Bholaa: ಚಿತ್ರಮಂದಿರದಲ್ಲಿ ದುಡ್ಡು ಮಾಡಲಾಗದೇ ಒಟಿಟಿಯಲ್ಲಿ ಹೊಸ ತಂತ್ರ ರೂಪಿಸಿದ ‘ಭೋಲಾ’ ಚಿತ್ರತಂಡ

Amazon Prime Video: ಮಾರ್ಚ್​ 30ರಂದು ರಿಲೀಸ್​ ಆಗಿದ್ದ ‘ಭೋಲಾ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಲಿಲ್ಲ. ಹಾಗಾಗಿ ಒಟಿಟಿ ಮೂಲಕ ಹಣ ಮಾಡಲು ಪ್ರಯತ್ನಿಸಲಾಗುತ್ತಿದೆ.

Bholaa: ಚಿತ್ರಮಂದಿರದಲ್ಲಿ ದುಡ್ಡು ಮಾಡಲಾಗದೇ ಒಟಿಟಿಯಲ್ಲಿ ಹೊಸ ತಂತ್ರ ರೂಪಿಸಿದ ‘ಭೋಲಾ’ ಚಿತ್ರತಂಡ
ಅಜಯ್ ದೇವಗನ್
Follow us
ಮದನ್​ ಕುಮಾರ್​
|

Updated on: May 11, 2023 | 11:14 AM

ನಟ ಅಜಯ್​ ದೇವಗನ್​ (Ajay Devgn) ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿಯೂ ಅವರು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ ಕೆಲವೊಮ್ಮೆ ಅವರ ಲೆಕ್ಕಾಚಾರ ತಪ್ಪಾಗುತ್ತದೆ. ಪಾತ್ರಗಳ ಆಯ್ಕೆಯಲ್ಲಿ ಅವರು ಕೂಡ ಎಡವಿದ್ದುಂಟು. ಅದಕ್ಕೆ ಲೇಟೆಸ್ಟ್​ ಉದಾಹರಣೆ ಎಂದರೆ ‘ಭೋಲಾ’ (Bholaa) ಸಿನಿಮಾ. ಈ ಚಿತ್ರಕ್ಕೆ ಸ್ವತಃ ಅಜಯ್​ ದೇವಗನ್​ ಅವರು ನಿರ್ದೇಶನ ಮಾಡಿದ್ದರು. ನಿರ್ಮಾಣದ ಜವಾಬ್ದಾರಿಯನ್ನೂ ನಿಭಾಯಿಸಿದ್ದರು. ಆದರೆ ಈ ಸಿನಿಮಾದಿಂದ ಅವರಿಗೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿಲ್ಲ. ಈಗ ‘ಭೋಲಾ’ ಸಿನಿಮಾ ಒಟಿಟಿಗೆ ಬಂದಿದೆ. ಅಮೇಜಾನ್​ ಪ್ರೈಂ ವಿಡಿಯೋ (Amazon Prime Video) ಮೂಲಕ ಈ ಚಿತ್ರ ಸ್ಟ್ರೀಮ್​ ಆಗುತ್ತಿದೆ. ಆದರೆ ಉಚಿತವಾಗಿ ಅಲ್ಲ!

ಸಾಮಾನ್ಯವಾಗಿ ಒಟಿಟಿ ಚಂದಾದಾರರಾಗಿರುವ ಗ್ರಾಹಕರಿಗೆ ಅದರಲ್ಲಿನ ಎಲ್ಲ ಸಿನಿಮಾಗಳನ್ನು ಉಚಿತವಾಗಿ ನೋಡುವ ಅವಕಾಶ ಸಿಗುತ್ತದೆ. ಆದರೆ ‘ಭೋಲಾ’ ತಂಡ ಬೇರೆ ದಾರಿ ಅನುಸರಿಸಿದೆ. ‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿ ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಆದರೆ ಈ ಒಟಿಟಿಗೆ ಚಂದಾದಾರರಾಗಿರುವವರು ಕೂಡ ‘ಭೋಲಾ’ ಸಿನಿಮಾ ನೋಡಬೇಕು ಎಂದರೆ 399 ರೂಪಾಯಿ ನೀಡಬೇಕು!

