AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shershaah: ಅಮೇಜಾನ್​ ಪ್ರೈಂನಲ್ಲಿ ಹೊಸ ದಾಖಲೆ ಬರೆದ ಶೇರ್​ಷಾ; ಖುಷಿ ವಿಚಾರ ಹಂಚಿಕೊಂಡ ಸಿದ್ಧಾರ್ಥ್ ಮಲ್ಹೋತ್ರ

Amazon Prime: ಓಟಿಟಿಯಲ್ಲಿ ರಿಲೀಸ್ ಆಗಿದ್ದ ಶೇರ್​ಷಾ ಸಿನಿಮಾ ಅಮೇಜಾನ್​ ಪ್ರೈಂನಲ್ಲಿ ಹೊಸ ದಾಖಲೆ ಬರೆದಿದೆ. ಅಮೇಜಾನ್ ಪ್ರೈಂನಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ ಎಂಬ ಹೆಗ್ಗಳಿಕೆಗೆ ಶೇರ್​ಷಾ ಪಾತ್ರವಾಗಿದೆ.

Shershaah: ಅಮೇಜಾನ್​ ಪ್ರೈಂನಲ್ಲಿ ಹೊಸ ದಾಖಲೆ ಬರೆದ ಶೇರ್​ಷಾ; ಖುಷಿ ವಿಚಾರ ಹಂಚಿಕೊಂಡ ಸಿದ್ಧಾರ್ಥ್ ಮಲ್ಹೋತ್ರ
ಶೇರ್​ಷಾ ಸಿನಿಮಾ
TV9 Web
| Edited By: |

Updated on:Aug 31, 2021 | 7:19 PM

Share

ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ವಿಕ್ರಮ್ ಬಾತ್ರಾ (Vikram Batra) ಜೀವನ ಕತೆಯನ್ನಾಧರಿಸಿದ ‘ಶೇರ್​ಷಾ’ (Shershaah) ಸಿನಿಮಾಗೆ ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಓಟಿಟಿಯಲ್ಲಿ ರಿಲೀಸ್ ಆಗಿದ್ದ ಶೇರ್​ಷಾ ಸಿನಿಮಾ ಅಮೇಜಾನ್​ ಪ್ರೈಂನಲ್ಲಿ (Amazon Prime) ಹೊಸ ದಾಖಲೆ ಬರೆದಿದೆ. ಅಮೇಜಾನ್ ಪ್ರೈಂನಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ ಎಂಬ ಹೆಗ್ಗಳಿಕೆಗೆ ಶೇರ್​ಷಾ ಪಾತ್ರವಾಗಿದೆ. ಈ ಖುಷಿಯ ವಿಚಾರವನ್ನು ಈ ಸಿನಿಮಾದ ನಾಯಕ ಸಿದ್ಧಾರ್ಥ್​ ಮಲ್ಹೋತ್ರ (Sidharth Malhotra) ಹಂಚಿಕೊಂಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆ. 12ರಂದು ರಿಲೀಸ್ ಆಗಿದ್ದ ‘ಶೇರ್​ಷಾ‘ ಸಿನಿಮಾದ ಟ್ರೈಲರ್​ಗೆ ಆರಂಭಿಕವಾಗಿ ಸಅಕಷ್ಟು ನೆಗೆಟಿವ್ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕರಣ್ ಜೋಹರ್ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಕಮರ್ಷಿಯಲ್ ಅಂಶಗಳೇ ಹೆಚ್ಚಿವೆ ಎಂಬ ಟೀಕೆಯೂ ಕೇಳಿಬಂದಿತ್ತು. ಆದರೆ, ಸಿನಿಮಾ ಬಿಡುಗಡೆಯಾದ ನಂತರ ಬಹಳ ಉತ್ತಮ ವಿಮರ್ಶೆಗಳು ವ್ಯಕ್ತವಾಗಿತ್ತು. ವಿಕ್ರಮ್ ಬಾತ್ರಾ ಅವರ ಸಂಪೂರ್ಣ ಜೀವನದ ಕತೆಯನ್ನು ಕಟ್ಟಿಕೊಟ್ಟಿರುವ ಈ ಸಿನಿಮಾದಲ್ಲಿನ ವಿಕ್ರಮ್ ಬಾತ್ರಾ ಸಾಹಸ ಮತ್ತು ಪ್ರೇಮಕತೆ ಪ್ರೇಕ್ಷಕರ ಮನಮುಟ್ಟಿತ್ತು.

