ಮತ ಎಣಿಕೆಯಿಂದ ಜಾನ್ವಿ ಕಪೂರ್ ಸಿನಿಮಾಗೆ ಪೆಟ್ಟು? ಬಾಕ್ಸ್ ಆಫೀಸ್ನಲ್ಲಿ ತಳಮಳ
‘ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ’ ಸಿನಿಮಾದಲ್ಲಿ ಕ್ರಿಕೆಟ್ ಕುರಿತ ಕಥೆ ಇದೆ. ಈ ಚಿತ್ರಕ್ಕಾಗಿ ನಟಿ ಜಾನ್ವಿ ಕಪೂರ್ ಅವರು ಸಾಕಷ್ಟು ತಯಾರಿ ನಡೆಸಿದ್ದರು. ಪ್ರಚಾರಕ್ಕಾಗಿ ಅವರು ತುಂಬ ಶ್ರಮವಹಿಸಿದ್ದರು. ಜಾನ್ವಿ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬರುವ ವೀಕೆಂಡ್ನಲ್ಲಾದರೂ ಸಿನಿಮಾದ ಕಲೆಕ್ಷನ್ ಹೆಚ್ಚಾಗುತ್ತಾ ಎಂಬುದನ್ನು ಕಾದುನೋಡಬೇಕು.
ಲೋಕಸಭಾ ಚುನಾವಣೆಯ ಮತ ಎಣಿಕೆ ಇಂದು (ಜೂನ್ 4) ನಡೆದಿದೆ. ಚುನಾವಣಾ ಫಲಿತಾಂಶದ (Lok Sabha Election Result) ಕಡೆಗೆ ಎಲ್ಲರ ಕಣ್ಣು ಇದೆ. ಹಾಗಾಗಿ ಸಿನಿಮಾಗಳ ಬಗ್ಗೆ ಗಮನ ಕೊಡುವವರ ಸಂಖ್ಯೆ ಕಡಿಮೆ. ದೇಶಾದ್ಯಂತ ರಾಜಕೀಯದ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಮುಂದಿನ ಸರ್ಕಾರದಲ್ಲಿ ಯಾರಿಗೆ ಯಾವ ಸ್ಥಾನ ಸಿಗಲಿದೆ ಎಂಬ ಬಗ್ಗೆ ಮಾತುಕಥೆ, ಕುತೂಹಲ ಜೋರಾಗಿದೆ. ಇದರಿಂದಾಗಿ ಜೂನ್ 4ರಂದು ಜಾನ್ವಿ ಕಪೂರ್ (Janhvi Kapoor) ಅವರ ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪೆಟ್ಟು ಬಿದ್ದಿರುವ ಸಾಧ್ಯತೆ ಇದೆ. ಗಲ್ಲಾಪೆಟ್ಟಿಗೆಯಲ್ಲಿ ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ’ (Mr and Mrs Mahi) ಸಿನಿಮಾ ಈತನಕ ಮಾಡಿದ ಕಲೆಕ್ಷನ್ ಬಗ್ಗೆ ಇಲ್ಲಿದೆ ಮಾಹಿತಿ..
ಮೇ 31ರಂದು ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ’ ಸಿನಿಮಾ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಮತ್ತು ರಾಜ್ಕುಮಾರ್ ರಾವ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಮೊದಲ ದಿನ 6.85 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನವಾದ ಜೂನ್ 1ರಂದು 4.65 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಮೂರನೇ ದಿನ 5.62 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ 2.21 ಕೋಟಿ ರೂಪಾಯಿ ಗಳಿಸಿತು.
ನಾಲ್ಕನೇ ದಿನ ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ’ ಸಿನಿಮಾದ ಕಲೆಕ್ಷನ್ ಕುಸಿತ ಕಂಡಿತು. 5ನೇ ದಿನ ಚೇತರಿಕೆ ಕಾಣಬಹುದಾ ಎಂದರೆ ಯಾಕೋ ಅನುಮಾನ ಎನ್ನುತ್ತಿವೆ ಬಾಕ್ಸ್ ಆಫೀಸ್ ಮೂಲಗಳು. ಐದನೇ ದಿನವಾದ ಜೂನ್ 4ರಂದು ಮತ ಎಣಿಕೆಯ ಕಾವು ಜೋರಾಗಿದೆ. ಎಲ್ಲರೂ ಟಿವಿ ಮುಂದೆ ಕುಳಿತು ಎಲೆಕ್ಷನ್ ರಿಸಲ್ಟ್ ವೀಕ್ಷಿಸುತ್ತಿದ್ದಾರೆ. ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕಿದವರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ’ ಸಿನಿಮಾದ ಕಲೆಕ್ಷನ್ 2 ಕೋಟಿ ರೂಪಾಯಿಗಿಂತಲೂ ಕಡಿಮೆ ಆಗಿರುವ ಸಾಧ್ಯತೆ ದಟ್ಟವಾಗಿದೆ. 5 ದಿನಗಳ ಒಟ್ಟು ಕಲೆಕ್ಷನ್ 20 ಕೋಟಿ ರೂಪಾಯಿ ಮೀರಲಿದೆ.
ಇದನ್ನೂ ಓದಿ: ‘ಚಿಕ್ಕವಳಿದ್ದಾಗಲೇ ಅಶ್ಲೀಲ ವೆಬ್ಸೈಟ್ಗೆ ನನ್ನ ಫೋಟೋ ಹಾಕಿದ್ರು’: ಜಾನ್ವಿ ಕಪೂರ್ ಬೇಸರ
‘ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ’ ಸಿನಿಮಾದಲ್ಲಿ ಕ್ರಿಕೆಟ್ ಕುರಿತಾದ ಕಥೆ ಇದೆ. ಈ ಸಿನಿಮಾಗಾಗಿ ಜಾನ್ವಿ ಕಪೂರ್ ಅವರು ಸಾಕಷ್ಟು ತಯಾರಿ ನಡೆಸಿದ್ದರು. ಪ್ರಚಾರಕ್ಕಾಗಿ ಅವರು ತುಂಬ ಶ್ರಮವಹಿಸಿದ್ದರು. ಸಿನಿಮಾದಲ್ಲಿನ ಅವರ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮುಂದಿನ ವೀಕೆಂಡ್ನಲ್ಲಾದರೂ ಸಿನಿಮಾದ ಕಲೆಕ್ಷನ್ ಹೆಚ್ಚಾಗುತ್ತಾ ಎಂಬುದನ್ನು ಕಾದುನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.