ಇದನ್ನೂ ಓದಿ: ಏಳು ತಿಂಗಳ ಬಳಿಕ ಒಟಿಟಿಗೆ ಬಂದ ಹೃತಿಕ್ ರೋಷನ್ ಸಿನಿಮಾ ತಲುಪಲಿದೆ 40 ಕೋಟಿ ಜನರಿಗೆ

ಇದನ್ನೂ ಓದಿ
Image
Bhool Bhulaiyaa 2: ಒಟಿಟಿಗೆ ಬರ್ತಿದೆ ‘ಭೂಲ್​ ಭುಲಯ್ಯ 2’; ಕಾರ್ತಿಕ್​ ಆರ್ಯನ್​ ಫ್ಯಾನ್ಸ್​ಗೆ ಸಿಹಿ ಸುದ್ದಿ​ ನೀಡಿದ ನೆಟ್​ಫ್ಲಿಕ್ಸ್​
Image
ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 200 ಕೋಟಿ ರೂಪಾಯಿ ಲಾಭ ಮಾಡಿದ ‘ವಿಕ್ರಮ್​’ ಸಿನಿಮಾ
Image
‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ
Image
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?

ಬಾಕ್ಸ್​ ಆಫೀಸ್​ನಲ್ಲಿ ‘ಭೋಲಾ’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲಿಲ್ಲ. ತಿಂಗಳುಗಟ್ಟಲೆ ಪ್ರದರ್ಶನ ಕಂಡರೂ ಈ ಸಿನಿಮಾ ಒಟ್ಟು ಗಳಿಸಿದ್ದು 82 ಕೋಟಿ ರೂಪಾಯಿ ಮಾತ್ರ. ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣ ಆಗಿದ್ದರಿಂದ ಬಾಕ್ಸ್​ ಆಫೀಸ್​ನಿಂದ ಬಂದ ಹಣದಿಂದ ಏನೇನೂ ಲಾಭ ಆಗಲಿಲ್ಲ. ಹಾಗಾಗಿ ಒಟಿಟಿ ಮೂಲಕ ಹಣ ಮಾಡಲು ‘ಭೋಲಾ’ ತಂಡ ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: The Kerala Story: ಒಟಿಟಿ ಪ್ರಾಬಲ್ಯ ಹೆಚ್ಚಿರುವಾಗ ಚಿತ್ರಮಂದಿರಗಳಲ್ಲಿ ‘ದಿ ಕೇರಳ ಸ್ಟೋರಿ’ ಬ್ಯಾನ್​ ಮಾಡಿದ್ದಕ್ಕೆ ಅರ್ಥವುಂಟೆ?

ಮಾರ್ಚ್​ 30ರಂದು ‘ಭೋಲಾ’ ಸಿನಿಮಾ ಬಿಡುಗಡೆ ಆಯಿತು. ಇದು ತಮಿಳಿನಲ್ಲಿ ಕಾರ್ತಿ ನಟಿಸಿದ್ದ ‘ಖೈದಿ’ ಸಿನಿಮಾದ ಹಿಂದಿ ರಿಮೇಕ್​. ಆದರೆ ಹಿಂದಿಯಲ್ಲಿ ಈ ಚಿತ್ರವನ್ನು ಅಜಯ್​ ದೇವಗನ್​ ಅವರು 3ಡಿ ಅವತರಣಿಕೆಯಲ್ಲಿ ರಿಲೀಸ್​ ಮಾಡಿದರು. ಹಾಗಿದ್ದರೂ ಕೂಡ ಪ್ರೇಕ್ಷಕರಿಂದ ‘ಭೋಲಾ’ ಸಿನಿಮಾಗೆ ಮೆಚ್ಚುಗೆ ಸಿಗಲಿಲ್ಲ. ಒಟಿಟಿ ಪ್ಲಾಟ್​ಫಾರ್ಮ್​ಗಳು ಪ್ರಬಲವಾಗಿರುವ ಈ ಕಾಲಘಟ್ಟದಲ್ಲಿ ರಿಮೇಕ್​ ಸಿನಿಮಾಗಳು ಹೆಚ್ಚು ಯಶಸ್ಸು ಕಾಣುತ್ತಿಲ್ಲ. ಹಾಗಾಗಿ ರಿಮೇಕ್​ ಎಂಬುದು ಕೂಡ ‘ಭೋಲಾ’ ಸೋಲಿಗೆ ಪ್ರಮುಖ ಕಾರಣ ಎನ್ನಬಹುದು. ಟಬು, ಸಂಜಯ್ ಮಿಶ್ರಾ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಭೋಲಾ’ ಬಿಡುಗಡೆ ಆದಾಗ ಕನ್ನಡದಲ್ಲಿ ‘ಗುರುದೇವ್​ ಹೊಯ್ಸಳ’ ಮತ್ತು ತೆಲುಗಿನಲ್ಲಿ ‘ದಸರಾ’ ಚಿತ್ರ ಬಿಡುಗಡೆ ಆಗಿ ಪೈಪೋಟಿ ನೀಡಿದ್ದವು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