ಶೇರ್​ಷಾ ಸಿನಿಮಾದ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸಿನಿಮಾದ ನಾಯಕ ಸಿದ್ಧಾರ್ಥ್ ಮಲ್ಹೋತ್ರ, ನಿಮ್ಮಲ್ಲರ ಪ್ರೀತಿ, ಅಭಿಮಾನದಿಂದ ನನ್ನ ಮನಸು ತುಂಬಿ ಬಂದಿದೆ. ಶೇರ್​ಷಾ ಸಿನಿಮಾಗೆ ನಿಮ್ಮಿಂದ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿ ಬಹಳ ಖುಷಿಯಾಗಿದೆ. ಅಮೇಜಾನ್​ ಪ್ರೈಂನಲ್ಲಿ ಅತಿಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾವಾಗಿ ಶೇರ್​ಷಾ ಹೊರಹೊಮ್ಮಿದೆ. ಯೇ ದಿಲ್ ಮಾಂಗೆ ಮೋರ್ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಶೇರ್​ಷಾ ಸಿನಿಮಾವನ್ನು ಕರಣ್ ಜೋಹರ್ ಮಾಲೀಕತ್ವದ ಧರ್ಮ ಪ್ರೊಡಕ್ಷನ್ ನಿರ್ಮಿಸಿದ್ದು, ವಿಷ್ಣು ವರ್ಧನ್ ನಿರ್ದೇಶಿಸಿದ್ದರು. ಸಿದ್ಧಾರ್ಥ್ ಮಲ್ಹೋತ್ರ ವಿಕ್ರಮ್ ಬಾತ್ರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿಯಾರಾ ಅದ್ವಾನಿ ವಿಕ್ರಮ್ ಪ್ರೇಯಸಿ ಡಿಂಪಲ್ ಚೀಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಹಾಡುಗಳು ಕೂಡ ಬಹಳ ಫೇಮಸ್ ಆಗಿತ್ತು.

ಈ ಸಿನಿಮಾ ರಿಲೀಸ್ ಆದ ಬಳಿಕ ಶೇರ್​ಷಾ ನಾಯಕ-ನಾಯಕಿಯರಾದ ಸಿದ್ಧಾರ್ಥ್ ಮಲ್ಹೋತ್ರ ಮತ್ತು ಕಿಯಾರಾ ಅದ್ವಾನಿ ಒಟ್ಟಿಗೇ ಕಾಣಿಸಿಕೊಂಡು ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದರು. ಶೇರ್​ಷಾ ಸಿನಿಮಾದಲ್ಲಿ ಕೂಡ ಇವರಿಬ್ಬರ ಕೆಮಿಸ್ಟ್ರಿ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸಿದ್ಧಾರ್ಥ್ ಹಾಗೂ ಕಿಯಾರಾ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ. ಅಂದಹಾಗೆ, ಶೇರ್​ಷಾ ಸಿನಿಮಾದ ಯಶಸ್ಸಿನ ಬಳಿಕ ಸಿದ್ಧಾರ್ಥ್ ಮಲ್ಹೋತ್ರ ಅವರಿಗೆ ಸಿನಿಮಾಗಳ ಆಫರ್ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಅವರ ಸಂಭಾವನೆಯೂ ಹೆಚ್ಚಾಗಿದೆ. ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಸಿದ್ಧಾರ್ಥ್​ಗೆ ಯಾವ ಸಿನಿಮಾ ಕೂಡ ಹೇಳಿಕೊಳ್ಳವಂತಹ ಯಶಸ್ಸು ನೀಡಿರಲಿಲ್ಲ. ಆದರೆ, ಶೇರ್​ಷಾ ಸಿನಿಮಾದಿಂದ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಂತಾಗಿದೆ.

ಇದನ್ನೂ ಓದಿ: Vikram Batra: ಅಮರ ಪ್ರೇಮಕತೆ; ಕಾರ್ಗಿಲ್​ ಯುದ್ಧದಲ್ಲಿ ಹುತಾತ್ಮರಾದ ವಿಕ್ರಮ್ ಬಾತ್ರಾ ಲವ್ ಸ್ಟೋರಿ ಕೇಳಿದ್ರೆ ಕಳೆದೇ ಹೋಗ್ತೀರ!

‘ಶೇರ್​ಷಾ’ ಬೆನ್ನಲ್ಲೇ ಅಭಿಮಾನಿಗಳಿಗೆ ಸಿದ್ಧಾರ್ಥ್​-ಕರಣ್ ಕಡೆಯಿಂದ ಹೊಸ ನ್ಯೂಸ್​

(Vikram Batra life Story Shershaah is Amazon Prime’s most watched film Sidharth Malhotra and Kiara Advani celebrates record)

Published On - 7:18 pm, Tue, 31 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್