಮಂತ ನಟಿ; ಈ ಹೀರೋಯಿನ್​ನ ಆಸ್ತಿ ಎಷ್ಟು?

| Updated By: ರಾಜೇಶ್ ದುಗ್ಗುಮನೆ

Updated on: Jun 04, 2024 | 9:44 AM

ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕರೀನಾ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ಭಾರತದ ಟಾಪ್ ನಟಿಯರಾಗಿದ್ದಾರೆ. ಒಂದು ಸಿನಿಮಾಗೆ ಕೋಟ್ಯಂತರ ರೂಪಾಯಿ ಚಾರ್ಜ್ ಮಾಡುತ್ತಾರೆ. ನಯನತಾರಾ ಶ್ರೀಮಂತ ನಟಿಯರಲ್ಲಿ ಒಬ್ಬರು. ಆದರೆ ಇವರೆಲ್ಲ ಶ್ರೀಮಂತ ನಟಿಯರಲ್ಲ. ಸದ್ಯ ಸುದ್ದಿಯಲ್ಲಿರುವ ಈ ನಟಿ ಕೊನೆಯ ಬಾರಿಗೆ ಸೋಲೋ ಹಿಟ್ ನೀಡಿದ್ದು 2010ರಲ್ಲಿ.

ಇವರು ಭಾರತದ ಅತ್ಯಂತ ಶ್ರೀಮಂತ ನಟಿ; ಈ ಹೀರೋಯಿನ್​ನ ಆಸ್ತಿ ಎಷ್ಟು?
ಇವರು ಭಾರತದ ಅತ್ಯಂತ ಶ್ರೀಮಂತ ನಟಿ; ಈ ಹೀರೋಯಿನ್​ನ ಆಸ್ತಿ ಎಷ್ಟು?
Follow us on

ಅಭಿಮಾನಿಗಳು ಯಾವಾಗಲೂ ನಟಿಯರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಾರೆ. ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್ (Alia Bhatt), ಕತ್ರಿನಾ ಕೈಫ್ ಮೊದಲಾದ ನಟಿಯರು ಬಾಲಿವುಡ್ ಅನ್ನು ಆಳುತ್ತಿದ್ದಾರೆ. ಸೌತ್ ಸಿನಿಮಾದಲ್ಲಿ ನಯನತಾರಾ, ಸಮಂತಾ ರುತ್ ಪ್ರಭು, ರಶ್ಮಿಕಾ ಮೊದಲಾದವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಆಲಿಯಾ ಬಾಲಿವುಡ್‌ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಈ ಎಲ್ಲಾ ನಟಿಯರ ನಡುವೆ ಕಳೆದ ಕೆಲವು ವರ್ಷಗಳಿಂದ ನಟನಾ ಕ್ಷೇತ್ರದಲ್ಲಿ ಅಷ್ಟಾಗಿ ಸಕ್ರಿಯವಾಗಿಲ್ಲದ ಓರ್ವ ನಟಿ ಇದ್ದಾರೆ. 14 ವರ್ಷಗಳಲ್ಲಿ ಹೀರೋಯಿನ್ ಆಗಿ ಮಿಂಚಿಲ್ಲ. ಆದರೂ ಅವರು ಭಾರತದ ಶ್ರೀಮಂತ ನಟಿ.

ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕರೀನಾ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ಭಾರತದ ಟಾಪ್ ನಟಿಯರಾಗಿದ್ದಾರೆ. ಒಂದು ಸಿನಿಮಾಗೆ ಕೋಟ್ಯಂತರ ರೂಪಾಯಿ ಚಾರ್ಜ್ ಮಾಡುತ್ತಾರೆ. ನಯನತಾರಾ ಶ್ರೀಮಂತ ನಟಿಯರಲ್ಲಿ ಒಬ್ಬರು. ಆದರೆ ಇವರೆಲ್ಲ ಶ್ರೀಮಂತ ನಟಿಯರಲ್ಲ. ಸದ್ಯ ಸುದ್ದಿಯಲ್ಲಿರುವ ಈ ನಟಿ ಕೊನೆಯ ಬಾರಿಗೆ ಸೋಲೋ ಹಿಟ್ ನೀಡಿದ್ದು 2010ರಲ್ಲಿ. ಆದರೆ ಸಂಪತ್ತಿನ ವಿಷಯದಲ್ಲಿ ಅವರು ಭಾರತದ ಟಾಪ್ ನಟಿಯರಿಗಿಂತ ಮುಂದಿದ್ದಾರೆ. ಈ ನಟಿ ಕಳೆದ 14 ವರ್ಷಗಳಲ್ಲಿ ಒಂದೇ ಒಂದು ಸೋಲೋ ಹಿಟ್ ಸಿನಿಮಾ ನೀಡಿಲ್ಲ. ಇವರು 2000ರ ದಶಕದ ಮಧ್ಯಭಾಗದಿಂದ ಭಾರತದ ಶ್ರೀಮಂತ ನಟಿಯಾಗಿದ್ದಾರೆ. ಈ ನಟಿ ಬೇರೆ ಯಾರೂ ಅಲ್ಲ ನಟಿ ಐಶ್ವರ್ಯಾ ರೈ. ಮಾಧ್ಯಮ ವರದಿಗಳ ಪ್ರಕಾರ, ನಟಿಯ ನಿವ್ವಳ ಆಸ್ತಿ ಮೌಲ್ಯ 776 ಕೋಟಿ ರೂ.

ಐಶ್ವರ್ಯಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಬಾಲಿವುಡ್‌ಗೆ ಅನೇಕ ಹಿಟ್ ಚಲನಚಿತ್ರಗಳನ್ನು ನೀಡಿದರು. ನಟಿ ತನ್ನ ಸೌಂದರ್ಯದಿಂದ ತಮ್ಮ ಅಭಿಮಾನಿಗಳನ್ನು ಸೆಳೆದಿದ್ದಾರೆ. ಐಶ್ವರ್ಯಾ ಕೂಡ ಹಲವು ಜಾಹೀರಾತುಗಳಿಂದ ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಇದಲ್ಲದೆ, ನಟಿ ಅನೇಕ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದರಿಂದ ಐಶ್ವರ್ಯಾ ಸಿನಿಮಾದಲ್ಲಿ ನಟಿಸದೇ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾರೆ.

ಇದನ್ನೂ ಓದಿ: IMDb ಟಾಪ್​ 100 ಸೆಲೆಬ್ರಿಟಿಗಳಲ್ಲಿ ನಂಬರ್​ 1 ಸ್ಥಾನ ಪಡೆದ ದೀಪಿಕಾ ಪಡುಕೋಣೆ

ಐಶ್ವರ್ಯಾ ನಂತರ ನಟಿ ಪ್ರಿಯಾಂಕಾ ಚೋಪ್ರಾ ಶ್ರೀಮಂತ ನಟಿ. ಮಾಧ್ಯಮ ವರದಿಗಳ ಪ್ರಕಾರ, ಪ್ರಿಯಾಂಕಾ ಅವರ ಒಟ್ಟೂ ಆಸ್ರಿ ಮೌಲ್ಯ 600 ಕೋಟಿ ರೂಪಾಯಿ. ದೀಪಿಕಾ ಪಡುಕೋಣೆ ಮೂರನೇ ಸ್ಥಾನದಲ್ಲಿದ್ದಾರೆ. ದೀಪಿಕಾ ಅವರ ಆಸ್ತಿ 550 ಕೋಟಿ ರೂ. ಆಲಿಯಾ ಮೂರನೇ ಸ್ಥಾನದಲ್ಲಿದ್ದಾರೆ. ಆಲಿಯಾ 500 ಕೋಟಿ ಆಸ್ತಿ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.