Ajay Devgn: ಪ್ರೇಕ್ಷಕರನ್ನು ಹೆದರಿಸಲು ಸಜ್ಜಾಗುತ್ತಿರುವ ನಟ ಅಜಯ್​ ದೇವಗನ್​; ‘ಭೋಲಾ’ ಸೋಲಿನ ಬಳಿಕ ಈ ನಿರ್ಧಾರ

Ajay Devgn Horror Movie: ಬಾಲಿವುಡ್​ನ ಖ್ಯಾತ ನಿರ್ದೇಶಕ ವಿಕಾಸ್​ ಬಹ್ಲ್​ ಅವರು ಈ ಹಾರರ್​ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಜೂನ್​ ತಿಂಗಳಲ್ಲಿ ಈ ಚಿತ್ರದ ಶೂಟಿಂಗ್​ ಆರಂಭ ಆಗಲಿದೆ.

Ajay Devgn: ಪ್ರೇಕ್ಷಕರನ್ನು ಹೆದರಿಸಲು ಸಜ್ಜಾಗುತ್ತಿರುವ ನಟ ಅಜಯ್​ ದೇವಗನ್​; ‘ಭೋಲಾ’ ಸೋಲಿನ ಬಳಿಕ ಈ ನಿರ್ಧಾರ
ಅಜಯ್ ದೇವಗನ್

Updated on: May 13, 2023 | 10:28 AM

ನಟ ಅಜಯ್​ ದೇವಗನ್​ (Ajay Devgn) ಅವರು ಬಾಲಿವುಡ್​ನಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಹಲವು ರೀತಿಯ ಸಿನಿಮಾಗಳನ್ನು ಮಾಡುತ್ತ ಅವರು ಮುನ್ನುಗ್ಗುತ್ತಿದ್ದಾರೆ. ಈ ವರ್ಷ ಅವರು ನಟಿಸಿದ ‘ಭೋಲಾ’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಅಂದುಕೊಂಡ ರೀತಿಯಲ್ಲಿ ಆ ಸಿನಿಮಾ ಗೆಲ್ಲಲಿಲ್ಲ. ಸ್ವತಃ ಅಜಯ್​ ದೇವಗನ್​ ಅವರೇ ನಿರ್ದೇಶನ, ನಿರ್ಮಾಣ ಮಾಡಿದ್ದ ‘ಭೋಲಾ’ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಆಗಲಿಲ್ಲ. ಈಗ ಅವರು ‘ಮೈದಾನ್​’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಆ ಚಿತ್ರದ ಭವಿಷ್ಯ ಏನಾಗುತ್ತದೋ ಗೊತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಾದರೂ ಗೆಲ್ಲಬೇಕು ಎಂಬ ಕಾರಣಕ್ಕೆ ಅಜಯ್​ ದೇವಗನ್ ಅವರು ಒಂದು ಹೊಸ ನಿರ್ಧಾರ ತೆಗೆದುಕೊಂಡಿದ್ದಾರೆ. ಹಾರರ್​ ಸಿನಿಮಾ (Horror Movie) ಮಾಡಲು ಅವರು ಮುಂದಾಗಿದ್ದಾರೆ.

2022ರಲ್ಲಿ ‘ದೃಶ್ಯಂ 2’ ಸಿನಿಮಾ ಮೂಲಕ ಅಜಯ್​ ದೇವಗನ್​ ಅವರು ಗೆಲುವು ಕಂಡರು. ಆ ಸಿನಿಮಾಗೆ ಬಂಡವಾಳ ಹೂಡಿದ್ದ ‘ಪನೋರನಾ ಸ್ಟುಡಿಯೋಸ್​’ ಜೊತೆಗೆ ಈಗ ಅಜಯ್​ ದೇವಗನ್​ ಅವರು ಮತ್ತೆ ಕೈ ಜೋಡಿಸುತ್ತಿದ್ದಾರೆ. ಅವರು ನಟಿಸಲಿರುವ ಹಾರರ್​ ಚಿತ್ರಕ್ಕೆ ‘ಪನೋರಮಾ ಸ್ಟುಡಿಯೋಸ್​’ ಬಂಡವಾಳ ಹೂಡಲಿದೆ. ಸ್ವತಃ ಅಜಯ್​ ದೇವಗನ್​ ಕೂಡ ನಿಮಾಣದಲ್ಲಿ ಪಾಲುದಾರಿಕೆ ಹೊಂದಿರಲಿದ್ದಾರೆ.

