‘ನಾನು ಬೆಳಿಗ್ಗೆ ಬೇಗ ಏಳೋದೇ ಸಮಸ್ಯೆನಾ’; ಅಕ್ಷಯ್ ಕುಮಾರ್ ನೇರ ಪ್ರಶ್ನೆ
ಇತ್ತೀಚೆಗೆ ಅಕ್ಷಯ್ ಸಿನಿಮಾ ಸೋಲುತ್ತಿದೆ. ಈ ಕಾರಣಕ್ಕೆ ಅವರನ್ನು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಅಕ್ಷಯ್ ಮಾಡಿದ ಪ್ರತಿ ವಿಚಾರಕ್ಕೂ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕರಿಗೆ ಬೇಸರ ಇದೆ. ಸ್ವತಃ ಅಕ್ಷಯ್ ಕುಮಾರ್ಗೂ ಈ ಬಗ್ಗೆ ಬೇಸರ ಇದೆ. ಅವರು ಎಲ್ಲರ ಪ್ರಶ್ನೆಗೆ ನೇರವಾಗಿ ಉತ್ತರ ನೀಡಿದ್ದರು.
ಅಕ್ಷಯ್ ಕುಮಾರ್ ಅವರಿಗೆ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗುತ್ತಿಲ್ಲ. ಅವರು ಮಾಡಿದ ಚಿತ್ರಗಳೆಲ್ಲವೂ ಸೋಲು ಕಾಣುತ್ತಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಅವರ ಬಳಿಯೂ ಸಾಧ್ಯವಾಗಿಲ್ಲ. ವರ್ಷಕ್ಕೆ ನಾಲ್ಕು ಸಿನಿಮಾ ಮಾಡುತ್ತಿರುವುದಕ್ಕೇ ಚಿತ್ರಗಳ ಸೋಲುತ್ತಿವೆಯೇ ಎನ್ನುವ ಪ್ರಶ್ನೆ ಅವರಿಗೆ ಬಂದಿಲ್ಲ. ಅವರು ಈಗಲೂ ಅದೇ ಪದ್ಧತಿ ಮುಂದುವರಿಸಿಕೊಂಡು ಹೋಗಿದ್ದಾರೆ. ಈ ಮೊದಲು ಅಕ್ಷಯ್ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು.
ಇತ್ತೀಚೆಗೆ ಅಕ್ಷಯ್ ಸಿನಿಮಾ ಸೋಲುತ್ತಿದೆ. ಈ ಕಾರಣಕ್ಕೆ ಅವರನ್ನು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಅಕ್ಷಯ್ ಮಾಡಿದ ಪ್ರತಿ ವಿಚಾರಕ್ಕೂ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕರಿಗೆ ಬೇಸರ ಇದೆ. ಸ್ವತಃ ಅಕ್ಷಯ್ ಕುಮಾರ್ಗೂ ಈ ಬಗ್ಗೆ ಬೇಸರ ಇದೆ. ಅವರು ಎಲ್ಲರ ಪ್ರಶ್ನೆಗೆ ನೇರವಾಗಿ ಉತ್ತರ ನೀಡಿದ್ದರು.
‘ನಾನು ಕೆಲಸ ಮಾಡುತ್ತಿದ್ದೇನೆ, ಕಳ್ಳತನ ಮಾಡುತ್ತಿಲ್ಲ. ಅಷ್ಟು ಬೇಗ ಏಕೆ ಎದ್ದೇಳುತ್ತೀರೀ ಎಂದು ಕೇಳುತ್ತಾರೆ. ಬೆಳಿಗ್ಗೆ ಇರೋದೇ ಏಳೋಕೆ. ರಾತ್ರಿ ಅಷ್ಟು ಬೇಗೆ ಏಕೆ ನಿದ್ರಿಸುತ್ತೀರಿ ಎಂದು ಕೇಳುತ್ತಾರೆ. ರಾತ್ರಿ ಇರೋದೆ ನಿದ್ರಿಸೋಕೆ. ಏಕೇ ಇಷ್ಟು ಕೆಲಸ ಮಾಡುತ್ತೀರಿ ಎಂದು ಕೇಳುತ್ತಾರೆ’ ಎಂದು ಅವರು ಹೇಳಿದ್ದಾರೆ.
‘ನಾನು ಒಟ್ಟಿಗೆ ನಾಲ್ಕು ಸಿನಿಮಾ ಮಾಡುತ್ತೇನೆ. 50 ದಿನ ಬೇಕಿದ್ದರೆ 50 ದಿನ ಕೊಡುತ್ತೇನೆ. ನಾನು ಈ ಬಗ್ಗೆ ಎಂದಿಗೂ ಹೇಳಿಲ್ಲ. ಈಗ ಹೇಳುತ್ತಿದ್ದೇನೆ. ಇಷ್ಟೊಂದು ಕೆಲಸ ಮಾಡುತ್ತೇನೆ ಎಂದು ಏಕೆ ಎಲ್ಲರೂ ಕೇಳುತ್ತಾರೆ’ ಎಂದು ಪ್ರಶ್ನೆ ಮಾಡಿದ್ದಾರು ಅವರು.
View this post on Instagram
ಇದನ್ನೂ ಓದಿ: ‘ಭೂಲ್ ಭುಲಯ್ಯ 3’ ಚಿತ್ರದಲ್ಲಿ ಇರಲಿದೆ ಅಕ್ಷಯ್ ಕುಮಾರ್ ಅತಿಥಿ ಪಾತ್ರ?
ಅಕ್ಷಯ್ ಕುಮಾರ್ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’, ‘ಸರ್ಫಿರಾ’, ‘ಖೇಲ್ ಖೇಲ್ ಮೇ’ ಚಿತ್ರಗಳು ರಿಲೀಸ್ ಆಗಿ ಸೋತಿವೆ. ಅವರು ‘ಸ್ತ್ರೀ 2’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ‘ಸ್ತ್ರೀ 3’ ಚಿತ್ರದಲ್ಲಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅವರು ‘ಸಿಂಗಂ ಅಗೇನ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕಣ್ಣಪ್ಪ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:00 pm, Sat, 2 November 24