ಇದನ್ನೂ ಓದಿ: Bholaa Collection: ಅಜಯ್​ ದೇವಗನ್​ ನಟನೆಯ ‘ಭೋಲಾ’ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು?

ಬಾಲಿವುಡ್​ನ ಖ್ಯಾತ ನಿರ್ದೇಶಕ ವಿಕಾಸ್​ ಬಹ್ಲ್​ ಅವರು ಈ ಹಾರರ್​ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಜೂನ್​ ತಿಂಗಳಲ್ಲಿ ಈ ಚಿತ್ರದ ಶೂಟಿಂಗ್​ ಆರಂಭ ಆಗಲಿದೆ. ಮುಂಬೈ ಮತ್ತು ವಿದೇಶದ ಕೆಲವು ಲೊಕೇಷನ್​ಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ವರದಿ ಆಗಿದೆ. ಸದ್ಯಕ್ಕೆ ಈ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ಚಾಲ್ತಿಯಲ್ಲಿವೆ. ಶೀಘ್ರದಲ್ಲೇ ನಿರ್ಮಾಪಕರು ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: Ajay Devgn: ಪ್ರೀತಿಯಿಂದ ಕೈ ಮುಟ್ಟಲು ಬಂದ ಅಭಿಮಾನಿ; ಸಿಟ್ಟಾದ ಅಜಯ್​ ದೇವಗನ್​ ಮಾಡಿದ್ದೇನು?

ಅಜಯ್​ ದೇವಗನ್​ ಅವರು ಮಾಸ್​ ಸಿನಿಮಾಗಳಿಂದ ಗುರುತಿಸಿಕೊಂಡಿದ್ದೇ ಹೆಚ್ಚು. ಪೊಲೀಸ್​ ಪಾತ್ರಗಳಲ್ಲೂ ಅವರು ಮಿಂಚಿದ್ದಾರೆ. ಸಾಮಾನ್ಯವಾಗಿ ಮಾಸ್​​ ಹೀರೋಗಳು ಹಾರರ್​ ಸಿನಿಮಾ ಎಂದರೆ ಹಿಂದೇಟು ಹಾಕುತ್ತಾರೆ. ಆದರೂ ಕೂಡ ಅಜಯ್​ ದೇವಗನ್​ ಅವರು ಹಾರರ್​ ಸಿನಿಮಾ ಮಾಡಲು ಮುಂದಾಗಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: Bholaa: ‘ನೀವು ಪದೇಪದೇ ಟಬು ಜತೆ ಸಿನಿಮಾ ಮಾಡೋದು ಯಾಕೆ?’: ನೇರ ಪ್ರಶ್ನೆಗೆ ಅಜಯ್​ ದೇವಗನ್​ ಉತ್ತರ

ಒಟಿಟಿಯಲ್ಲಿ ‘ಭೋಲಾ’ ಸಿನಿಮಾ:

ಮಾರ್ಚ್​ 30ರಂದು ರಿಲೀಸ್​ ಆಗಿದ್ದ ‘ಭೋಲಾ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಲಿಲ್ಲ. ಹಾಗಾಗಿ ಒಟಿಟಿ ಮೂಲಕ ಹಣ ಮಾಡಲು ಪ್ರಯತ್ನಿಸಲಾಗುತ್ತಿದೆ. ‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿ ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಆದರೆ ಈ ಒಟಿಟಿಗೆ ಚಂದಾದಾರರಾಗಿರುವವರು ಕೂಡ ಈ ಸಿನಿಮಾ ನೋಡಬೇಕು ಎಂದರೆ 399 ರೂಪಾಯಿ ನೀಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us